Karnataka Congress: ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ; ಡಿಕೆ ಶಿವಕುಮಾರ್​ಗೆ ಸಲಹೆ ಕೊಟ್ಟ ದಿನೇಶ್ ಗುಂಡೂರಾವ್

ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅಂತಹ ಆಡಳಿತ ಬೇಕು ಅಂತ ಹೇಳ್ತಿದ್ದಾರೆ. ಹೀಗಾಗಿ ನಾವೆಲ್ಲರೂ ‌ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ಡಿಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದರು.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

  • Share this:
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ (Former KPCC President Dinesh Gundurao) ಅವರು, ಬಹಿರಂಗವಾಗಿಯೇ ಹಾಲಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ವಿರುದ್ಧ ಏನೂ ಇಲ್ಲ ಅನ್ನುತ್ತಲೇ ಅಸಮಾಧಾನ ಹೊರ ಹಾಕಿದರು.  ನಮ್ಮಲ್ಲಿ ಯಾವುದೇ ಗಲಾಟೆ ಗೊಂದಲ ಇಲ್ಲ. ಎಲ್ಲಾ‌ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿರೋದಕ್ಕೆ ಉಪ ಚುನಾವಣೆಯಲ್ಲಿ (By Election) ಗೆಲುವು ಆಯ್ತು. ಪಾದಯಾತ್ರೆ (Padayatra), ಸಿದ್ದರಾಮೋತ್ಸವ (Siddaramotsava) ಎಲ್ಲವೂ ಯಶಸ್ವಿಯಾಗಿದೆ. ಎಲ್ಲರೂ ಸೇರಿ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಸಣ್ಣ ಪುಟ್ಟ ಗೊಂದಲ ಇರುತ್ತೆ. ಅದನ್ನ ಸರಿ ಮಾಡಿಕೊಂಡು ಹೋಗ್ತೀವಿ ಎಂದು ಹೇಳಿದರು.

ನನ್ನ ಸ್ಪೀಡ್​ಗೆ ಯಾರು ಕೆಲಸ ಮಾಡ್ತಿಲ್ಲ ಎಂಬ ಡಿಕೆಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಎಲ್ಲರಿಗೂ ಹುರಿದುಂಬಿಸಲು ಹಾಗೆ ಹೇಳಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಯಶಸ್ವಿಯಾಗಲಿ ಅಂತ ಹೇಳಿದ್ದಾರೆ. ಎಲ್ಲರೂ ಚುರುಕಾಗಿ ಕೆಲಸ ಮಾಡಲಿ ಅಂತ ಹೇಳಿರುವದಕ್ಕೆ ಬೇರೆ ಅರ್ಥ ಬೇಡ ಎಂದರು.

ಅಂತಿಮ ರೂಪುರೇಷೆ ಎಂಬಿ ಪಾಟೀಲ್ ತೀರ್ಮಾನ ಮಾಡ್ತಾರೆ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ರಥಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಕ್ಯಾಂಪೇನ್ ಯಾವ ರೀತಿ ಮಾಡಬೇಕು ಅನ್ನೋದನ್ನು ಪ್ರಚಾರ ಸಮಿತಿ ತೀರ್ಮಾನ ಮಾಡತ್ತದೆ. ಯಾವ್ಯಾವ ಲೀಡರ್ ಗಳು ಏನು ಮಾಡಬೇಕು ಅಂತ ಚರ್ಚೆ ಆಗ್ತಿದೆ. ಯಾವ ರೀತಿ ಮಾಡಬೇಕು ಅನ್ನೋದು ಭಾರತ್ ಜೋಡೋ ಯಾತ್ರೆ ಆದ್ಮೇಲೆ ತೀರ್ಮಾನ ಆಗಲಿದೆ ಎಂದು ತಿಳಿಸಿದರು.

ಯಾವುದೇ ಯಾತ್ರೆ ನಡೆದರೂ 224 ಕ್ಷೇತ್ರ ಕೂಡ ಕವರ್ ಮಾಡಬೇಕಾಗುತ್ತದೆ. ಸಿದ್ದರಾಮಯ್ಯ ಒಬ್ಬರೇ ಹೋಗ್ತಾರಾ ಇಲ್ವಾ ಅನ್ನೋ ಊಹಾಪೋಹಕ್ಕೆ ಉತ್ತರ ಕೊಡಲ್ಲ. ಸಿದ್ದರಾಮಯ್ಯ ಜನಪ್ರಿಯ ನಾಯಕ ಅವರ ನೇತೃತ್ವದಲ್ಲಿ ಆಗಬೇಕು. ಡಿಕೆ ಶಿವಕುಮಾರ್ ಅಧ್ಯಕ್ಷರು ಅವರ ನೇತೃತ್ವದಲ್ಲೂ ಆಗಬೇಕು. ಖರ್ಗೆಯವರಿದ್ದಾರೆ, ಎಲ್ಲರೂ ಇದ್ದಾರೆ. ಅಂತಿಮ ರೂಪುರೇಷೆ ಎಂಬಿ ಪಾಟೀಲ್ ತೀರ್ಮಾನ ಮಾಡ್ತಾರೆ ಎಂದರು.

ಸಚಿವ ಆರ್.ವಿ.ದೇಶಪಾಂಡೆ ಅವರ ಊರು ದೂರ

ಚುನಾವಣೆಗೆ ಸಾಮೂಹಿಕ ನಾಯಕತ್ವದಲ್ಲಿ ಹೋಗಬೇಕು. ಸಣ್ಣ ಪುಟ್ಟ ಗೊಂದಲ ದೊಡ್ದದು ಮಾಡೋಕೆ ‌ಹೋಗಬಾರದು. ಎಲ್ಲರೂ ಸೇರಿ ಸಭೆ ಮಾಡಿ ಪ್ರಚಾರದ ಬಗ್ಗೆ ನಿರ್ಧಾರ ಮಾಡ್ತಾರೆ. ಸಿಎಂ ಯಾರು ಅನ್ನೋದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ. ಸಿಎಂ ಆಯ್ಕೆ ಮಾಡೋವಾಗ ಶಾಸಕರ ಅಭಿಪ್ರಾಯ ಪಡೆಯಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆ ಶಾಸಕಾಂಗ ಸಭೆಯಲ್ಲಿ ನಡೆಯಲಿದೆ ಎಂದು ಹೇಳಿದರು.

ಭಾರತ್ ಜೋಡೋಗೆ ಕಾರ್ಯಕರ್ತರನ್ನ ಕಳಿಸ್ತಿಲ್ಲ ಅನ್ನೋ ಡಿಕೆ ಶಿವಕುಮಾರ್ ಆರೋಪಕ್ಕೆ ಉತ್ತರಿಸಿ ದಿನೇಶ್ ಗುಂಡೂರಾವ್, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅವರ ಊರು ದೂರ ಇದೆ. ಅಲ್ಲಿಂದ ಸಾವಿರಾರು ಕಾರ್ಯಕರ್ತರನ್ನ ತರೋದು ಕಷ್ಟ ಅಂತ ದೇಶಪಾಂಡೆ ಹೇಳಿದ್ದಾರೆ. ದೇಶಪಾಂಡೆ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಅವರು ಹಾಗೆ ಹೇಳಿದ್ದು ತಪ್ಪಲ್ಲ. ಇದೆಲ್ಲ ಸಣ್ಣ ವಿಚಾರ. ‌ಇದನ್ನ ಯಾರು ಗೊಂದಲ ‌ಮಾಡಬಾರದು ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ:  Dog: ತನ್ನನ್ನು ನೋಡಿ ಬೊಗಳಿದ್ದ ನಾಯಿಯನ್ನ ಕೊಂದ ನೀಚ; ಏರ್​ಗನ್​​ನಿಂದ ಹೊಡೆದು ಕೊಲೆ

ಡಿಕೆಶಿಗೆ ತಿರುಗೇಟು

ರಾಹುಲ್ ಗಾಂಧಿ ಬಂದ ಮೇಲೆ ಎಲ್ಲರೂ ಸಹಕಾರ ಕೊಡ್ತಾರೆ. ಶಾಸಕರು ಕೈಯಲ್ಲಿ ‌ಆದಷ್ಟು ಕೆಲಸ ಮಾಡ್ತಿದ್ದಾರೆ. ಎಲ್ಲರ ಶಕ್ತಿ ಒಂದೇ ಅನ್ನೋದಕ್ಕೆ ಆಗಲ್ಲ.

ಕೆಲಸ ಮಾಡದವರಿಗೆ ಟಿಕೆಟ್ ಇಲ್ಲ ಎಂದು ಮಾತಿನ ಭರಾಟೆಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಒಂದು ವೇಳೆ ಅವರು ಹೇಳಿದ್ರೂ ಹಾಗೆ ಆಗಲ್ಲ. ಎಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್​ಗೆ ದಿನೇಶ್ ಗುಂಡೂರಾವ್ ಸಲಹೆ

ಜನರಿಗೆ ಬಿಜೆಪಿ‌ ಬಗ್ಗೆ ಬೇಸರ ಇದೆ‌. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಿದೆ. ರಾಜ್ಯಕ್ಕೆ ಒಳ್ಳೆ ಆಡಳಿತ ಸಿಗಬೇಕು ಅಂತ ಜನ ಮಾತಾಡ್ತಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಅಂತಹ ಆಡಳಿತ ಬೇಕು ಅಂತ ಹೇಳ್ತಿದ್ದಾರೆ. ಹೀಗಾಗಿ ನಾವೆಲ್ಲರೂ ‌ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ಡಿಕೆ ಶಿವಕುಮಾರ್ ಅವರಿಗೆ ಸಲಹೆ ನೀಡಿದರು.ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸೇರಿ ಸಮನ್ವಯತೆಯಾಗಿ ಓಡಾಡಬೇಕು. ಎಲ್ಲರೂ ಒಟ್ಟಾಗಿ‌ ಕೆಲಸ ಮಾಡಬೇಕು. ಯಾರೂ ಕೂಡಾ ಗೊಂದಲ ಸೃಷ್ಟಿ ಮಾಡಬಾರದು ಎಂದು ಡಿಕೆ ಶಿವಕುಮಾರ್​ಗೆ ಟಾಂಗ್ ನೀಡಿದರು.

ಇದನ್ನೂ ಓದಿ:  Crime News: ರುಂಡವಿಲ್ಲದ ಶವ ಪತ್ತೆ ಪ್ರಕರಣದ ಆರೋಪಿ ಅರೆಸ್ಟ್; ಮುಂಬೈನಲ್ಲಿ ಕೊಲೆಯಾಗಿದ್ದು ಬೆಳಗಾವಿಯ ಮಹಿಳೆ

ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ

ಕಾಂಗ್ರೆಸ್​ನಲ್ಲಿ ಯಾರೋ ಒಬ್ಬರು ಟಿಕೆಟ್ ಬಗ್ಗೆ ತೀರ್ಮಾನ ಮಾಡಲ್ಲ. ಟಿಕೆಟ್ ನೀಡಲು ಚುನಾವಣೆ ಸಮಿತಿ, ರಾಜ್ಯ ಚುನಾವಣೆ ಸಮಿತಿ,‌ ಕೇಂದ್ರ ಸಮಿತಿ, ಸ್ಕ್ರೀನಿಂಗ್ ಕಮಿಟಿ ಇದೆ. ಎಲ್ಲರ ಅಭಿಪ್ರಾಯ ‌ಪಡೆದು ಅಂತಿಮವಾಗಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡುತ್ತದೆ. ಯಾರೇ ಒಬ್ಬರು ನನ್ನಿಂದ ಟಿಕೆಟ್ ಘೋಷಣೆ ಅಂತ ಹೇಳಿದ್ರೆ ಅದು ಕಾಂಗ್ರೆಸ್​​ನಲ್ಲಿ ಸಾಧ್ಯವಿಲ್ಲ. ಒಬ್ಬರ ಕೈಯಲ್ಲಿ ಇದೆಲ್ಲವೂ ಇಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರ ಹಾಕಿದರು.
Published by:Mahmadrafik K
First published: