ಚುನಾವಣೆ ಠೇವಣಿ ಕಟ್ಟಲು ದಿನೇಶ್ ಗುಂಡೂರಾವ್ ಬಳಿ 10,000 ರೂ ಪಡೆದ ಖರ್ಗೆ

ಬಿಫಾರ್ಮ್ ಪಡೆಯುವಾಗ ನಾಮಪತ್ರಕ್ಕೆ ಠೇವಣಿ ಹಣ ಯಾರು ಕೊಡುತ್ತೀರಾ ಎಂದು ಖರ್ಗೆ ಕೇಳಿದರು. ಡಿಕೆಶಿ ಜೇಬಿನಲ್ಲಿ ಹಣ ಇರಲಿಲ್ಲ. ಆಗ ದಿನೇಶ್ ಗುಂಡೂರಾವ್ ತಾವು ಕೊಡುವುದಾಗಿ ಮುಂದೆ ಬಂದರು.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

 • Share this:
  ಬೆಂಗಳೂರು(ಜೂನ್ 08): ಜೂನ್ 19ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವತ್ತು ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖರ್ಗೆ ಅವರಿಗೆ ಬಿ-ಫಾರ್ಮ್ ವಿತರಿಸಿದರು. ಈ ವೇಳೆ ನಾಮಪತ್ರಕ್ಕೆ ಠೇವಣಿಯಾಗಿ 10 ಸಾವಿರ ರೂಪಾಯಿಯನ್ನು ದಿನೇಶ್ ಗುಂಡೂರಾವ್ ಅವರೇ ನೀಡಲು ಮುಂದೆ ಬಂದ ಘಟನೆ ನಡೆಯಿತು.

  ಬಿಫಾರ್ಮ್ ಪಡೆಯುವಾಗ ನಾಮಪತ್ರಕ್ಕೆ ಠೇವಣಿ ಹಣ ಯಾರು ಕೊಡುತ್ತೀರಾ ಎಂದು ಮಲ್ಲಿಕಾರ್ಜುನ ಖರ್ಗೆ ಕೇಳಿದರು. ಆಗ ಡಿಕೆಶಿ ತಮ್ಮ ಜೇಬಿಗೆ ಕೈಹಾಕಿದರು. ಅದರಲ್ಲಿ ಹಣ ಇರಲಿಲ್ಲ. ನಂತರ ಪಕ್ಕದಲ್ಲಿದ್ದ ದಿನೇಶ್ ಗುಂಡೂರಾವ್ ಬಳಿ 10 ಸಾವಿರ ರೂ ಇದೆಯಾ ಎಂದು ಡಿಕೆಶಿ ಕೇಳಿದರು. ಆಗ ನಾನು ಕೊಡುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

  ಇದನ್ನೂ ಓದಿ: ರಾಜ್ಯಸಭೆಗೆ ಬಿಜೆಪಿ ಹೈಕಮಾಂಡ್ ಅಚ್ಚರಿಯ ಆಯ್ಕೆ; ಅಶೋಕ್ ಗಸ್ತಿ, ಈರಣ್ಣ ಕಡಾಡಿ ಅಭ್ಯರ್ಥಿಗಳು!

  ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್ 19ರಂದು ಚುನಾವಣೆ ನಡೆಯುತ್ತಿದೆ. ಬಿಜೆಪಿಗೆ 2 ಮತ್ತು ಕಾಂಗ್ರೆಸ್​ಗೆ 1 ಸ್ಥಾನ ಸಿಗುವುದು ಖಚಿತವಿದೆ. ಇನ್ನೊಂದು ಸ್ಥಾನಕ್ಕೆ ಜೆಡಿಎಸ್​ನಿಂದ ದೇವೇಗೌಡರು ಪ್ರಯತ್ನಿಸುತ್ತಿದ್ದು ಕಾಂಗ್ರೆಸ್​ನ ಹೆಚ್ಚುವರಿ ವೋಟುಗಳ ಪಡೆದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್​ನಿಂದ ಮಲ್ಲಿಕಾರ್ಜುನ ಖರ್ಗೆ ಮಾತ್ರ ಸ್ಪರ್ಧಿಸುತ್ತಿದ್ಧಾರೆ. ಬಿಜೆಪಿಯಿಂದ ಅಶೋಕ್ ಗಸ್ತಿ ಮತ್ತು ಈರಣ್ಣ ಕಡಾಡಿ ಅಭ್ಯರ್ಥಿಯಾಗುತ್ತಿದ್ದಾರೆ.

  First published: