ಶಿಕ್ಷಕನ ಬಾಳಿಗೆ ತೊಡಕಾಗಲಿಲ್ಲ ಅಂಗವೈಕಲ್ಯ; ಪ್ರತಿಭೆಯಿಂದಲೇ ಅಂತರಾಷ್ಟ್ರೀಯ ಮಟ್ಟಕ್ಕೇರಿದ ವಿಕಲಚೇತನ
news18
Updated:September 4, 2018, 5:48 PM IST
news18
Updated: September 4, 2018, 5:48 PM IST
-ರಾಘವೇಂದ್ರ ಗಂಜಾಮ್, ನ್ಯೂಸ್-18 ಕನ್ನಡ
ಮಂಡ್ಯ,(ಸೆ.04): ಆತ ಅಂಗವೈಕಲ್ಯದಿಂದ ಬಳಲುತ್ತಿರುವ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕ. ಕಾಲು ಸ್ವಾಧೀನಗೊಂಡರೂ ಜೀವನದಲ್ಲಿ ಸಾಧಿಸಬೇಕೆಂಬ ಛಲ ಇಂದು ಇವರನ್ನು ಅಂತರಾಷ್ಟ್ರೀಯ ಮಟ್ಟದ ಚಿತ್ರಕಲಾ ಶಿಕ್ಷಕನನ್ನಾಗಿ ಮಾಡಿದೆ. ಇವರ ಈ ಸಾಧನೆಯಿಂದ ಪ್ರೋತ್ಸಾಹಿತರಾದ ಈ ಸರ್ಕಾರಿ ಶಾಲೆಯ ಮಕ್ಕಳು ಚಿತ್ರಕಲೆಯಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಆಗಿದ್ದರೆ ಯಾರು ಆ ಚಿತ್ರಕಲಾ ಶಿಕ್ಷಕ ಅಂತೀರಾ? ಇಲ್ಲಿದೆ ವರದಿ.
ಜಯರಾಂ ಅಂಗವೈಕಲ್ಯ ಚಿತ್ರಕಲಾ ಶಿಕ್ಷಕ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಿಕ್ಕರೆ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ಇವರು ತಮ್ಮ ಚಿತ್ರಕಲೆಯ ಮೂಲಕವೇ ಇಂದು ಅಂತರಾಷ್ಟೀಯ ಮಟ್ಟದಲ್ಲಿ ತಮ್ಮ ಪ್ರತಿಭಾ ಪ್ರದರ್ಶನದ ಮೂಲಕ ಹೆಸರು ಗಳಿಸಿದ್ದಾರೆ. ಇವರು ಬಿಡಿಸಿರುವ ವಿವಿಧ ರೀತಿಯ ಚಿತ್ರಗಳು ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಣೆ ಮಾಡುತ್ತಿವೆ. ಜಲವರ್ಣ, ತೈಲವರ್ಣ ಸೇರಿದಂತೆ ವಿವಿಧ ಬಗೆಯ ಚಿತ್ರಕಲೆಯಲ್ಲಿ ಪ್ರವೀಣರಾಗಿರುವ ಜಯರಾಂ ಈ ಶಾಲೆಯಲ್ಲಿ ಅನೇಕ ವರ್ಷಗಳಿಂದ ಮಕ್ಕಳಿಗೆ ಚಿತ್ರಕಲೆ ಹೇಳಿ ಕೊಡುತ್ತಿದ್ದಾರೆ. ಈಗಾಗಲೇ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.
ಜಯರಾಂ ಕಡಿಮೆ ಖರ್ಚಿನ ಪರಿಕರಗಳ ಸಹಾಯದಿಂದ ಈ ಸರ್ಕಾರಿ ಶಾಲೆಯ ಮಕ್ಕಳನ್ನು ಉತ್ತಮ ಚಿತ್ರಕಾರರನ್ನಾಗಿಸಲು ಹೊರಟಿದ್ದಾರೆ. ಇವರ ಸಾಧನೆಗೆ ಶಾಲೆಯ ಶಿಕ್ಷಕರು ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಕೂಡ ಕೈ ಜೋಡಿಸಿದೆ. ತಮ್ಮ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಶಾಲೆಯ ಕೊಠಡಿಗೆ ಮತ್ತು ಹೊರಗಿನ ಗೋಡೆಗೆ ಹೊಸ ರೂಪವನ್ನೇ ಕೊಟ್ಟಿದ್ದಾರೆ. ಶಾಲೆಯ ಹೊರಗಿನ ಗೋಡೆಯನ್ನು ಕುಟೀರದ ರೀತಿ ಬಣ್ಣದಿಂದ ಅಲಂಕರಿಸಿದರೆ, ಇನ್ನು ಕೊಠಡಿಯಲ್ಲಿ ತಾವೇ ಬಿಡಿಸಿದ ವಿವಿಧ ಚಿತ್ರಪಟಗಳನ್ನು ನೇತುಹಾಕಿ ಅಲಂಕಾರ ಮಾಡಿದ್ದಾರೆ. ತಮ್ಮ ಚಿತ್ರಕಲಾ ಗುರುಗಳ ಮೂಲಕ ಉತ್ತಮ ಚಿತ್ರಕಾರರಾಗುವ ಭರವಸೆ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಚಿತ್ರಕಲೆ ಕಲಿಸುವ ತಮ್ಮ ಚಿತ್ರಕಲಾ ಗುರುಗಳ ಮಾರ್ಗದರ್ಶನದಲ್ಲಿ ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವತ್ತ ಸಾಗಿದ್ದಾರೆ.

ಒಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲೂ ಕೂಡ ಚಿತ್ರಕಲಾ ಶಿಕ್ಷಕರು ತಮ್ಮ ಚಿತ್ರಕಲೆಯ ಸೇವೆಯ ಮೂಲಕವೇ ವಿದ್ಯಾರ್ಥಿಗಳ ಸಾಧನೆಗೆ ಏಣಿಯಾಗುತ್ತಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳನ್ನು ಕಲೆಯಲ್ಲಿ ಸಾಧನೆ ಮಾಡಲು ಹುರಿದುಂಬಿಸುತ್ತಿರುವುದು ಮಾತ್ರ ಸುಳ್ಳಲ್ಲ.

Loading...