news18-kannada Updated:March 7, 2021, 4:15 PM IST
ದಿನೇಶ್ ಕಲ್ಲಹಳ್ಳಿ.
ಬೆಂಗಳೂರು (ಮಾರ್ಚ್ 07); ಸಚಿವ ರಮೇಶ್ ಜಾರಕಿಹೊಳಿಗೆ ಅವರಿಗೆ ಸಂಬಂಧಿಸಿದ ಅಶ್ಲೀಲ ಸಿಡಿ ಒಂದು ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿಡಿ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಚಿವರು ತಮ್ಮ ಸ್ಥಾನವನ್ನು ದುರುಪಯೋಗಪಡಿ ಸಿಕೊಂಡು ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ನೆಪದಿಂದ ಆಕೆಯ ಮೇಲೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ಎಂಬ ವ್ಯಕ್ತಿ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಲ್ಲದೆ, ಮಾಧ್ಯಮಗಳ ಎದುರು ಮಾತನಾಡಿ ಈ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದರು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ದಿನೇಶ್ ಕಲ್ಲಹಳ್ಳಿ ಎಂಬ ವ್ಯಕ್ತಿ ಸಚಿವರ ವಿರುದ್ಧ ಇಂದು ತಾನು ನೀಡಿದ್ದ ದೂರನ್ನು ಹಿಂಪಡೆದಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸರಿಗೆ 5 ಪುಟಗಳ ಪತ್ರ ಬರೆಯುವ ಮೂಲಕ ದಿನೇಶ್ ಕಲ್ಲಹಳ್ಳಿ ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ. ಈ ಪುಟಗಳ ಪತ್ರದಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಿರುವ ದಿನೇಶ್ ಕಲ್ಲಹಳ್ಳಿ, "ನಾನು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಆಗಿದಿಯೋ ಇಲ್ಲವೋ? ಎಂಬ ಬಗ್ಗೆ ತನಿಖೆ ಮಾಡುವಂತೆ ದೂರು ಕೊಟ್ಟಿದೆ. ಬೇರೆ ಯಾವುದೇ ಬೇಡಿಕೆಗಳು ದೂರಿನಲ್ಲಿ ಇಲ್ಲ. ಆದರೆ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ 5 ಕೋಟಿ ಡೀಲ್ ನಡೆದಿದೆ ಎಂದು ಮಾತನಾಡುತ್ತಾರೆ.
ಹೆಚ್ಡಿಕೆ ಆಧಾರ ರಹಿತವಾಗಿ ಮಾತನಾಡುತ್ತಿದ್ದಾರೆ. ನನಗೆ ಬಂದ ಸಿಡಿಯನ್ನ ಕಮೀಷನರ್ ಗೆ ಮುಚ್ಚಿದ ಲಕೋಟೆಯಲ್ಲಿ ಕೊಡಲಾಗಿದೆ. ಅಲ್ಲಿಂದ ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಿದ್ದೇನೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳ ಹಾಕುವ ಮೂಲಕ ಯುವತಿ ಚಾರಿತ್ರ ಹರಣ ಮಾಡಲಾಗುತ್ತಿದೆ. ಸಮಾಜ ಶೂಟ್ ದಿ ಮೆಸೆಂಜರ್ ಅನ್ನೋ ರೀತಿ ಸಿಡಿ ಮಾಡಿದ್ದು ಯಾರು? ಸಿಡಿ ಕೊಟ್ಟವರು ಯಾರು?ಮಾಹಿತಿದಾರ ಯಾರನ್ನೆಲ್ಲ ಸಂಪರ್ಕಿಸಿದ ಎಂದು ಚರ್ಚೆ ಅಗುತ್ತಿದೆ?
ಇದನ್ನೂ ಓದಿ: ಗ್ರಾಫಿಕ್ಸ್ಗೆ ಬಲಿಪಶು ಆಗುವ ಭಯ ಇದೆ; ಹೀಗಾಗಿ ಮಾನ ಮರ್ಯಾದೆಗೆ ಅಂಜಿ ಕೋರ್ಟ್ ಮೊರೆ ಹೋಗಿದ್ದಾರೆ: ಸಚಿವ ಸಿ.ಪಿ.ಯೋಗೇಶ್ವರ್
ನಾನು ದೂರು ನೀಡಿದ ಉದ್ದೇಶ ಮಹಿಳೆ ಮತ್ತು ಮಾಹಿತಿದಾರನಿಗೆ ತಿರುಗುಬಾಣವಾಗಿದೆ. ಹೀಗಾಗಿ ಮಹಿಳೆ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಇದನ್ನ ಇಲ್ಲಿಗೆ ಮುಕ್ತಾಯಗೊಳಿಸಲು ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ದೂರನ್ನು ಹಿಂಪಡೆಯುತ್ತಿದ್ದೇನೆ" ಎಂದು ದಿನೇಶ್ ಹಲ್ಲಹಳ್ಳಿ ತಾವು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೊಳಿ ವಿರುದ್ಧದ ದೂರನ್ನು ಹಿಂಪಡೆಯುತ್ತಿದ್ದಂತೆ, ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಇಂದು ಸಂಜೆ 5 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಅವರು ಈ ಸುದ್ದಿಗೋಷ್ಠಿಯಲ್ಲಿ ಏನು ಮಾತನಾಡಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
Published by:
MAshok Kumar
First published:
March 7, 2021, 4:07 PM IST