Dr CN Manjunath: ಜಯದೇವ ಆಸ್ಪತ್ರೆ ನಿರ್ದೇಶಕರಾಗಿ Dr ಮಂಜುನಾಥ್ ಮುಂದುವರೆಯಲಿ; ಸರ್ಕಾರಕ್ಕೆ ವೈದ್ಯರ ಪತ್ರ

ಡಾ.ಸಿ.ಎನ್. ಮಂಜುನಾಥ್ ಅವರು ತಮ್ಮ ವ್ಯಕ್ತಿತ್ವ, ಕೆಲಸ, ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ನಿರ್ದೇಶಕರು. ಅವರು ಜುಲೈ 19ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಜಯದೇವ ಆಸ್ಪತ್ರೆಯ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದೆ. ಡಾ. ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಮನವಿ ಮಾಡಿದ್ದಾರೆ.

ಡಾ.ಸಿ.ಎನ್. ಮಂಜುನಾಥ್

ಡಾ.ಸಿ.ಎನ್. ಮಂಜುನಾಥ್

  • Share this:
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ (Director) ಡಾ.ಸಿ.ಎನ್. ಮಂಜುನಾಥ್ (C N Manjunath) ಅವರು ತಮ್ಮ ವ್ಯಕ್ತಿತ್ವ, ಕೆಲಸ, ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳಿಂದ ಗುರುತಿಸಿಕೊಂಡಿರುವ ನೆಚ್ಚಿನ ನಿರ್ದೇಶಕರು. ಅವರು ಇದೇ ಅಂದ್ರೆ ಜುಲೈ 19ಕ್ಕೆ ನಿವೃತ್ತಿ (retire) ಹೊಂದಲಿದ್ದಾರೆ. ಅವರು ನಿವೃತ್ತಿಯಾಗುತ್ತಿರುವುದು  ಜಯದೇವ (Jayadeva) ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆಯಂತೆ. ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ (CM) ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಪತ್ರ ಬರೆದಿದೆ. ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ (Director) ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ 70 ವರ್ಷದ ವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಸಿಎಂಗೆ ಮನವಿ ಮಾಡಿದ ಪತ್ರದಲ್ಲಿ ಏನಿದೆ?

"ಶ್ರೀ ಜಯದೇವ ಹೃದ್ರೋಗವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಯಾದ ನಾವುಗಳು ಈ ಮೂಲಕ ಕೋರುವುದೇನೆಂದರೆ, ಪ್ರಸ್ತುತ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ರವರ ಸೇವೆಯು ದಿನಾಂಕ: 19-07-2022ಕ್ಕೆ ಅಂತಿಮಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಅಪಾರವಾದ ನೋವನ್ನುಂಟುಮಾಡಿದೆ. ನಮ್ಮ ನಿರ್ದೇಶಕರ ಕರುಣೆ, ಶಿಸ್ತು, ಆಪ್ಯಾಯತೆ, ಸೂಕ್ತ ನಿರ್ದೇಶನ, ಮಾರ್ಗದರ್ಶನ ಮುಂತಾದ ಉನ್ನತ ಗುಣಗಳನ್ನು ಮಾದರಿಯಾಗಿಟ್ಟುಕೊಂಡು ಮುನ್ನಡೆಯುತ್ತಿರುವ ಸಂಸ್ಥೆಯ ಸಿಬ್ಬಂದಿ ಹಾಗೂ ಲಕ್ಷಾಂತರ ಬಡ ಹೃದ್ರೋಗಿಗಳಿಗೆ ಈ ವಿಷಯವು ಅತ್ಯಂತ ಖೇದ್ಯವುಂಟುಮಾಡಿದೆ.

ಆದ್ದರಿಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ ಯಾವುದೇ ಸಂಸ್ಥೆಯ ಮುಖ್ಯಸ್ಠರು 70 ವರ್ಷಗಳವರೆಗೆ ಸೇವೆಯನ್ನು ನಿರ್ವಹಿಸಬಹುದು. ಅದರಂತೆ ಪ್ರಸ್ತುತ ಡಾ. ಸಿ.ಎನ್. ಮಂಜುನಾಥ್ ರವರಿಗೆ 65 ವರ್ಷ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತಷ್ಟು ವರ್ಷಗಳವರೆಗೆ ಆಡಳಿತ ನಿರ್ವಹಿಸುವ ನಾಯಕತ್ವ ಗುಣವಿರುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಅಧೋಗತಿಯಲ್ಲಿ ಮುಳುಗುತ್ತಿದ್ದ ಜಯದೇವ ಆಸ್ಪತ್ರೆಯನ್ನು ಕೈಹಿಡಿದೆತ್ತಿದ್ದಾರೆ ಎಂದು ಬರೆದಿದ್ದಾರೆ.

ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ ಎಷ್ಟಿರಬೇಕು ವಯಸ್ಸು?
'ಒಬ್ಬ ಶಿಕ್ಷಕ ಅಥವಾ ವೈದ್ಯಕೀಯ ಅಧೀಕ್ಷಕ ಅಥವಾ ಡೀನ್ ಅಥವಾ ಪ್ರಾಂಶುಪಾಲರು ಅಥವಾ ನಿರ್ದೇಶಕರ ಹುದ್ದೆಯ 2 ಬಾರಿ ನೇಮಕ ಅಥವಾ ವಿಸ್ತರಣೆಯನ್ನು ನೀಡಬಹುದು ಅಥವಾ ಸೇವೆಯಲ್ಲಿ ಮರು ನೇಮಕ ಮಾಡಬಹುದಾದ. ಗರಿಷ್ಠ ವಯಸ್ಸಿನ ಮಿತಿಯನ್ನು ಸಂದರ್ಭಾನುಸರದಂತೆ ಮುಂದುವರಿಸಲಾಗುತ್ತೆ. ರಾಷ್ಟ್ರೀಯ ವೈದ್ಯಕೀಯ ಕಾಲೇಜಿನ ನಿಯಮಗಳ ಪ್ರಕಾರ 70 ವರ್ಷಗಳು ವರೆಗೆ ಸೇವೆ ಸಲ್ಲಿಸಬಹುದು.'

ಇದನ್ನೂ ಓದಿ: Karnataka Government: ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ ಆದೇಶ ಹಿಂಪಡೆದ ಬೊಮ್ಮಾಯಿ ಸರ್ಕಾರ

ಡಾ.ಸಿ.ಎನ್. ಮಂಜುನಾಥ್ ಅವರ ಸಾಧನೆಗಳು

- 5,27,437 ಹೊರ ರೋಗಿಗಳನ್ನು ನೋಡಿದ್ದಾರೆ
- 53,806 ರಲ್ಲಿ - 30,000 ರೋಗಿಗಳಿಗೆ ಸಬ್ಸಿಡಿ ವೆಚ್ಚವಾಗಿ ಚಿಕಿತ್ಸೆ ನೀಡಲಾಗಿದೆ
- 42,865 ಕ್ಯಾಥ್ ಲ್ಯಾಬ್ ಕಾರ್ಯವಿಧಾನ (ದೇಶದಲ್ಲಿ ಅತಿ ಹೆಚ್ಚು)
- 24,447 ಆಂಜಿಯೋಗ್ರಾಮ್‍ಗಳು
- 1500 ಮಿಟ್ರಲ್ ವಾಲ್ವುಲೋಪ್ಲ್ಯಾಸ್ಟಿಗಳು (ಜಗತ್ತಿನಲ್ಲಿ ಅತಿ ಹೆಚ್ಚು)
- 15,000 ಆಂಜಿಯೋಪ್ಲ್ಯಾಸ್ಟಿಗಳು (ದೇಶದಲ್ಲಿ ಅತಿ ಹೆಚ್ಚು ಪ್ರಮಾಣ)
- 3,000 ಬೈಪಾಸ್ ಮತ್ತು ವಾಲ್ವ್ ರಿಪ್ಲೇಸ್‍ಮೆಂಟ್ ಸರ್ಜರಿಗಳು
- 3,00,054 ಎಕೋ - ಕಾರ್ಡಿಯೋಗ್ರಾಮ್‍ಗಳು (ಜಗತ್ತಿನಲ್ಲಿ ಅತಿ ಹೆಚ್ಚು)
9. ಬಡ ರೋಗಿಗಳ ಕಾರ್ಪಸ್ ನಿಧಿಯ ರಚನೆ ರೂ. ವಿವಿಧೆಡೆಯಿಂದ 100 ಕೋಟಿ ರೂ
ಮೂಲಗಳು.

ಇದನ್ನೂ ಓದಿ: Spelling Mistakes: ಬೊಮ್ಮಾಯಿ ಸರ್ಕಾರಕ್ಕೆ ಸರಿಯಾಗಿ ಕನ್ನಡ ಬರಲ್ವಾ? ನಮ್ಮ ಭಾಷೆಗೆ ಇದೆಂಥಾ ಅವಮಾನ!

ಡಾ.ಸಿ.ಎನ್. ಮಂಜುನಾಥ್ ಅವರಿಗೆ ದೊರೆತ ಪ್ರಶಸ್ತಿಗಳು

ಡಾ. ಮಂಜುನಾಥ್‍ರವರ ನಿಸ್ವಾರ್ಥ ವೈದ್ಯಕೀಯ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಹೃದ್ರೋಗ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸ್ಕಾಟ್ಲೆಂಡ್‍ನ ರಾಯಲ್ ಕಾಲೇಜ್ ಫಿಜಿಷಿಯನ್ಸ್‍ನ ಫೆಲೋಶಿಪ್‍ಗೆ (ಎಫ್‍ಆರ್‍ಸಿಪಿ) ಇವರು ಭಾಜನರಾಗಿದ್ದಾರೆ. ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಇವರ ಅಪ್ರತಿಮ ಸೇವೆಗೆ ದೇಶದ ಪ್ರತಿಷ್ಠಿತ ಪದ್ಮಶ್ರೀ ಗೌರವ ಸಂದಿದೆ. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಏಷಿಯಾ ಫೆಸಿಫಿಕ್ ವ್ಯಾಸ್ಕ್ಯೂಲರ್ ಸಮಾವೇಶದಲ್ಲಿ ದ್ರೋಣಾಚಾರ್ಯ ಪ್ರಶಸ್ತಿ ದೊರೆತಿದೆ. ಇಷ್ಟೆಲ್ಲಾ ಸೇವೆ ಸಲ್ಲಿಸಿರು ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಸಿಬ್ಬಂದಿ ವರ್ಗ ಸಿಎಂಗೆ ಮನವಿ ಮಾಡಿದೆ.
Published by:Savitha Savitha
First published: