Online Class: ಒಂಟಿಯಾಗುತ್ತಿದ್ದಾರಾ ವಿಶೇಷ ಚೇತನ ಮಕ್ಕಳು? ಇಲ್ಲಿದೆ ಆತಂಕಕಾರಿ ಮಾಹಿತಿ

ಕೋವಿಡ್ ಬಂದ ಮೇಲೆ ಮಕ್ಕಳು ಶಾಲೆಯ ಮುಖವನ್ನೇ ಮರೆತು ಬಿಟ್ಟಿದ್ದಾರೆ. ಇತ್ತ ಆನ್ ಲೈನ್ ಕ್ಲಾಸ್‌ನಲ್ಲಾದರೂ ಕಲಿಯುತ್ತಾರಾ? ಅದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. ಅದರಲ್ಲೂ ವಿಶೇಷ ಚೇತನ ಮಕ್ಕಳಂತೂ ಆನ್ ಲೈನ್ ಕ್ಲಾಸ್‌ನಿಂದ ತೊಂದರೆಗೆ ಸಿಲುಕಿದ್ದಾರಂತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾಮಾರಿ ಕೊರೊನಾ (Corona) ಬಂದಾಗಿನಿಂದ ಮಕ್ಕಳ ಶಿಕ್ಷಣದ (Education) ಚಿತ್ರಣವೇ ಬದಲಾಗಿ ಹೋಗಿದೆ. ಮಕ್ಕಳು ಶಾಲೆಗೆ ಹೋಗದೇ ವರುಷಗಳೇ ಉರುಳಿ ಹೋಯಿತು. ಬಹುಸಂಖ್ಯಾತ ವಿದ್ಯಾರ್ಥಿಗಳು ಆನ್ಲೈನ್ ತರಗತಿಯನ್ನು (Online Class) ಅಟೆಂಡ್ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ ಕುಂಠಿತವಾಗಬಾರದೆಂದು ಆಯಾ ಶಾಲೆಗಳು (School) ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಮೂಲಕ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಮಕ್ಕಳು ತಾಸು ಗಟ್ಟಲೇ ಕಂಪ್ಯೂಟರ್ (Computer) ಮುಂದೆ ಕೂತು ಪಾಠ ಕೇಳುತ್ತಿದ್ದಾರೆ. ಈ ಆನ್‌ಲೈನ್ ಕ್ಲಾಸ್ ವಿದ್ಯಾರ್ಥಿಗಳ (Students) ಮೇಲೆ ತುಂಬಾ ಮಾರಕವಾಗಿದೆ ಎಂಬ ಕೂಗು ಈಗಾಗ್ಲೆ ಕೇಳುತ್ತಿದೆ. ಆದರೆ ಸ್ಪೆಷಲ್ ಕೇರ್ (Special Care) ಬೇಕಿರುವ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಗೊತ್ತಾ..?  ಈ ಬಗ್ಗೆ ಇಲ್ಲಿದೆ ಆತಂಕಕಾರಿ ವರದಿ

ವಿಶೇಷ ಚೇತನ ಮಕ್ಕಳ ಮೇಲೆ ಎಫೆಕ್ಟ್

ಸಾಮಾನ್ಯ ಮಕ್ಕಳಿಗಿಂತ ಈ ವಿಶೇಷ ಅಗತ್ಯವಿರುವ ಮಕ್ಕಳು ಸ್ವಲ್ಪ ವಿಶೇಷವಾಗಿ ನಿಲ್ಲುತ್ತಾರೆ. ಇವರಿಗೆ ವಿಶೇಷವಾದ ಕಾಳಜಿ ಸಹ ಬೇಕು. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಹೊರಗಿನ ಜಗತ್ತಿನ ಪರಿಚಯವಾಗಬೇಕು. ಆದರೆ ಸ್ವಚ್ಚವಾಗಿ ಹಾರಾಡಲು ಈ ಮಕ್ಕಳಿಗೆ ಕೊರೋನಾ ಅಡ್ಡಗಾಲು ಹಾಕಿದೆ.

ವಿಶೇಷ ಅಗತ್ಯವಿರುವ ಮಕ್ಕಳ ಮೇಲೆ ಆನ್‌ಲೈನ್ ಕ್ಲಾಸ್ ಎಫೆಕ್ಟ್

ಮನುಷ್ಯರ ಸಂಪರ್ಕ

ಸಹಜವಾಗಿಯೇ ಈ ಮಕ್ಕಳಿಗೆ ಮನುಷ್ಯರ ಸಂಪರ್ಕ ಅತ್ಯಗತ್ಯ. ವಿಶೇಷ ಅಗತ್ಯತೆಯಿರುವ ಮಕ್ಕಳು ತುಂಬಾ ಸ್ಪರ್ಶಶೀಲರಾಗಿರುತ್ತಾರೆ ಮತ್ತು ಸ್ಪರ್ಶದಿಂದ ಚೆನ್ನಾಗಿ ಕೆಲಸ ಮಾಡುತ್ತಾರೆ. (ಸಹಜವಾಗಿ ಸಾಮಾಜಿಕವಾಗಿ ಸುರಕ್ಷಿತವಾಗಿದ್ದಾಗ) ಮತ್ತು ಅಭಿವ್ಯಕ್ತಿಗಳಾಗಿರುತ್ತಾರೆ. ಅವರು ಜನರ ಮುಖಭಾವಗಳಿಂದಲೇ ಹೆಚ್ಚು ತಿಳಿದುಕೊಳ್ಳುತ್ತಾರೆ. ಆದರೆ ಆನ್‌ಲೈನ್ ಕ್ಲಾಸ್ ಇವನ್ನೆಲ್ಲಾ ಅವರಿಂದ ಕಿತ್ತುಕೊಂಡಿದೆ. ಈ ವಿಶೇಷ ಅಗತ್ಯತೆಯಿರುವ ಮಕ್ಕಳು ಮನುಷ್ಯರ ಸಂಪರ್ಕವೇ ಇಲ್ಲದೆ ಕಂಪ್ಯೂಟರ್ ಪರದೆಯ ಎದುರು ಕಷ್ಟಪಡುತ್ತಿದ್ದಾರೆ.

ಇದನ್ನೂ ಓದಿ: Parenting: ಮಕ್ಕಳನ್ನು ಹೇಗೆ ಬೆಳೆಸೋದು? ಉತ್ತಮ ಪೋಷಕರಾಗಲು ಏನ್ ಮಾಡ್ಬೇಕು ಗೊತ್ತಾ? ಈ ಟಿಪ್ಸ್ ಫಾಲೋ ಮಾಡಿ

ಸಾಮಾಜಿಕ ಸಂವಹನದ ಕೊರತೆ

ವಿಶೇಷ ಅಗತ್ಯವಿರುವ ಮಕ್ಕಳಿಗೆ ಇದು ತುಂಬಾ ಸವಾಲಾಗಿದೆ. ದೈಹಿಕವಾಗಿ ಅವರಿಗೆ ಇರುವ ಅಲ್ಪ ಅವಕಾಶದಲ್ಲಿ ಶಾಲೆಯ ಸುಖವನ್ನು ಅನುಭವಿಸುತ್ತಿದ್ದರು. ಆದರೆ ಈಗ ಆನ್‌ಲೈನ್‌ನಲ್ಲಿ ತರಗತಿಗಳಿಂದಾಗಿ ಏನೂ ಇಲ್ಲದಂತಾಗಿದೆ. ಸಾಮಾಜಿಕವಾಗಿ ಎಲ್ಲರೊಟ್ಟಿಗೆ ಬೆರೆಯಲು ಆಗದೇ ಒಂಟಿಯಾಗಿದ್ದಾರೆ. ಸಾಮಾಜಿಕ ಸಂವಹನ ಮಾಡದೇ ಕಂಪ್ಯೂಟರ್ ಮುಂದೆ ಕಾಲ ಕಳೆಯುತ್ತಾ ಮೂಖರಾಗಿ ಬಿಟ್ಟಿದ್ದಾರೆ.

ಗೆಳೆಯರ ಭೇಟಿಗಿಲ್ಲ ಅವಕಾಶ

ಮಕ್ಕಳು ತಮ್ಮ ಗೆಳೆಯರಿಂದ ಬಹಳಷ್ಟು ಕಲಿಯುತ್ತಾರೆ. ಕೆಲವು ವಿಚಾರಗಳ ಬಗ್ಗೆ ವಿಶೇಷ ಅಗತ್ಯವುಳ್ಳ ಮಗುವಿಗೆ ಅರಿವಿಲ್ಲದಿದ್ದಾಗ ಅವರು ತಮ್ಮ ಸಹಪಾಠಿಗಳನ್ನು ನೋಡಿ ಕಲಿಯುತ್ತಿದ್ದರು. ಮತ್ತು ಗೆಳೆಯರನ್ನು ಅನುಕರಣೆ ಮಾಡುತ್ತಿದ್ದರು. ಇದು ಅಂಥ ಮಕ್ಕಳ ಬೆಳವಣಿಗೆಗೆ ಸಹಾಕಯಕವಾಗಿತ್ತು. ಆದರೆ ಈಗ ಗೆಳೆಯರ ಸಂಪರ್ಕವೇ ಇಲ್ಲದಂತಾಗಿದೆ. ಮತ್ತದೇ ಕಂಪ್ಯೂಟರ್ ಮುಂದೇ ರೋಬೋಟ್‌ಗಳಾಗಿ ಬಿಟ್ಟಿದ್ದಾರೆ.

ದಿನಚರಿಯಲ್ಲಿ ಬದಲಾವಣೆ

ವಿಶೇಷ ಅಗತ್ಯವಿರುವ ಮಕ್ಕಳು ದಿನಚರಿಗೆ ಬದ್ಧರಾಗಿರುತ್ತಾರೆ ಮತ್ತು ಅಭಿವೃದ್ಧಿ ಹೊಂದುತ್ತಾರೆ. ಆನ್‌ಲೈನ್ ಶಾಲೆಯೊಂದಿಗೆ, ಇದು ಅಸಾಧ್ಯವಾಗಿದೆ.

ಇದನ್ನೂ ಓದಿ: Research: ಬಡ ಮಕ್ಕಳಿಗಿಂತ Rich ಫ್ಯಾಮಿಲಿಯಲ್ಲಿ ಹುಟ್ಟಿದ ಮಕ್ಕಳೇ ಹೆಚ್ಚು ಚುರುಕಂತೆ!

ಬಗೆಹರಿಯದ ಗೊಂದಲಗಳು
ಆನ್‌ಲೈನ್ ಕ್ಲಾಸ್‌ನಿಂದ ಪಾಠದ ಬಗೆಗಿನ ಸಂದೇಹಗಳು ಹೆಚ್ಚಾಗುತ್ತಿವೆ. ಈ ಸಂದೇಹ ಬಂದಾಗಲೆಲ್ಲಾ ಮಕ್ಕಳು ಟ್ಯಾಬ್, ಮೊಬೈಲ್‌ಗಳ ಮೊರೆ ಹೋಗುತ್ತಿದ್ದಾರೆ. ಡೌಟ್‌ಗಳನ್ನು ಬಗೆಹರಿಸುವ ಸಲುವಾಗಿ ಮೊಬೈಲ್‌ಗಳನ್ನು ನೋಡುತ್ತಿರುತ್ತಾರೆ.

ಏಕಾಂಗಿ ಮನೋಭಾವನೆ

ಮೊಬೈಲ್ ಮತ್ತು ಲ್ಯಾಪ್ಟಾಪ್‌ಗಳ ಸ್ಕ್ರೀನ್ ಟೈಮ್ ಹೆಚ್ಚಾಗಿರುವುದರಿಂದ ಒಂದು ರೀತಿಯ ಏಕಾಂಗಿ ಮನೋಭಾವನೆ ಉಂಟಾಗುತ್ತದೆ. ಇದು ಖಿನ್ನತೆಗೆ ಕಾರಣವಾಗಬಹುದು ಮತ್ತು ಕೆಲವು ಮಕ್ಕಳಲ್ಲಿ ಉಗುರು ಕಚ್ಚುವುದು, ಬೆರಳು ಚೀಪುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು. ಅಷ್ಟೇ ಅಲ್ಲದೇ ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ ಇನ್ನಷ್ಟುತೊಂದರೆ ಉಂಟಾಗಬಹುದು

ಈ ಆನ್‌ಲೈನ್‌ ತರಗತಿಗಳು ಶಾಶ್ವತ ವ್ಯವಸ್ಥೆ ಅಲ್ಲ. ಹೀಗಾಗಿ ಇಂಥ ಮಕ್ಕಳ ಮೇಲೆ ಒತ್ತಡ ಹಾಕದೇ ಅವರಿಗೆ ಇನ್ನಷ್ಟು ತಿಳಿದುಕೊಳ್ಳಲು ಪೋಷಕರು ಸಹಕರಿಸಬೇಕು. ಆನ್‌ಲೈನ್‌ ಕ್ಲಾಸ್ ಹೊರತಾಗಿ ಅವರಿಗೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.
Published by:Annappa Achari
First published: