• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Elections: ಈ ಸಲ ಕಪ್‌ ನಮ್ದೇ ಎಂದ ಆರ್ ಅಶೋಕ್‌ಗೆ ಕೌಂಟರ್‌ ಕೊಟ್ಟ ಕಾಂಗ್ರೆಸ್‌ ನಾಯಕ

Karnataka Elections: ಈ ಸಲ ಕಪ್‌ ನಮ್ದೇ ಎಂದ ಆರ್ ಅಶೋಕ್‌ಗೆ ಕೌಂಟರ್‌ ಕೊಟ್ಟ ಕಾಂಗ್ರೆಸ್‌ ನಾಯಕ

ದಿನೇಶ್ ಗುಂಡೂರಾವ್, ಕಾಂಗ್ರೆಸ್‌ ನಾಯಕ

ದಿನೇಶ್ ಗುಂಡೂರಾವ್, ಕಾಂಗ್ರೆಸ್‌ ನಾಯಕ

ಬಿಜೆಪಿ, ಜೆಡಿಎಸ್ ನವರು ನಮಗೇ ಬಹುಮತ ಅಂತಾರೆ. ಆದರೆ ನಾವು ಜನರ ಮುಂದೆ ಹೋಗಿದ್ದೇವೆ. ಜನ ಉತ್ತಮ ಸರ್ಕಾರವನ್ನ ಬೆಂಬಲಿಸ್ತಾರೆ. ಬಿಜೆಪಿ ವಿರುದ್ಧ ಜನ ಸಿಡಿದು ನಿಂತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

  • Share this:

ಬೆಂಗಳೂರು: ಚುನಾವಣಾ ಫಲಿತಾಂಶದ (Karnataka Election Results) ಬಗ್ಗೆ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ, ಈ ಬಾರಿ ಸ್ಥಿರ ಸರ್ಕಾರ ರಚನೆಯ ಬಗ್ಗೆ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಕಾಂಗ್ರೆಸ್‌ ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಬಾರಿ ನಮ್ಮದೇ ಸರ್ಕಾರ ರಚನೆ ಮಾಡೋದು ಪಕ್ಕಾ ಎಂದು ಹೇಳಿದ್ದಾರೆ.


ಇನ್ನು ಒಂದು ದಿನ ಮಾತ್ರ ಬಾಕಿಯಿದೆ ಹಾಗಾಗಿ ಎಲೆಕ್ಷನ್ ರಿಸಲ್ಟ್ ಬಗ್ಗೆ ಹೆಚ್ಚು ಚರ್ಚೆ ಮಾಡುವ ಅಗತ್ಯವಿಲ್ಲ ಎಂದಿರುವ ದಿನೇಶ್ ಗುಂಡೂರಾವ್, ಬಿಜೆಪಿ, ಜೆಡಿಎಸ್ ನವರು ನಮಗೇ ಬಹುಮತ ಅಂತಾರೆ. ಆದರೆ ನಾವು ಜನರ ಮುಂದೆ ಹೋಗಿದ್ದೇವೆ. ಜನ ಉತ್ತಮ ಸರ್ಕಾರವನ್ನ ಬೆಂಬಲಿಸ್ತಾರೆ. ಬಿಜೆಪಿ ವಿರುದ್ಧ ಜನ ಸಿಡಿದು ನಿಂತಿದ್ದಾರೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: GM Siddeshwara: ಪತ್ನಿ ಮತ ಹಾಕೋದನ್ನು ಮೆಲ್ಲನೆ ಇಣುಕಿ ನೋಡಿದ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್‌!


ಈ ಸಲ ಕಪ್ ನಮ್ದೇ ಎಂಬ ಆರ್ ಅಶೋಕ್ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಅಧರ್ಮದ ಸರ್ಕಾರ ರಚನೆ ಮಾಡುವಲ್ಲಿ ಬಿಜೆಪಿ ಅವರು ಮುಂದಿದ್ದಾರೆ. ಕೆಟ್ಟ ಕೆಲಸ ಮಾಡೋದ್ರಲ್ಲಿ ಅವರು ನಿಸ್ಸೀಮರು. ಅದಕ್ಕೆ ನಿಮಗೆ ಅವಕಾಶ ಕೊಡ್ತೇವೆ ಅಂತ ಹೇಳ್ತಿರಬಹುದು. ನೀತಿ, ನಿಯಮ ಇಲ್ಲದ ಪಕ್ಷ ಅಂದ್ರೆ ಬಿಜೆಪಿ. ನಮಗೆ ಯಾವುದೇ ಆಪರೇಷನ್ ಆತಂಕವಿಲ್ಲ. ಮಲ್ಲಿಕಾರ್ಜುನ ಖರ್ಗೆ, ರಣ್‌ದೀಪ್ ಸಿಂಗ್ ಸುರ್ಜೇವಾಲಾ ಇಲ್ಲೇ ಇದ್ದಾರೆ. ನಮಗೆ ಯಾವುದೇ ಭಯವಿಲ್ಲ. ಇನ್ನು ನಮಗೆ ಸ್ಪಷ್ಟ ಬಹುಮತದ ವಿಶ್ವಾಸವಿದೆ ಎಂದು ಹೇಳಿದರು.


ಸಿಎಂ ಯಾರಾಗ್ತಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಶಾಸಕರ ಅಭಿಪ್ರಾಯ ಸಂಗ್ರಹಿಸಿ ಸಿಎಂ ಆಯ್ಕೆಯಾಗಲಿದೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು.


ದಿನೇಶ್ ಗುಂಡೂರಾವ್, ಕಾಂಗ್ರೆಸ್‌ ನಾಯಕ


ಸಿಎಂ ರೇಸ್‌ನಿಂದ ಹಿಂದಕ್ಕೆ ಸರಿದ ಜಾರಕಿಹೊಳಿ!


ಬೆಳಗಾವಿ: ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ನಾನು ಇಲ್ಲ‌, ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ನನ್ನ ಉದ್ದೇಶ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ನ್ಯೂಸ್ 18ಗೆ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಅವರು, ನಮಗೆ ಯಾವುದೇ ಭೀತಿ ಇಲ್ಲ. ಮುನ್ನೆಚ್ಚರಿಕೆ ಕ್ರಮ ‌ವಹಿಸುವುದು ಒಳ್ಳೆಯದು. ಬಿಜೆಪಿಯವರು ಏನು ಬೇಕಾದ್ರು ಮಾಡಲು ಹಿಂದೆ ಮುಂದೆ ನೋಡಲ್ಲ‌ ಎಂದು ಹೇಳಿದರು.


ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್‌ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!


ಕಾಂಗ್ರೆಸ್‌ ಅಭ್ಯರ್ಥಿಗಳು ಎಚ್ಚರಿಕೆಯಿಂದ ಇರುವಂತೆ ನಾಯಕರು ಸೂಚನೆ ನೀಡಿದ್ದಾರೆ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಯಮಕನಮರಡಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಲು ವಿರೋಧಿಗಳು ಪ್ರಯತ್ನ ಮಾಡಿದ್ದಾರೆ. ಜನ ಅಭಿವೃದ್ಧಿ, ಪಕ್ಷ ನೋಡುತ್ತಾರೆ. ಭಾಷಣ ಮಾಡುವವರನ್ನು ಜನ ನಂಬಲ್ಲ. ಜನ ಅಂತಿಮವಾಗಿ ಕೆಲಸ ನೋಡುತ್ತಾರೆ‌. ರಾಜ್ಯದಲ್ಲಿ ಟಾಪ್  10 ನಲ್ಲಿ ಯಮಕನಮರಡಿ ಬರಬೇಕು ಎಂದು ನಾವು ಪ್ರಯತ್ನ ಮಾಡಿದ್ದೇವೆ. ನಾಳೆ ಅಂತಿಮವಾಗಿ ಗೊತ್ತಾಗಲಿದೆ ಎಂದು ಹೇಳಿದರು.




ಇನ್ನು,  ವಿಜಯಪುರದಲ್ಲಿ ಬಸನಗೌಡ ಪಾಟೀಲ ಯತ್ನಾಳ್‌ರನ್ನು ಸೋಲಿಸಲು ಸತೀಶ್ ಜಾರಕಿಹೊಳಿ ಟೀಂ ಕೆಲಸ ಮಾಡಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಹೌದು, ನಾನು ವಿಜಯಪುರದಲ್ಲಿ ಕೆಲಸ ಮಾಡಿದ್ದು ನಿಜ. ನಾಳೆ ಇದರ ಫಲಿತಾಂಶ ಹೊರ ಬರಬೇಕಿದೆ‌. ಪಕ್ಷದ ಆಧಾರದ ಮೇಲೆ ಕೆಲಸ ಮಾಡಿದ್ದೇನೆ. ಯತ್ನಾಳ್‌ ವೈಯಕ್ತಿಕವಾಗಿ ತಗೊಂಡು ನಮ್ಮಲ್ಲಿ ಬಂದ್ರು. ವಿಜಯಪುರ, ನಾಗಠಾಣಾ, ಬಾಗಲಕೋಟೆ ಸೇರಿ ಅನೇಕ ಕಡೆಗಳಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

top videos
    First published: