ಅಸಹಾಯಕ ಸ್ಥಿತಿ ಯಲ್ಲೂ ಹಾಕಿದ್ರು ಮತ : ವೀಲ್ ಚೆರ್ ನಲ್ಲೂ ಬಂದ್ರೂ ಸ್ಟ್ರೆಚರ್ ನಲ್ಲೂ ಕರ್ಕೊಬಂದ್ರು

news18
Updated:August 31, 2018, 9:06 PM IST
ಅಸಹಾಯಕ ಸ್ಥಿತಿ ಯಲ್ಲೂ ಹಾಕಿದ್ರು ಮತ : ವೀಲ್ ಚೆರ್ ನಲ್ಲೂ ಬಂದ್ರೂ ಸ್ಟ್ರೆಚರ್ ನಲ್ಲೂ ಕರ್ಕೊಬಂದ್ರು
news18
Updated: August 31, 2018, 9:06 PM IST
ಶಿವರಾಮ್ ಅಸುಂಡಿ/ ರಾಜೇಂದ್ರ ಸಿಂಗನಮನೆ, ನ್ಯೂಸ್ 18 ಕನ್ನಡ

- ಕಲಬುರ್ಗಿ/ ಶಿರಸಿ (ಆಗಸ್ಟ್ .31) : ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಲವೆಡೆ ವೀಲ್ ಚೇರ್ ವ್ಯವಸ್ಥೆ ಮಾಡದಿರುವ ಅಂಶ ಕಲಬುರ್ಗಿಯ ಹಲವೆಡೆ ಬೆಳಕಿಗೆ ಬಂದಿದೆ. ಜಿಲ್ಲೆಯ ಏಳು ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ಮತದಾನ ನಡೆಯಿತು.

ಬೆಳಿಗ್ಗೆ 7 ಗಂಟೆಯಿಂದಲೇ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದುದು ಕಂಡು ಬಂದಿತು. ಅದೇ ರೀತಿ ವಯೋ ವೃದ್ಧರಾದಿಯಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವ ಹುಮ್ಮಸ್ಸು ತೋರಿದರು.  ಆದರೆ ಕೆಲವೆಡೆ ವೀಲ್ ಚೇರ್ ವ್ಯವಸ್ಥೆ ಇಲ್ಲದೇ ಇದ್ದುದರಿಂದ ವೃದ್ಧರು ಮತ ಹಾಕಲು ಪರದಾಡುವಂತಾಯಿತು. ಚಿತ್ತಾಪುರ ಪಟ್ಟಣದಲ್ಲಿ ವೀಲ್ ಚೇರ್ ವ್ಯವಸ್ಥೆಯಾಗದ ಕಾರಣ 85 ವರ್ಷದ ವೃದ್ಧೆ ತಳ್ಳು ಗಾಡಿಯಲ್ಲಿ ಬಂದು ಮತ ಹಾಕುವಂತಾಯಿತು.

ಚಿತ್ತಾಪುರ ಪುರಸಭೆಯ 13ನೇ ವಾರ್ಡ್ ನಲ್ಲಿ ಈ ಘಟನೆ ನಡೆದಿದೆ. ವೀಲ್ ಚೇರ್ ಸಿಗದ ಪರಿಣಾಮ  85 ವರ್ಷದ ವೃದ್ಧೆಯನ್ನು ಆಕೆಯ ಮಗ ಮತ್ತು ಮೊಮ್ಮಗ ತಳ್ಳು ಗಾಡಿಯಲ್ಲಿ ಕೂಡಿಸಿಕೊಂಡು ಬಂದು ಮತದಾನ ಮಾಡಿಸಿದರು. ವೀಲ್ ಚೇರ್ ಸಿಗದೇ ಇದ್ದರೂ ತಳ್ಳು ಗಾಡಿಯಲ್ಲಿ ಬಂದು ಮತ ಹಾಕುವ ಮೂಲಕ ಅಜ್ಜಿ ತನ್ನ ಬದ್ಧತೆ ಮೆರೆದರು.

ಮತ್ತೊಂದೆಡೆ ವೀಲ್ ಚೇರ್ ವ್ಯವಸ್ಥೆ ಇಲ್ಲದೆ ಇದ್ದುದರಿಂದ ವೃದ್ಧೆಯೊಬ್ಬರು ಹರಸಾಹಸಪಟ್ಟು ನಡೆದುಕೊಂಡು ಮತ ಹಾಕಿದ ಘಟನೆ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಮತಗಟ್ಟೆ ಸಂಖ್ಯೆ 7 ರಲ್ಲಿ ಮತ ಹಾಕಲು 75 ವರ್ಷದ ವೃದ್ಧೆ ಬಂದಾಗ ವೀಲ್ ಚೇರ್ ವ್ಯವಸ್ಥೆಯಾಗಲಿಲ್ಲ. ಅನಿವಾರ್ಯವಾಗಿ ಸ್ಥೂಲಕಾಯದ ಅಜ್ಜಿ ಬೇರೆಯವರ ಸಹಾಯದಿಂದ ಹರಸಾಹಸಪಟ್ಟು ಮತದಾನ ಕೇಂದ್ರಕ್ಕೆ ಬರುವಂತಾಯಿತು.

ಶಿರಸಿಯಲ್ಲಿ ವಿಕಲಚೇತನ ಸಾಹಿತಿಯಿಂದ ಮತದಾನ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಸಭೆ 10ನೇ ವಾರ್ಡ್ ಶಾಸಕರ ಮಾದರಿ ಶಾಲೆ ನಂಬರ್ 2 ರ ಮತಕೇಂದ್ರದಲ್ಲಿ. ಹುಟ್ಟಿನಿಂದಲೇ ಅಸ್ತಿಯೋ ಜೆನೆಸಿಸ್ ಇನ್ಫರ್ಪೆಕ್ಟಾ ರೋಗದಿಂದ ಬಳಲುತ್ತಿರುವ  ವಿಕಲಚೇತನರಾಗಿರುವ ಸಾಹಿತಿ ರಮೇಶ ಹೆಗಡೆ 10ನೇ ವಾರ್ಡ್​ ಅಭ್ಯರ್ಥಿಗೆ ಮತ ಚಲಾಯಿಸಿದರು.
Loading...

ನಡೆದಾಡಲಾಗದ, ಸದಾ ಹಾಸಿಗೆಯಲ್ಲೇ ಇರುವ ರಮೇಶ ಅವ್ರು ಸ್ಟ್ರೆಚರ್ ಮೇಲೆ ಮಲಗಿಕೊಂಡು ವಾಹನದಲ್ಲಿ ಮತಗಟ್ಟೆಗೆ ಆಗಮಿಸಿದ್ರು. ಮತಕೇಂದ್ರದ ಸಿಬ್ಬಂದಿ ಅವರನ್ನು ಕೇಂದ್ರದೊಳಗೆ ಕರೆದೊಯ್ದು ಮತದಾನಕ್ಕೆ ಅನುಕೂಲ ಮಾಡಿದ್ರು. ರಮೇಶ ಜತೆ 80 ವರ್ಷದ ಅವರ ತಂದೆ ಕೂಡ ಆಗಮಿಸಿ ಮತ ಚಲಾಯಿಸಿದರು.

ಒಟ್ಟಾರೆ ಕೈಕಾಲು ಗಟ್ಟಿ ಇರೋ ಮತದಾರರು ಮನೆಯಲ್ಲೇ ಕುಳಿತರೆ ರಾಜ್ಯದ ಕೆಲವೆಡೆ ವಿಕಲಚೇತನರು ಮತ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದು ಮಾತ್ರ ವಿಶೇಷವಾಗಿತ್ತು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...