ಕೇಂದ್ರ ಗುಪ್ತದಳದ ನಿರ್ದೇಶಕ ರಾಜೀವ್ ಜೈನ್ ರಾಜ್ಯಕ್ಕೆ ಭೇಟಿ

news18
Updated:August 29, 2018, 12:02 PM IST
ಕೇಂದ್ರ ಗುಪ್ತದಳದ ನಿರ್ದೇಶಕ ರಾಜೀವ್ ಜೈನ್ ರಾಜ್ಯಕ್ಕೆ ಭೇಟಿ
news18
Updated: August 29, 2018, 12:02 PM IST
-ರಮೇಶ್​ ಹಿರೇಜಂಬೂರು,  ನ್ಯೂಸ್​ 18 ಕನ್ನಡ

ಬೆಂಗಳೂರು,(ಆ.29): ಕೇಂದ್ರ ಗುಪ್ತದಳದ ನಿರ್ದೇಶಕ ರಾಜೀವ್ ಜೈನ್ ಬುಧವಾರ ರಾಜ್ಯಕ್ಕೆ ಭೇಟಿ ನೀಡಿ ಗೃಹಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.

2 ನೇ ಬಾರಿ  ಗೃಹ ಸಚಿವರನ್ನು​ ಭೇಟಿ ಮಾಡಿರುವ ರಾಜೀವ್​ ಜೈನ್,​ ರಾಜ್ಯದ ಗುಪ್ತದಳದ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ವಿಧಾನ ಸೌಧಕ್ಕೆ ಬೆದರಿಕೆ ವಿಚಾರದ ಬಗ್ಗೆ ಗೃಹ ಸಚಿವರ ಜೊತೆಗೆ ಚರ್ಚೆ ನಡೆಸಲಾಗಿದೆ. ವಿಧಾನ ಸೌಧಕ್ಕೆ ಹೆಚ್ಚಿನ ಭದ್ರತೆ ಒದಗಿಸುವ ವಿಚಾರದ ಬಗ್ಗೆಯೂ ಚರ್ಚಿಸಲಾಗಿದೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಬಾಂಗ್ಲಾ ವಲಸಿಗರ ಹಾವಳಿ ಕುರಿತು ಚರ್ಚೆ ಮಾಡಲಾಗಿದೆ. ಅಷ್ಟೇ ಅಲ್ಲದೇ ವಲಸಿಗರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ವಲಸಿಗರನ್ನು ಸ್ವದೇಶಕ್ಕೆ ಮರಳಿ‌ಕಳುಹಿಸುವ ಬಗ್ಗೆ ಕೇಂದ್ರ ಗೃಹ ಇಲಾಖೆ ಸೂಚನೆ ಬಗ್ಗೆ ರಾಜೀವ್ ಜೈನ್ ಮಾಹಿತಿ ಹಂಚಿಕೊಂಡಿದ್ದಾರೆ.

ನಿರ್ದೇಶಕರ ರಾಜ್ಯ ಭೇಟಿ ಕುತೂಹಲ ಮೂಡಿಸಿದೆ.  ಆದರೆ‌ ಇದು ಸೌಜನ್ಯದ ಭೇಟಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಫ್.ಆರ್.ಆರ್.ಓ ನಿರ್ದೇಶಕ ಲಾಬೂರಾಮ್ ಕೂಡ ಭೇಟಿ ನೀಡಿದ್ದಾರೆ.

ಇತ್ತೀಚೆಗಷ್ಟೇ ವಿಧಾನಸೌಧಕ್ಕೆ ಉಗ್ರರಿಂದ ಬೆದರಿಕೆ ಇದೆ ಎಂಬ ಸ್ಫೋಟಕ ಮಾಹಿತಿಯೊಂದು ಕೇಂದ್ರದಿಂದ ಬಂದಿತ್ತು. ಗುಪ್ತದಳ ವಿಭಾಗವು ಭದ್ರತೆ ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಎಚ್ಚರಿಸಿತ್ತು. ಸೂಚನೆಯಿಂದ ಎಚ್ಚೆತ್ತುಕೊಂಡಿದ್ದ ಸರ್ಕಾರವು ಭದ್ರತೆ ಬಿಗಿಗೊಳಿಸುವ ಸಲುವಾಗಿ ಬ್ಲ್ಯಾಕ್​ ಕಮಾಂಡೋಗಳ ನೇಮಕ ಮಾಡಲು ತೀರ್ಮಾನಿಸಿತ್ತು. ಅಷ್ಟೇ ಅಲ್ಲದೇ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಹೀಗಾಗಿ ಪಾಸ್​ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು.

ಈ ಮೊದಲು ಸಿಎಂ ಕುಮಾರಸ್ವಾಮಿ  ಶಕ್ತಿ ಸೌಧಕ್ಕೆ ಬಿಗಿ ಭದ್ರತೆ ಒದಗಿಸಿ ಆದೇಶ ಹೊರಡಿಸಿದ್ದರು. ವಿಧಾನಸೌಧದ ಸುತ್ತ ಆಡಳಿತಾತ್ಮಕ ಕೆಲಸಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಸಿಎಂ ಮುಂದಾಗಿದ್ದರು. ಇದಕ್ಕಾಗಿ ಶಕ್ತಿ ಸೌಧಕ್ಕೆ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು. ವಿಧಾನಸೌಧ, ವಿಕಾಸಸೌಧ, ಉದ್ಯೋಗಸೌಧ, ಎಂ.ಎಸ್.ಬಿಲ್ಡಿಂಗ್, ಲೋಕಾಯುಕ್ತ ಕಚೇರಿ ಸುತ್ತಮುತ್ತ ಬಿಗಿ ಭದ್ರತೆಗೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಲು ಚಿತ್ತ ಹರಿಸಿತ್ತು.  ವಿಧಾನಸೌಧಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಉದ್ಯೋಗ ಸೌಧದ ಕಡೆ ಇರುವ ಖಾಲಿ ಜಾಗದಲ್ಲಿ ಪೊಲೀಸರ ಕಣ್ಗಾವಲಿನಲ್ಲಿ ಖಾಸಗಿ ವಾಹನಗಳಿಗೆ ಪಾರ್ಕಿಂಗ್​ ವ್ಯವಸ್ಥೆಗೆ ಮುಂದಾಗಿದ್ದರು.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ