Bagalkot: ಮಠಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇ.30 ಕಮಿಷನ್ ಕೊಡಬೇಕು: ದಿಂಗಾಲೇಶ್ವರ ಸ್ವಾಮೀಜಿ

ದೆಹಲಿ, ಬೆಂಗಳೂರಿನಂತಹ ಊರಿನಲ್ಲಿ ಐಸ್ ಕ್ರೀಂ  ಬಿಡುಗಡೆಯಾದರೆ ನಮ್ಮ ಉತ್ತರ ಕರ್ನಾಟಕಕ್ಕೆ ಬರೋದು ಐಸ್ ಕ್ರೀಂ  ಕಡ್ಡಿ ಮಾತ್ರ. ರೊಕ್ಕ ಕಟ್ ಮಾಡದೇ ಅನುದಾನ ಬಿಡುಗಡೆ ಸಾಧ್ಯವಿಲ್ಲ ಅಂತ ಅಧಿಕಾರಿಗಳು ಹೇಳ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ದಿಂಗಾಲೇಶ್ವರ ಸ್ವಾಮೀಜಿ

ದಿಂಗಾಲೇಶ್ವರ ಸ್ವಾಮೀಜಿ

  • Share this:
ಸರ್ಕಾರದ ವಿರುದ್ಧ ಗುತ್ತಿಗೆದಾರರು ಕಮಿಷನ್ ಆರೋಪ (Commission Allegation) ಮಾಡಿದ ಬಳಿಕ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ (Dingaleshwara Swamiji) ಸಹ ಕಮಿಷನ್ ಬಾಂಬ್ ಸಿಡಿಸಿದ್ದಾರೆ. ಸ್ವಾಮೀಜಿಗಳ ಹೇಳಿಕೆ ಬಳಿಕ ಮಠಗಳಿಗೆ ನೀಡುವ ಅನುದಾನದಲ್ಲಿಯೂ(Grants)  ಕಮಿಷನ್ ನೀಡಬೇಕಾ ಅನ್ನೋ ಪ್ರಶ್ನೆಯೊಂದು ಉತ್ತರವನ್ನು ಹುಡುಕುತ್ತಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ (Bagagandi, Bagalkot) ಗ್ರಾಮದಲ್ಲಿ ನಡೆದ ಎಸ್ ಆರ್ ಪಾಟೀಲ ನೇತೃತ್ವದಲ್ಲಿ ನಡೆದಿರುವ ಟ್ರ್ಯಾಕ್ಟರ್ ರ್ಯಾಲಿ (Rally) ಸಮಾರೋಪ ಸಮಾರಂಭದಲ್ಲಿ ಮಾತನಾಡಿರುವ ದಿಂಗಾಲೇಶ್ವರ ಸ್ವಾಮೀಜಿ, ಸರ್ಕಾರ ಮಠಗಳಿಗೆ ಕೊಡುವ ಅನುದಾನದಲ್ಲಿ ಶೇ. 30 ಕಮಿಷನ್ ಕೊಡಬೇಕು ಅಂತ ಹೇಳಿದ್ದಾರೆ.30 ಪರ್ಸೆಂಟೇಜ್ ಕೊಟ್ರೆ ಮಾತ್ರ ಮಠಗಳ ಕಟ್ಟಡ ಶುರು ಆಗುತ್ತವೆ ಎಂದು ಅಧಿಕಾರಿಗಳು ಬಂದು ಹೇಳುತ್ತಾರೆ. ಮಠಗಳಿಗೆ ಸರ್ಕಾರ ನೀಡುವ ಅನುದಾನದಲ್ಲಿ ಶೇ.30ರಷ್ಟು ಕಮಿಷನ್ ನೀಡಬೇಕಿದೆ. ಇಂದು ಭ್ರಷ್ಟಾಚಾರದ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ ನೋಡಿ ಎಂದು ಅಸಮಾಧಾನ ಹೊರ ಹಾಕಿದರು.

ಅನುದಾನದಲ್ಲಿ ಅಧಿಕಾರಿಗಳ ಕಡಿತ ಮಾಡದೇ ಅನುದಾನ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ದೆಹಲಿ, ಬೆಂಗಳೂರಿನಂತಹ ಊರಿನಲ್ಲಿ ಐಸ್ ಕ್ರೀಂ  ಬಿಡುಗಡೆಯಾದರೆ ನಮ್ಮ ಉತ್ತರ ಕರ್ನಾಟಕಕ್ಕೆ ಬರೋದು ಐಸ್ ಕ್ರೀಂ  ಕಡ್ಡಿ ಮಾತ್ರ. ರೊಕ್ಕ ಕಟ್ ಮಾಡದೇ ಅನುದಾನ ಬಿಡುಗಡೆ ಸಾಧ್ಯವಿಲ್ಲ ಅಂತ ಅಧಿಕಾರಿಗಳು ಹೇಳ್ತಾರೆ ಎಂದು ಗಂಭೀರ ಆರೋಪ ಮಾಡಿದರು.

ಹೀಗಾಗಿ ಮಠ ಮಾನ್ಯಗಳ ಅನುದಾನದಲ್ಲಿ 30% ಕಡಿತ ಆದ ಮೇಲೆಯೇ ಕಟ್ಟಡ ಆರಂಭವಾಗುತ್ತದೆ ಎಂದರು. ಇದೀಗ ಸ್ವಾಮೀಜಿಗಳು ಮಾಡಿರುವ ಆರೋಪ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಸ್ವಾಮೀಜಿಗಳ ಹೇಳಿಕೆಗೆ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ

ದಿಂಗಾಲೇಶ್ವರ ಸ್ವಾಮೀಜಿಗಳ 30 % ಆರೋಪಕ್ಕೆ  ಕಾಂಗ್ರೆಸ್ ಹಿರಿಯ ನಾಯಕ,  ಶಾಸಕ ಎಚ್ ಕೆ ಪಾಟೀಲ ಗದಗನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ. ರಾಜಕೀಯ ಪಕ್ಷಗಳು ಸಹ ಹೇಳಿದರು.

ಇದನ್ನೂ ಓದಿ:  Cabinet Reshuffle: ಮುಂದಿನ ತಿಂಗಳ ಮೊದಲ ವಾರದೊಳಗೆ ರಾಜ್ಯ ಸಚಿವ ಸಂಪುಟಕ್ಕೆ ಭರ್ಜರಿ ಸರ್ಜರಿ; ಇಂದು ಜೆ.ಪಿ.ನಡ್ಡಾ ಆಗಮನ

ವಿಧಾನಸಭೆ, ಪರಿಷತ್ ನಲ್ಲಿ ಅವರ ಪಕ್ಷದ ಸದಸ್ಯರೇ ಆ ಭಾವ ಬರುವ ಹಾಗೆ ಮಾತಾಡಿದ್ದರು. ಪ್ರಧಾನ ಮಂತ್ರಿಯವರಿಗೆ, ನಡ್ಡಾ ಅವರಿಗೆ ಗುತ್ತಿಗೆದಾರರು ಪತ್ರ ಬರೆದರು. ಇವೆಲ್ಲದರ ನಂತರ ಸ್ವಾಮಿಗಳೇ ಆ ರೀತಿ ಅಭಿಪ್ರಾಯ ವ್ಯಕ್ತ ಮಾಡಿದ್ದಾರೆ. ಅಂದ್ರೆ ಈ ಬಿಜೆಪಿ ಸರ್ಕರ  ಎಷ್ಟು ಬಹಿರಂಗ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ ಅನ್ನೋದು ಕಾಣಿಸುತ್ತಿದೆ.

ಬಹಿರಂಗ ಭ್ರಷ್ಟಾಚಾರ ಅವರ ಕಾರ್ಯಕರ್ತನನ್ನೇ ಬಲಿ ಪಡೆದಿದೆ. ಏನಾದ್ರೂ ಸಾಬೀತು ಮಾಡುವುದು ಉಳಿದಿದೆಯೆ. ಬಿಜೆಪಿ ಸರ್ಕಾರ ರಾಜೀನಾಮೆ ಕೊಡಬೇಕು. ಈಶ್ವರಪ್ಪ ಒಬ್ಬರ ರಾಜೀನಾಮೆಯಲ್ಲ, ಬಂಧಿಸುವುದಲ್ಲ ಸರ್ಕಾರ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇವರನ್ನ ದೇವರೇ ಕಾಪಾಡಬೇಕು

ಇಷ್ಟೆಲ್ಲ ನಡೆದರೂ ಸರ್ಕಾರದಲ್ಲಿ ಕೂತಿದ್ದಾರೆ ಅಂದರೆ ಅವರಿಗೆ ನಾಚಿಕೆ ಆಗಬೇಕು. ಅವರು ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ.‌ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಇವರಲ್ಲಿದ್ರೆ, ಇವರನ್ನ ದೇವರೇ ಕಾಪಾಡಬೇಕು.. ನಮ್ಮ ಭಾಗದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು..  ಕಳೆದ ಕೆಲ ದಿನಗಳಿಂದ ರಾಜದಲ್ಲಿ ಕ್ಷೋಭೆ ಹುಟ್ಟು ಹಾಹಲು ಪ್ರತ್ನಿಸುತ್ತಿದ್ದಾರೆ.. ಅದ್ಕೆ ಅಂತ್ಯ ಹಾಡಬೇಕು.

ಭಾತೃತ್ವವನ್ನ, ಸೌಹಾರ್ದವನ್ನ ಕಾಪಾಡಿಕೊಳ್ಳುವಲ್ಲಿ ನಮ್ಮನ್ಮ ನಾವು ತೊಡಗಿಸಿಕೊಳ್ಳಬೇಕು. ಕಲ್ಲಂಗಡಿ ಒಡೆದಾಗಿ ಮಾತನಾಡಿದ ನಾಯಕರು ಈಗ ಮಾತಾಡುತ್ತಿಲ್ಲ ಅನ್ನೋ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್ ಕೆ ಪಾಟೀಲರು,  ಕಲ್ಲಂಗಡಿ ಒಡೆದವರು ಈ ಮಾತು ಹೇಳುತ್ತಿದ್ದಾರೆ. ಎಲ್ಲರಿಗೂ ದೇವರು ಸದ್ಬುದ್ಧಿ ಕೊಡಲಿ.. ಭಾತೃತ್ವ ಕಾಪಾಡುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:  Mangaluru: ಮೀನು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ: ಐವರ ಸಾವು, ಮೂವರು ಗಂಭೀರ

ಕಮಿಷನ್ ಆರೋಪ, ಸಂತೋಷ್ ಆತ್ಮಹತ್ಯೆ

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಸಂತೋಷ್ ಆತ್ಮಹತ್ಯೆಗೂ ಮೊದಲು ಮಾಧ್ಯಮ ಪ್ರತಿನಿಧಿಗಳಿಗೆ ತಮ್ಮ ಸಾವಿಗೆ ಈಶ್ವರಪ್ಪ ಕಾರಣ ಎಂದು ಆರೋಪಿಸಿ ವಾಟ್ಸಪ್ ಸಂದೇಶ ಕಳುಹಿಸಿದ್ದರು.
Published by:Mahmadrafik K
First published: