ಇನ್ನು 15 ದಿನಗಳವರೆಗೆ ಮಾತ್ರ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆಗೆ ರಿಯಾಯಿತಿ!

news18
Updated:August 12, 2018, 12:39 PM IST
ಇನ್ನು 15 ದಿನಗಳವರೆಗೆ ಮಾತ್ರ ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆಗೆ ರಿಯಾಯಿತಿ!
ಸೀರೆ ಮಳಿಗೆ
news18
Updated: August 12, 2018, 12:39 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಆ. 12) : ಈ ಬಾರಿ ವರಮಹಾಲಕ್ಷ್ಮೀ ಹಬ್ಬದಲ್ಲಿ ಮಹಿಳೆಯರಿಗೆ ಡಬಲ್​ ಧಮಾಕ ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಇದೇ ಉದ್ದೇಶದಿಂದ ಕರ್ನಾಟಕ ಸರ್ಕಾರದ ಹೆಗ್ಗುರುತಾದ ಮೈಸೂರ್​ ಸಿಲ್ಕ್​ ಸೀರೆಯನ್ನು ಕೇವಲ 4.500 ಬೆಲೆಗೆ ನೀಡಲು ಸರ್ಕಾರ ನಿರ್ಧಾರ ಮಾಡಿದೆ.

ಕರ್ನಾಟಕ ರೇಷ್ಮೆ ಉದ್ಯಮ ನಿಗಮದಿಂದ ತಯಾರಾಗುವ ಈ ಮೈಸೂರು ಸಿಲ್ಕ್​ ಸೇರೆ ಮೈಸೂರಿನ ಹೆಗ್ಗರುತಾಗಿದ್ದು ಅದಕ್ಕಾಗಿ ಸರ್ಕಾರ ಪೆಟೆಂಟ್​ ಅನ್ನು ಪಡೆದಿದೆ. ಇದೇ ಕಾರಣದಿಂದ ಸರ್ಕಾರಿ ಮಳಿಗೆ ಹೊರತು ಪಡಿಸಿದರೆ, ಅಪ್ಪರ ಮೈಸೂರು ಸಿಲ್ಕ್​ ಸೀರೆ ಬೇರೆಯಲ್ಲಿಯೂ ಸಿಗುವುದಿಲ್ಲ.

ಯಾಕೆ ಕಡಿಮೆ ದರದಲ್ಲಿ ಮಾರಾಟ?

ಅಲ್ಲದೇ ಮೈಸೂರು ಸಿಲ್ಕ್​ ಸೀರೆ ಬೇರೆ ಎಲ್ಲಾ ರೇಷ್ಮೆ ಸೀರಿಗೆ ಹೋಲಿಸಿದರೆ ಕೊಂಚ ದುಬಾರಿ ಹಾಗೂ ಉತ್ಕೃಷ್ಟ ಮಟ್ಟವನ್ನು ಹೊಂದಿದೆ.  ಈ ಹಿನ್ನಲೆಯಲ್ಲಿ ಈ ಸೀರೆ ಕೊಳ್ಳಲು ಮಧ್ಯಮ ವರ್ಗದವರು ಹಿಂದೇಟು ಹಾಕುವುದುಂಟು. ಈ ಹಿನ್ನಲೆಯಲ್ಲಿ ನಿಗಮ ಎಲ್ಲ ವರ್ಗದ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಿದೆ.

ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಈ ಮೈಸೂರು ಸಿಲ್ಕ್​ ಸೀರೆ ಮಾರುಕಟ್ಟೆ ಕೂಡ ಇನ್ನು ವಿಸ್ತರಿಸಿ ನಿಗಮಕ್ಕೆ ಲಾಭಾವಾಗಬಹುದು ಎಂಬ ಉದ್ದೇಶವನ್ನು ಕೂಡ ಇದು ಹೊಂದಿದೆ.

ಅಧಿಕೃತ ಮಳಿಗೆಯಲ್ಲಿಯೇ ಕೊಳ್ಳಿ
Loading...

ಮೈಸೂರು ಸಿಲ್ಕ್​ ಸೀರೆ ಕೊಳ್ಳುವುದಾದರೆ ಅಧಿಕೃತ ಮಳಿಗೆಯಿಂದ ಕೊಳ್ಳುವುದು ಉತ್ತಮ. ಖಾಸಗಿ ಮಳಿಗೆಯಲ್ಲಿ ಸಿಕ್ಕರೂ ಅದು ನಿಜವಾದ ಮೈಸೂರು ಸಿಲ್ಕ್​ ಸೀರೆಯಲ್ಲ ಎಂದು ಈಗಾಗಲೇ ರೇಷ್ಮೆ ಸಚಿವ ಸಾ.ರಾ ಮಹೇಶ್​ ತಿಳಿಸಿದ್ದಾರೆ.

ವರಮಹಾಲಕ್ಷ್ಮೀಗೆ ಯಾಕೆ

ಮಹಿಳೆಯರ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಒಂದಾದ ವರಮಹಾಲಕ್ಷ್ಮೀ ಹಬ್ಬ. ಶ್ರಾವಣ ಮಾಸದ ಮೊದಲ ಹಬ್ಬ ಕೂಡ ಇದಾಗಿದ್ದು, ಈ ಸಂದರ್ಭದಲ್ಲಿ ಮಹಿಳೆಯರು ಚಿನ್ನ, ಸೀರೆ ಕೊಳ್ಳುವುದು ಮಾಮೂಲು. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಹಬ್ಬದಂದು ಈ ರಿಯಾಯತಿ ನೀಡಿದೆ. ಈ ಮೂಲಕ ಮಧ್ಯಮ ವರ್ಗದ ಮಹಿಳೆಯರು ಈ ಮೂಲಕ ದುಬಾರಿ ಬೆಲೆಯ ಸೀರೆಯನ್ನು ಕಡಿಮೆ ಬೆಲೆಯಲ್ಲಿ ಪಡೆದು ಬೀಗಬಹುದು. ವರಮಹಾಲಕ್ಷ್ಮೀ ಹಬ್ಬದವರೆಗೆ ಈ ರಿಯಾಯಿತಿ ಇರಲಿದ್ದು, ಅಲ್ಲಿವರೆಗೂ ಮಹಿಳೆಯರಿಗೆ ಈ ಅವಕಾಶವಿದೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...