ನಾವೆಲ್ಲೂ ಓಡಿ ಹೋಗಿಲ್ಲ, ಮದುವೆಯಾಗಿದ್ದೇವೆ: ನಿರ್ದೇಶಕ ಮತ್ತು ಹೀರೋಯಿನ್ ಹೇಳಿಕೆ

ನಟಿಯೊಬ್ಬಳು ಎಸ್ಕೇಪ್ ಆಗಿದ್ದಾಳೆ ಎಂಬ ದೂರು.. ಮರ್ಯಾದೆಗೆ ಅಂಜಿ ವಿಷ ಸೇವಿಸಿದ ತಾಯಿ, ಅಜ್ಜಿ..! ಚಿಕಿತ್ಸೆ ಫಲಕಾರಿಯಾಗದೇ ಅಜ್ಜಿ ಸಾವು, ಗಂಭೀರ ಸ್ಥಿತಿಯಲ್ಲಿ ತಾಯಿ..! ಆಕೆ ನಾಟಕ ಮಾಡುತ್ತಿದ್ದಾಳೆ… ನನ್ನನ್ನು ತಪ್ಪು ದಾರಿಗೆಳೆಯಲು ಮಾದೇಸ್ವಾಮಿ ಹಾಗು ನನ್ನ ತಾಯಿ ಯತ್ನಿಸಿದರು…. ನಾವು ಯಾವುದೇ ತಪ್ಪು ಮಾಡಿಲ್ಲ…. ಕಾನೂನು ಬದ್ದವಾಗಿಯೇ ಮದುವೆಯಾಗಿದ್ದೇವೆ ಎಂದ ನಟೀಮಣಿ…

news18
Updated:January 9, 2020, 7:02 PM IST
ನಾವೆಲ್ಲೂ ಓಡಿ ಹೋಗಿಲ್ಲ, ಮದುವೆಯಾಗಿದ್ದೇವೆ: ನಿರ್ದೇಶಕ ಮತ್ತು ಹೀರೋಯಿನ್ ಹೇಳಿಕೆ
ನಿರ್ದೇಶಕ ಅಂಜಿನಪ್ಪ ಮತ್ತು ನಟಿ ವಿಜಯಲಕ್ಷ್ಮೀ
  • News18
  • Last Updated: January 9, 2020, 7:02 PM IST
  • Share this:
ರಾಯಚೂರು(ಜ. 09): ಸ್ಯಾಂಡಲ್ವುಡ್ ನಿರ್ದೇಶಕ ಮತ್ತು ನಾಯಕನಟಿ ಇಬ್ಬರೂ ಓಡಿ ಹೋಗಿದ್ದಾರೆನ್ನಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮರ್ಯಾದೆಗಂಜಿ ವಿಷ ಸೇವಿಸಿದ್ದ ಹೀರೋಯಿಜ್ ಅಜ್ಜಿ ಅಸುನೀಗಿದ್ದಾರೆ. ತಾಯಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ಮಧ್ಯೆ ಓಡಿ ಹೋಗಿದ್ದರೆನ್ನಲಾದ ನಿರ್ದೇಶಕ ಮತ್ತು ಹೀರೋಯಿನ್ ಇಬ್ಬರೂ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾಗಿ ಮಾತನಾಡಿದ್ದಾರೆ. ಇದೆಲ್ಲಾ ತನ್ನ ತಾಯಿಯ ನಾಟಕ ಎಂದು ಈ ನಾಯಕನಟಿ ಆರೋಪ ಮಾಡಿದ್ದಾರೆ.

ಸಿನಿಮಾ ಶೈಲಿಯಲ್ಲೇ ಟ್ವಿಸ್ಟ್​ಗಳ ಮೇಲೆ ಟ್ವಿಸ್ಟ್ ಕಾಣುತ್ತಿರುವ ಈ ಘಟನೆಗೆ ಕಾರಣವಾಗಿರುವುದು ನಿರ್ದೇಶಕ ಅಂಜಿನಪ್ಪ ಮತ್ತು ನಟಿ ವಿಜಯಲಕ್ಷ್ಮೀ. ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಇವರಿಬ್ಬರೂ ನಾಪತ್ತೆಯಾಗಿದ್ದರು. ಮುಂದಿನ ಚಿತ್ರಗಳಿಗೆ ನಟಿಗೆ ಅಡ್ವಾನ್ಸ್ ಕೊಟ್ಟಿದ್ದ ನಿರ್ಮಾಪಕರು ಆಕೆಯ ಮನೆ ಬಾಗಿಲಿಗೆ ಬಂದಿದ್ದಾರೆ. ಈ ವೇಳೆ, ವಿಜಯಲಕ್ಷ್ಮಿಯ ತಾಯಿ ಮತ್ತು ಅಜ್ಜಿ ಮಾನಕ್ಕೆ ಅಂಜಿ ವಿಷ ಸೇವಿಸಿದರೆನ್ನಲಾಗಿದೆ. ದುರದೃಷ್ಟಕ್ಕೆ ವೃದ್ಧೆ ಸಾವನ್ನಪ್ಪಿದ್ದಾರೆ. ನಟಿಯ ತಾಯಿ ಗಂಭೀರ ಸ್ಥಿತಿಯಲ್ಲಿದ್ಧಾರೆ. ತನ್ನ ಮಗಳನ್ನು ಆಂಜಿನಪ್ಪ ಕರೆದೊಯ್ದಿದ್ದಾನೆ ಎಂದು ಆ ತಾಯಿ ಆರೋಪಿಸಿದ್ದರು.

ಇದನ್ನೂ ಓದಿ: ರಾಯಚೂರು ಬಾಲಕಿಯೋರ್ವಳ ಕಣ್ಣಿನಲ್ಲಿ ಉರುಳುತ್ತಿವೆ ಹರಳು; ಆತಂಕದಲ್ಲಿ ಪೋಷಕರು

ಈಗ ನಟಿ ಮತ್ತು ನಿರ್ದೇಶಕ ಇಬ್ಬರೂ ರಾಯಚೂರಿನಲ್ಲಿ ಪ್ರತ್ಯಕ್ಷರಾಗಿ ಸ್ಪಷ್ಟನೆ ನೀಡಿದ್ಧಾರೆ. ನಾವಿಬ್ಬರೂ ಓಡಿ ಹೋಗಿಲ್ಲ. ಕಾನೂನುಬದ್ಧವಾಗಿಯೇ ಮದುವೆಯಾಗಿದ್ದೇವೆ. ಯಾರಿಗೂ ಮೋಸ ಮಾಡಿಲ್ಲ ಎನ್ನುತ್ತಿದ್ಧಾರೆ.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ನಿವಾಸಿಯಾಗಿರುವ ನಟಿ ವಿಜಯಲಕ್ಷ್ಮಿ ಅವರು ಶಿವರಾಜ್‌ಕುಮಾರ್ ನಟನೆಯ ಆಯುಷ್ಮಾನ್ ಭವ, ಮಯೂರ್ ಪಟೇಲ್ ಅಭಿನಯದ ರಾಜೀವ ಸೇರಿದಂತೆ ಸುಮಾರು 16 ಸಿನೆಮಾಗಳಲ್ಲಿ ನಟಿಸಿದ್ಧಾರೆ. ‘ಪ್ರೇಮ ಮಹಲ್’, ‘ಜವಾರಿ ಲವ್’ ಹಾಗೂ ಇನ್ನೂ ಹೆಸರಿಡದ ಮತ್ತೊಂದು ಚಿತ್ರಕ್ಕೆ ನಿರ್ಮಾಪಕರ ಬಳಿ ನಟನೆಗಾಗಿ ಅಡ್ವಾನ್ಸ್ ಪಡೆದಿದ್ದಾರೆ ಎನ್ನಲಾಗಿದೆ.

ಇನ್ನು, ಅಂಜನಪ್ಪ ‘ತುಂಗಾ ಭದ್ರ’ ಸಿನಿಮಾದ ನಿರ್ದೇಶಕರಾಗಿದ್ದಾರೆ. ಇದೇ ಚಿತ್ರದಲ್ಲಿ ವಿಜಯಲಕ್ಷ್ಮೀ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ವೇಳೆ ಡೈರೆಕ್ಟರ್ ಆಂಜನಪ್ಪ ಮತ್ತು ವಿಜಯಲಕ್ಷ್ಮೀ ನಡುವೆ ಪ್ರೀತಿ ಬೆಳೆದಿದೆ. ಅದಾದ ಬಳಿಕ ಇಬ್ಬರೂ ಕೆಲ ದಿನ ಕಾಲ ನಾಪತ್ತೆಯಾಗಿದ್ದರು.

“ನಾವು ಓಡಿ ಹೋಗಿಲ್ಲ ಎಲ್ಲಿಯೂ ಪರಾರಿಯಾಗಿಲ್ಲ. ನನ್ನ ತಾಯಿ ಹಾಗು ಮಾದೇಸ್ವಾಮಿ ನನ್ನನ್ನು ಬಲವಂತವಾಗಿ ತಪ್ಪು ದಾರಿಗೆಳೆಯುತ್ತಿದ್ದರು. ನಾವಿಬ್ಬರೂ ಒಪ್ಪಿ ಮದುವೆಯಾಗಿ ಗಂಡನ ಮನೆಯಾದ ಸಿರವಾರ ಬಳಿಯ ಹಳ್ಳಿ ಹೊಸೂರಿನಲ್ಲಿದ್ದೇವೆ” ಎಂದು ನಟಿ ವಿಜಯಲಕ್ಷ್ಮೀ ಹೇಳಿದ್ದಾರೆ.ಇದನ್ನೂ ಓದಿ: ಪೇಜಾವರ ಶ್ರೀ ಮೋಕ್ಷವಾದ ಬೆನ್ನಲ್ಲೇ ಧರೆಗುರುಳಿದ 300 ವರ್ಷದ ಹಳೆಯ ಮರ; ಇದು ದೈವ ಲೀಲೆ ಎಂದು ನಂಬಿದ ಗ್ರಾಮಸ್ಥರು

ನಿರ್ದೇಶಕ ಅಂಜಿನಪ್ಪ ಕೂಡ ಇದೇ ಮಾತನ್ನ ಹೇಳುತ್ತಾರೆ. “ಆಕೆಯ ಮನೆಯವರು ಮಾಡುತ್ತಿರುವ ಆರೋಪ ಸುಳ್ಳು. ನಾವು ಕಾನೂನು ಬದ್ದವಾಗಿ ಮದುವೆಯಾಗಿದ್ದೇವೆ. ಈಗ ನಮ್ಮ ಊರಿನಲ್ಲಿಯೇ ಇದ್ದೇವೆ. ನಾವು ಮೋಸ ಮಾಡಿದ್ದೀರಿ ಎಂದವರು ಇಲ್ಲಿಗೆ ಬರಬಹುದು. ಈಗ ಪೊಲೀಸರ ರಕ್ಷಣೆ ಕೇಳಿದ್ದೇವೆ” ಎನ್ನುತ್ತಾರೆ ಅಂಜಿನಪ್ಪ.

ನಟಿ ವಿಜಯಲಕ್ಷ್ಮೀ ರಾಯಚೂರು ಜಿಲ್ಲೆಯಲ್ಲಿ ಇರುವ ವಿಷಯ ತಿಳಿದು ಆಕೆಯ ಪಾಲಕರು ಹಳ್ಳಿ ಹೊಸೂರು ಗ್ರಾಮಕ್ಕೆ ಬಂದು ಕಿರುಕುಳ ನೀಡುತ್ತಾರೆ. ಇದರಿಂದ ಮನನೊಂದ ನಿರ್ದೇಶಕ ಮತ್ತು ನಟಿ ವಿಜಯಲಕ್ಷ್ಮಿ ನೇರವಾಗಿ ಪೊಲೀಸರ ಮೊರೆ ಹೋಗುತ್ತಾರೆ. ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅರ್ಜಿಯನ್ನು ಕೊಟ್ಟು, ತಮ್ಮ ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಕೇಳಿಕೊಳ್ಳುತ್ತಾರೆ. ಈ ಬಗ್ಗೆ ಸಿರವಾರ ಪೊಲೀಸ್ ಠಾಣೆಯಲ್ಲಿ ಕೂಡ ಒಂದು ಅರ್ಜಿಯನ್ನು ಕೊಡುತ್ತಾರೆ.

ಒಟ್ಟಾರೆ, ವಿಜಯಲಕ್ಷ್ಮಿ ಎಸ್ಕೇಪ್ ಆದ ನಂತರ ಮನೆ ಬಳಿ ಬಂದು ಒತ್ತಡ ಹಾಕಿದ್ದ ನಿರ್ಮಾಪಕರು ಇದೀಗ ಸಾಕು ತಂದೆ ಸ್ವಾಮಿಯ ಹಿಂದೆ ದುಂಬಾಲು ಬಿದ್ದಿದ್ದಾರೆ ಎಂಬ‌ ಮಾಹಿತಿ ಒಂದು ಕಡೆ ಇದೆ. ನಾವು ಪ್ರೇಮಿಸಿ ಮದುವೆ ಮಾಡಿಕೊಂಡಿದ್ದೇವೆ. ನಮ್ಮ ಪಾಡಿಗೆ ನಮ್ಮನ್ನು ಬಿಡಿ ಎನ್ನುವ ನಟಿ, ನಿರ್ದೇಶಕರು ಇನ್ನೊಂದೆಡೆ ಹೇಳುತ್ತಿದ್ದಾರೆ. ಈ ಪ್ರಕರಣದಲ್ಲಿ ಯಾರ ಮಾತು ಸತ್ಯವೋ ಕಾದು ನೋಡಬೇಕು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ