news18-kannada Updated:September 5, 2020, 5:55 PM IST
ಇಂದ್ರಜಿತ್ ಲಂಕೇಶ್.
ಬೆಂಗಳೂರು(ಸೆ.05): ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾರ ಹೆಸರನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಸ್ತಾಪಿಸಿದ್ದರು. ಹೀಗಾಗಿ ಇಂದ್ರಜಿತ್ ಲಂಕೇಶ್ ವಿರುದ್ಧ ಹಲವರು ಬೇಸರ ವ್ಯಕ್ತಪಡಿಸಿದ್ದರು. ನಮ್ಮೊಂದಿಗೆ ಇಲ್ಲದ ವ್ಯಕ್ತಿಯ ಕುರಿತಾದ ತೇಜೋವಧೆ ಸರಿಯಲ್ಲ ಎಂದು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮತ್ತು ಸುದೀಪ್ ಸೇರಿದಂತೆ ಹಲವರು ವಿರೋಧಿಸಿದ್ದರು. ಇದಾದ ನಂತರ ತನ್ನ ಪತಿ ಚಿರಂಜೀವಿ ಸರ್ಜಾ ಬಗ್ಗೆ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆಯಾಚಿಸಬೇಕು ಎಂದು ನಟಿ ಮೇಘನಾ ರಾಜ್ ವಾಣಿಜ್ಯ ಮಂಡಳಿಗೆ ಬರೆದ ಪತ್ರದಿದ್ದರು. ಇದರ ಬೆನ್ನಲ್ಲೇ ವಾಣಿಜ್ಯ ಮಂಡಳಿ ಸದಸ್ಯರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್ ಚರಂಜೀವಿ ಸರ್ಜಾ ವಿಚಾರವಾಗಿ ಬಹಿರಂಗ ಕ್ಷಮೆಯಾಚಿಸಿದ್ದಾರೆ.
ಇಂದು ಫಿಲ್ಮ್ಂ ಚೇಂಬರ್ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಇಂದ್ರಜಿತ್ ಲಂಕೇಶ್, ನನ್ನಿಂದ ಚಿರು ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಈಗಾಗಲೇ ನನ್ನ ಹೇಳಿಕೆಯನ್ನು ನಾನು ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ ಮತ್ತು ತಮ್ಮ ಇದ್ದಂತೆ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದರು.
ಮೇಘನಾ ರಾಜ್ ಪತ್ರ ಬರೆದು ನೋವು ವ್ಯಕ್ತಪಡಿಸಿದ್ದಾರೆ. ಅವರ ತಂದೆ ತಾಯಿ ನನ್ನನ್ನ ಎತ್ತಿ ಆಡಿಸಿದ್ದಾರೆ. ಚಿರಂಜೀವಿ ನನಗೆ ಗೆಳೆಯನಂತೆ. ಅವರು ಆಕಸ್ಮಿಕ ಸಾವು ನಾನು ನೋವು ತಂದಿತ್ತು. ಆ ನೋವಿನಲ್ಲೇ ಅವರ ಪೋಸ್ಟ್ ಮಾರ್ಟಂ ಮಾಡ್ಬೋದಿತ್ತು ಅಂತ ಹೇಳಿದ್ದೇ. ಆ ಮಾತು ಅವರಿಗೆ ನೋವಾಗಿದೆ. ಈ ಮುನ್ನವೇ ನಾನು ನನ್ನ ಮಾತನ್ನ ವಾಪಸ್ ತಗಂಡಿದ್ದೇ. ಇದಕ್ಕೆ ವಿಷಾದ ವ್ಯಕ್ತಪಡಿಸ್ತೇನೆ ಅಂತೇಳಿದ್ದೇ. ಈಗ ಎಲ್ಲರ ಮುಂದೆ ಕ್ಷಮೆ ಕೇಳ್ತೇನೆ. ಕ್ಷಮೆ ಕೇಳೋದ್ರಿಂದ ಯಾರೂ ಚಿಕ್ಕೋರಾಗೋದಿಲ್ಲ ಎಂದರು.
ನಾನು ಚಿರಂಜೀವಿಗೂ ಡ್ರಗ್ ಮಾಫಿಯಾಗೂ ಲಿಂಕ್ ಮಾಡಿ ಮಾತನಾಡಿಲ್ಲ. ಪೋಸ್ಟ್ ಮಾರ್ಟಂ ಆಗಬೇಕಿತ್ತು ಅಂತೇಳಿದ್ದೇ. ಆ ಮಾತನ್ನ ನಾನೀಗ ವಾಪಸ್ ಪಡಿದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಕೇವಲ ಎರಡು ಸಾವಿರ ರೂಪಾಯಿಗೆ ವ್ಯಕ್ತಿಯ ಬರ್ಬರ ಹತ್ಯೆ - ಸ್ನೇಹಿತರಿಂದಲೇ ಅಮಾನುಷ ಕೃತ್ಯ
ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಯಿಂದ ನನಗೆ ನೋವಾಗಿದೆ. ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿ ನಟಿ ಮೃಘನಾ ರಾಜ್ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದರು.
Published by:
Ganesh Nachikethu
First published:
September 5, 2020, 5:53 PM IST