• Home
  • »
  • News
  • »
  • state
  • »
  • Bengaluru: 11 ನೇ ಶತಮಾನದ ದೇವಾಲಯದ ಮೂಲ ಪತ್ತೆ ಹಚ್ಚುತ್ತಿರುವ ಡಿಜಿಟೈಸ್ಡ್ ಶಾಸನಗಳು

Bengaluru: 11 ನೇ ಶತಮಾನದ ದೇವಾಲಯದ ಮೂಲ ಪತ್ತೆ ಹಚ್ಚುತ್ತಿರುವ ಡಿಜಿಟೈಸ್ಡ್ ಶಾಸನಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bengaluru: ಹಳೆಯ ಶಾಸನಗಳು ನಮ್ಮ ಪಾರಂಪರೆಯನ್ನು ಗುರುತಿಸುವಂತಹ ಕುರುಹುಗಳಾಗಿವೆ. ಹಲವಾರು ಶಾಸನಗಳು ಕಾಣೆಯಾಗಿವೆ ಎಂದು ಹೇಳಿದರೂ ತಪ್ಪಾಗಲಾರದು. ಅವುಗಳನ್ನು ಮತ್ತಷ್ಟು ಹೊರತೆಗೆಯಲು ಆವಿಷ್ಕಾರ ತಂಡವು ಸತತವಾಗಿ ಪ್ರಯತ್ನ ಪಡುತ್ತಲೇ ಇದೆ. ಇದರ ಜೊತೆಗೆ ಡಿಜಿಟೈಸ್ಡ್  ಪ್ರಕ್ರಿಯೆಯ ಮೂಲಕ ಹಳೆಯ ಶಾಸನಗಳ ಸಂಪೂರ್ಣ ವಿವರಗಳನ್ನು ಸಹ ಸಂಗ್ರಹ ಮಾಡಲಾಗುತ್ತಿದೆ.

ಮುಂದೆ ಓದಿ ...
  • Share this:

ಬೆಂಗಳೂರಿನ (Bengaluru)  ಸುತ್ತಮುತ್ತ ಹಳೆಯ ಶಾಸನಗಳು ದೊರಕಿವೆ. ಅವುಗಳನ್ನು ಮತ್ತಷ್ಟು ಹೊರತೆಗೆಯಲು ಆವಿಷ್ಕಾರ ತಂಡವು ಸತತವಾಗಿ ಪ್ರಯತ್ನ ಪಡುತ್ತಲೇ ಇದೆ. ಇದರ ಜೊತೆಗೆ ಡಿಜಿಟೈಸ್ಡ್ (Digitised)  ಪ್ರಕ್ರಿಯೆಯ ಮೂಲಕ ಹಳೆಯ ಶಾಸನಗಳ ಸಂಪೂರ್ಣ ವಿವರಗಳನ್ನು ಸಹ ಸಂಗ್ರಹ ಮಾಡಲಾಗುತ್ತಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಶಿಲಾ ಶಾಸನಗಳನ್ನು ಡಿಜಿಟಲ್ ಮ್ಯಾಪ್ (Digital Map) ಮಾಡುವ ಸಂರಕ್ಷಣಾ ಯೋಜನೆಯ ಸಂಶೋಧನೆಗಳು 11 ನೇ ಶತಮಾನದ ಸಿದ್ದೇಶ್ವರ ದೇವಾಲಯದ  (Siddheshwara Temple) ಆವಿಷ್ಕಾರಕ್ಕೆ ಕಾರಣವಾಗಿವೆ ಎಂದು ಯೋಜನೆಯ ಸಂಯೋಜಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಡಿಜಿಟೈಸ್‌ ಶಾಸನಗಳು


ಈ ಡಿಜಿಟೈಸ್‌ ಶಾಸನಗಳು ಎಂದ್ರೆ ಕಂಪ್ಯೂಟರ್‌ ಮೂಲಕ ಅವುಗಳ ಪೋಟೊಗಳು, ನಕ್ಷೆಗಳು, ಅಕ್ಷರಗಳು, ಧ್ವನಿಗಳು ಇವೆಲ್ಲವೂಗಳಿಗೂ ಡಿಜಿಟಲ್‌ ರೂಪ ಕೊಡುವುದನ್ನೆ ಡಿಜಿಟೈಸ್‌ ಅಥವಾ ಡಿಜಿಟಲೀಕರಣ ಎನ್ನುತ್ತಾರೆ. ಶಾಸನಗಳನ್ನು ಸ್ಕ್ಯಾನ್‌ ಮಾಡುವ ಮೂಲಕ ಅವುಗಳನ್ನು ಡಿಜಿಟೈಸ್ಡ್‌ ಮಾಡಲಾಗುತ್ತದೆ.


ಎಲ್ಲೆಲ್ಲಿ ಯಾವೆಲ್ಲ ಶಾಸನಗಳು ಸಿಕ್ಕಿವೆ?


ಮಿಥಿಕ್ ಸೊಸೈಟಿ ಬೆಂಗಳೂರು ಇನ್‌ಸ್ಕ್ರಿಪ್ಷನ್ಸ್ 3ಡಿ ಡಿಜಿಟಲ್ ಕನ್ಸರ್ವೇಶನ್ ಪ್ರಾಜೆಕ್ಟ್ ತಂಡವು ಹೆಸರಘಟ್ಟದ ಕುಂಬಾರಹಳ್ಳಿ ಗ್ರಾಮದಲ್ಲಿ ದೊರೆತ ಎರಡು ಶಾಸನಗಳ ಮೂಲಕ ದೇವಾಲಯವನ್ನು ಗುರುತಿಸಲು ಪ್ರದೇಶದ ಇತರ ದಾಖಲಿತ ಶಾಸನಗಳಿಗೆ ಟ್ಯಾಗ್ ಮಾಡಿದೆ.


1033 CE ದಿನಾಂಕದ ಈ ಎರಡು ಶಾಸನಗಳು ಕುಂಬಾರಹಳ್ಳಿಯ ತೋಪಿನಲ್ಲಿ ಕಲ್ಲುಗಳ ಮೇಲೆ ಕಂಡುಬಂದಿವೆ. ಆ ಶಾಸನಗಳು - ಒಂದು ಕನ್ನಡದಲ್ಲಿ ಮತ್ತು ಇನ್ನೊಂದು ತಮಿಳು ಭಾಷೆಯಲ್ಲಿ ಇರುವುದು ವಿಶೇಷ.


ಇದನ್ನೂ ಓದಿ: ಮಂಗಳಮುಖಿಯರಿಗೆ ಮುತ್ತೈದೆಯ ಗೌರವ; ವಿಜಯಪುರದಲ್ಲಿ ವಿಶೇಷ ಕಾರ್ಯಕ್ರಮ


"ದೇವರು ಶ್ರೀ ಸಿದ್ದೇಶ್ವರನ ಭೂಮಿಯ ಗಡಿ" (ಶ್ರೀ ಸಿದ್ದೇಶ್ವರ ದೇವರ ಭೂಮಿಯ ಸಿಮೆ), ರಾಜ ರಾಜೇಂದ್ರ ಚೋಳ 1 ಅವರನ್ನು, ವಾಮನಯ್ಯ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬರು ಸಿದ್ದೇಶ್ವರನಿಗೆ ಭೂಮಿಯನ್ನು ದಾನ ಮಾಡಲು ಮೌಖಿಕ ಅನುಮೋದನೆಯನ್ನು ಕೋರಿದರು. ರಾಜನು ಆತನ ಮನವಿಯನ್ನು ಸ್ವೀಕರಿಸಿ ಆದೇಶ ಹೊರಡಿಸಿದನು" ಎಂದು ಬರೆದಿರುವುದನ್ನು ಗಮನಿಸಬಹುದಾಗಿದೆ.


ಐವರ್ ಕಂದಪುರದ ವೇಣು ಗೋಪಾಲಸ್ವಾಮಿ ದೇವಾಲಯದ ನೆಲಮಾಳಿಗೆಯಲ್ಲಿ ಕಂಡುಬಂದ ತಮಿಳು ಭಾಷೆಯಲ್ಲಿ 1033 CE ಶಾಸನವು ದಾನ ಮಾಡಿದ ಭೂಮಿಯನ್ನು ಶಾಸನದೊಂದಿಗೆ ಗುರುತಿಸಲು ವಾಮನಯ್ಯನ ಸೂಚನೆಗಳನ್ನು ತಿಳಿಸುತ್ತದೆ. ಈ ಸಂದರ್ಭದಲ್ಲಿ ಯೋಜನೆಯ ಗೌರವ ನಿರ್ದೇಶಕ ಉದಯಕುಮಾರ್ ಪಿಎಲ್ ಮಾತನಾಡಿ, “ಇತಿಹಾಸದ ಅವಧಿಯಲ್ಲಿ, ದೇವಾಲಯದ ನಿರ್ಮಾಣ ಕೆಲಸಗಳು ಬಾಕಿ ಉಳಿದಿದ್ದಾಗ, ದೇವರು ಬದಲಾಗಿರುವ ಸಾಧ್ಯತೆಯಿದೆ” ಎಂದು ಹೇಳಿದರು.


ಉದಯಕುಮಾರ್ ಅವರು ಮಧುಸೂಧನ ಎಂ.ಎನ್ , ಶಶಿಕುಮಾರ ನಾಯಕ್ ಕೆ .ಸಿ. ಮತ್ತು ಯುವರಾಜು ಆರ್ ಅವರೊಂದಿಗೆ ಬಹು ಹಂತದ ಸಂರಕ್ಷಣಾ ಯೋಜನೆಯಲ್ಲಿ ಶಾಸನಗಳನ್ನು ದಾಖಲಿಸುವ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.


"ವೇಣು ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಶಾಸನ ಇರುವ ಮೂಲ ದೇವಾಲಯದ ರಚನೆಯು ಯಥಾಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳೆದ ತಿಂಗಳು ಸಾರ್ವಜನಿಕರಿಗೆ ಗೋಚರಿಸುವ ಶಾಸನವನ್ನು ನಾವು ಉತ್ಖನನ ಮಾಡಿದ್ದೇವೆ. ಈ ಎಲ್ಲಾ ಸಂಶೋಧನೆಗಳನ್ನು ಒಟ್ಟುಗೂಡಿಸಿ, ಈಗ ನಮ್ಮಲ್ಲಿ ಭೂ ಗುರುತು, ಭೂಮಿ ದಾನಿಗಳ ಘೋಷಣೆ ಮತ್ತು ದೇವಸ್ಥಾನದ ಅರ್ಚಕರು ಭೂಮಿಯನ್ನು ದೇಣಿಗೆಯಾಗಿ ಸ್ವೀಕರಿಸುವ ಶಾಸನಗಳು, ಇವುಗಳೆಲ್ಲವೂ ದೇವಾಲಯದ ವಿಂಟೇಜ್ ಅನ್ನು ಮೌಲ್ಯೀಕರಿಸುತ್ತವೆ”ಎಂದು ಉದಯಕುಮಾರ್ ಡೆಕನ್‌ ಹೆರಾಲ್ಡ್‌ ಮಾಧ್ಯಮಕ್ಕೆ ತಿಳಿಸಿದರು.


Digitised inscriptions unearth origins of 11th-century temple, The boundary of god sri Siddeshwara land, Digitalization, Kannada News, Karnataka News, ಹಳೆಯ ಶಿಲಾನ್ಯಾಸನ ಡಿಜಿಟೈಸ್ಡ್, 11 ನೇ ಶತಮಾನದ ಸಿದ್ದೇಶ್ವರ ದೇವಾಲಯದ  ಆವಿಷ್ಕಾರ, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್


ಸಂಶೋಧನೆ ತಂಡದ ಪ್ರಕಾರ “ಕುಂಬಾರಹಳ್ಳಿಯಲ್ಲಿರುವ ತಮಿಳು ಶಾಸನದಲ್ಲಿ ಚೋಳಿಸಂಪುರಸಾಯಿಯನ್ನು ಸಿದ್ದೇಶ್ವರ ದೇವಾಲಯದ ಸ್ಥಳವೆಂದು ಉಲ್ಲೇಖಿಸಲಾಗಿದೆ. ಈಗ ಗುರುತಿಸಲು ಸಾಧ್ಯವಾಗದಿದ್ದರೂ, ಆಲೂರು ಮತ್ತು ಐವರ್ ಕಂದಾಪುರದ ಶಾಸನಗಳಲ್ಲಿ ಈ ಸ್ಥಳವನ್ನು ಕೊಲಿಯಂಬುರ್ಚ್ಚೆ ಮತ್ತು ಕೋಲಿಸಂಬುಚ್ಚೈ ಎಂದು ಉಲ್ಲೇಖಿಸಲಾಗಿದೆ” ಎಂದು ತಂಡವು ಅಭಿಪ್ರಾಯಪಟ್ಟಿದೆ.


ಮಿಥಿಕ್ ಸೊಸೈಟಿ ಬೆಂಗಳೂರು


ಬೆಂಗಳೂರು ಮೂಲದ ಮಿಥಿಕ್ ಸೊಸೈಟಿಯು ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಶಿಲಾ ಶಾಸನಗಳನ್ನು ಸಂರಕ್ಷಿಸುವ ನಿರಂತರ ಕೆಲಸ ನಿರ್ವಹಿಸುವ ತಂಡವಾಗಿದೆ. ಈ ತಂಡವು ವ್ಯಾಪ್ತಿಯ ಪ್ರದೇಶಗಳಿಂದ ಇದುವರೆಗೆ 90 ಕ್ಕೂ ಹೆಚ್ಚು ಅಪ್ರಕಟಿತ ಶಾಸನಗಳನ್ನು ಕಂಡುಹಿಡಿದಿದೆ.


ಇದನ್ನೂ ಓದಿ: ಒಂದೇ ಮಳೆಗೆ ಮಾಯವಾಯ್ತು 30 ಕೋಟಿ ವೆಚ್ಚದ ರಸ್ತೆ; ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ


"ಹೆಚ್ಚಿನ ದಾಖಲಿತ ಶಾಸನಗಳು ದೇವಾಲಯಗಳು ಮತ್ತು ಸರೋವರಗಳ ನಿರ್ಮಾಣಕ್ಕಾಗಿ ಭೂಮಿಯನ್ನು ದಾನ ಮಾಡಿದವು ಮತ್ತು ವೀರಗಲ್ಲುಗಳ ಮೇಲೆ ಹುತಾತ್ಮರಾದವರನ್ನು ಪೂಜೆ ಮಾಡಲಾಗುತ್ತದೆ. ಇದು ಗಮನಾರ್ಹವಾದ ಉಪಕ್ರಮವಾಗಿದೆ, ಏಕೆಂದರೆ ಇದು ಸಂಪೂರ್ಣ ಪ್ರದೇಶಗಳ ವಿವರಗಳನ್ನು ಒಳಗೊಂಡಿರುತ್ತದೆ. ಈಗೀಗ ಸಂಶೋಧನೆಗಳ ಸಂಖ್ಯೆ ಹೆಚ್ಚಾಗಿದೆ ” ಎಂದು ಉದಯಕುಮಾರ್ ಹೇಳಿದರು.


ಯೋಜನೆಯ ಸಂಶೋಧನೆಗಳು ಚಿಕ್ಕಬಾಣಾವರ, ಯಲಹಂಕ, ಅಂಜನಾಪುರ, ದೊಮ್ಮಲೂರು ಮತ್ತು ಬನ್ನೇರುಘಟ್ಟ ಸೇರಿದಂತೆ ವಿವಿಧ ಪ್ರದೇಶಗಳಾಗಿವೆ. ದೊಮ್ಮಲೂರು ಚೊಕ್ಕನಾಥಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದ ಏಳು ಶಾಸನಗಳನ್ನು 1301 CE ಸಮಯದ್ದೆಂದು ಗುರುತಿಸಲಾಗಿದೆ.


ಹೊಯ್ಸಳ ರಾಜ ವೀರ ಬಲ್ಲಾಳನು ಬೆಂಗಳೂರು-ಕೋಲಾರ ಪ್ರದೇಶದ ದೇವಾಲಯಗಳಲ್ಲಿ ಪ್ರಮಾಣಿತ ಶಾಸನಗಳನ್ನು ಕೆತ್ತಲು ಆದೇಶಿಸಿದನು. ಯಲಹಂಕದಲ್ಲಿ, 1440 CE ಕನ್ನಡ ಶಾಸನವು ಹನುಮಂತ ದೇವಸ್ಥಾನಕ್ಕಾಗಿ ಕಂಬವನ್ನು ನಿರ್ಮಿಸುವ ವ್ಯಾಪಾರಿಯಕುರಿತು ದಾಖಲಾತಿ ವಿವರಗಳನ್ನು ಹೊಂದಿದೆ.


ಶಾಸನಗಳನ್ನು ಹೇಗೆ ಡಿಜಿಟೈಸ್ಡ್‌ ಮಾಡಲಾಗುತ್ತದೆ?


ಈ ತಂಡವು ಶಾಸನಗಳನ್ನು ಸ್ಕ್ಯಾನ್ ಮಾಡಲು ಕೈಯಲ್ಲಿ ಹಿಡಿಯುವ ಡಿಜಿಟಲ್ ಸ್ಕ್ಯಾನರ್‌ಗಳನ್ನು ಬಳಸುತ್ತದೆ. ನಂತರ, ಅವುಗಳ 3D ಮಾದರಿಗಳನ್ನು ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಸಾಫ್ಟ್‌ವೇರ್ ಸಹಾಯದಿಂದ ವರ್ಧಿತ ಗುಣಮಟ್ಟದಲ್ಲಿ ಶಾಸನಗಳ ಚಿತ್ರಗಳನ್ನು ಹೊರತರುತ್ತದೆ. ಈ ಮಾದರಿಗಳನ್ನು ಅಧ್ಯಯನಕ್ಕಾಗಿ ಮತ್ತು ನಿಖರವಾದ ಭೌತಿಕ ಪ್ರತಿಕೃತಿಗಳನ್ನು ರಚಿಸಲು ಸಹ ಬಳಸಬಹುದು.

First published: