ಲಿಂಗಾಯತರಿಗೆ ಕೆಲಸ ಮಾಡಿದ್ದು ಸಿದ್ದರಾಮಯ್ಯ- ಬಿಜೆಪಿಗೆ ಟಾಂಟ್ ಕೊಟ್ಟ ದಿನೇಶ್ ಗುಂಡೂರಾವ್

ಜೆಡಿಎಸ್ ಪಕ್ಷಕ್ಕೆ ಬದ್ದತೆ ಇಲ್ಲ, ಅದಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಸ್ಥಿರ ಸರ್ಕಾರ ಬರುವುದು ಜೆಡಿಎಸ್ ನಾಯಕರಿಗೆ ಇಷ್ಟ ಇಲ್ಲ. ರಾಜದಲ್ಲಿ ಅತಂತ್ರ ಸರ್ಕಾರ ಬರಬೇಕು ಎನ್ನುವುದು ಅವರ ಉದ್ದೇಶ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಸಿದ್ದರಾಮಯ್ಯ.

ಸಿದ್ದರಾಮಯ್ಯ.

  • Share this:
ನವದೆಹಲಿ, ಅ. 26: ಲಿಂಗಾಯತ ಸಮುದಾಯದ ಏಳಿಗೆಗೆ ನಿಜವಾಗಿಯೂ ಶ್ರಮಿಸಿದವರು ಮತ್ತು ಬಸವಣ್ಣನ (Basavanna) ನಿಜವಾದ ಅನುಯಾಯಿ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Former Chief Minister Siddaramaiah) ಅವರು. ಆದರೆ ಬಿಜೆಪಿ (BJP) ಲಿಂಗಾಯತ ಸಮುದಾಯವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ (Vote Bank Politics) ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ (KPCC Former President Dinesh Gundurao) ಹೇಳಿದರು.

ಗೋವಾ (Goa) ಮತ್ತು ತಮಿಳುನಾಡು (Tamilunadu) ಕಾಂಗ್ರೆಸ್ (Congress) ಉಸ್ತುವಾರಿಯೂ ಆಗಿರುವ ದಿನೇಶ್ ಗುಂಡೂರಾವ್ ಅವರು ದೆಹಲಿಯ ಎಐಸಿಸಿ ಕಚೇರಿಯಲ್ಲಿ (AICC Head Quarters) ಮಂಗಳವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿ (Pradesh Congress Samiti) ಅಧ್ಯಕ್ಷರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ (AICC General Secretaries) ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಇದೇ ವೇಳೆ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಟ್ರೋಲ್ ಮಾಡುತ್ತಿರುವ ಬಿಜೆಪಿ ಬಗ್ಗೆ ಕಿಡಿ ಕಾರಿದರು.

ಸಿದ್ದರಾಮಯ್ಯ ಲಿಂಗಾಯತ ವಿರೋಧಿಯಲ್ಲ:

ಭಾರತೀಯ ಜನತಾ ಪಕ್ಷ ಲಿಂಗಾಯತ ಸಮುದಾಯವನ್ನು ತನ್ನ ಓಟ್ ಬ್ಯಾಂಕ್ ಎಂದುಕೊಂಡಿದೆ. ಅದನ್ನು ಉಳಿಸಿಕೊಳ್ಳಲು ಏನ್ ಬೇಕಾದರೂ ಮಾಡಲು ಸಿದ್ಧವಿದೆ. ಸಿದ್ದರಾಮಯ್ಯ ಆ ತರಹದವರಲ್ಲ. ಅವರು ಮುಖ್ಯಮಂತ್ರಿ (Chief Minister) ಆಗಿದ್ದಾಗ ರಾಜ್ಯ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕಬೇಕೆಂಬ ಆದೇಶ ಮಾಡಿದರು.‌ ಅನುಭನ ಮಂಟಪ (Anubhava Mantapa) ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದು ಕೂಡ ಸಿದ್ದರಾಮಯ್ಯ ಅವರೇ. ಆದರೆ ಬಿಜೆಪಿ ರಾಜಕೀಯ ಲಾಭಕ್ಕೆ ಹೀಗೆ ಹೇಳಿಕೆ ನೀಡುತ್ತಿದೆ. ಸಿದ್ದರಾಮಯ್ಯ ಅವರನ್ನು ಲಿಂಗಾಯತರ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ:

ಇದೇ ವೇಳೆ ರಾಜ್ಯದಲ್ಲಿ ಉಪ ಚುನಾವಣೆ (By Election) ನಡೆಯುತ್ತಿರುವ ಸಿಂಧಗಿ ಮತ್ತು ಹಾನಗಲ್ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಕಾಂಗ್ರೆಸ್‌ ಪರವಾದ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ (JDS) ಮುಸ್ಲಿಂ (Muslim) ಸಮುದಾಯಕ್ಕೆ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಜೆಡಿಎಸ್ ಪಕ್ಷಕ್ಕೆ ಬದ್ದತೆ ಇಲ್ಲ, ಅದಕ್ಕೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. ಸ್ಥಿರ ಸರ್ಕಾರ ಬರುವುದು ಜೆಡಿಎಸ್ ನಾಯಕರಿಗೆ ಇಷ್ಟ ಇಲ್ಲ. ರಾಜದಲ್ಲಿ ಅತಂತ್ರ ಸರ್ಕಾರ ಬರಬೇಕು ಎನ್ನುವುದು ಅವರ ಉದ್ದೇಶ. ಇದು ಸಾಮಾನ್ಯ ಜನರಿಗೆ ಗೊತ್ತಿದೆ. ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಯಾಕೆ ಗೊತ್ತಿದೆ. ಜೆಡಿಎಸ್ ಗೆಲ್ಲಲು ಮುಸ್ಲಿಂಗೆ ಟಿಕೇಟ್ ನೀಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅವ್ರೇ, ನಿಮಗೆ ಧಮ್ ಇದ್ರೆ ಒಂದೇ ವೇದಿಕೆ ಬನ್ನಿ ಚರ್ಚೆ ಮಾಡೋಣ: Siddaramaiah ಸವಾಲು

ಸಭೆಯಲ್ಲಿ ಚರ್ಚೆಯಾದ ವಿಷಯಗಳು:

ಪಿಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಸಭೆಯ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, ಸಭೆಯಲ್ಲಿ ಪಕ್ಷದ ಆತಂಕರಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ನವೆಂಬರ್ 1ರಿಂದ ಮಾರ್ಚ್ ಅಂತ್ಯದವರೆಗೂ ಸದಸ್ಯತ್ವ ನೊಂದಣಿ ಅಭಿಯಾನ ನಡೆಸಲು ನಿರ್ಧರಿಸಲಾಯಿತು. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸದಸ್ಯ ಮಾಡಿಸಲು ನಿರ್ಧರಿಸಲಾಯಿತು. ಸಾಮಾನ್ಯ ಕಾರ್ಯಕರನ್ನು ಭೇಟಿ ಮಾಡಿ ಸದಸ್ಯ ಮಾಡಲಿದ್ದೇವೆ. ಪಕ್ಷದ ಆಂತರಿಕ ಚುನಾವಣೆಗೆ (Internal Elections) ಸದಸ್ಯತ್ವ ಮುಖ್ಯ. ಆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.

ದೇಶಾದ್ಯಂತ ಹಲವು ಸಮಸ್ಯೆಗಳಿದ್ದು ಜನ‌ ತೀವ್ರ ಸಂಕಷ್ಟದಲ್ಲಿದ್ದಾರೆ. ಕಷ್ಟದಲ್ಲಿ ಇರುವ ಜನರ ನೆರವಿಗೆ ಬರುವ ಬದಲು ಕೇಂದ್ರ ಬಿಜೆಪಿ ಸರ್ಕಾರ (Union Government) ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ಹೆಚ್ಚಳ ಮಾಡಿ ಇನ್ನಷ್ಟು‌ ಹೊರೆ ಏರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚೆಚ್ಚು ತೆರಿಗೆ ಹಾಕಿ ಜನರಿಂದ ಹಣವನ್ನು ಲೂಟಿ ಮಾಡುತ್ತಿದೆ. ಸರ್ಕಾರದ ಬೊಕ್ಕಸ ತುಂಬಿಸಿಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಅಲ್ಲಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈಗ ಪ್ರತಿಭಟನೆಯನ್ನು ತೀವ್ರಗೊಳಿಸಿ ನವೆಂಬರ್ 14ರಿಂದ ದೇಶಾದ್ಯಂತ ಬೆಲೆ ಏರಿಕೆ ಬಗ್ಗೆ 'ಜನ ಜಾಗರಣ್ ಅಭಿಯಾನ' (Jan Jagaran Abhiyana) ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು‌ ಬೀದಿಗೆ ಇಳಿದು ಹೋರಾಟ ಮಾಡಬೇಕು. ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಮತ್ತು ಜನಸಾನ್ಯರು ಕಾಂಗ್ರೆಸ್ ಪ್ರತಿಭಟನೆ ಜೊತೆ ಕೈಜೋಡಿಸುವಂತೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಒಗ್ಗಟ್ಟಿನಿಂದ ದೇಶ ಉಳಿಸುವ ಕಾರ್ಯದಲ್ಲಿ ಶಿಸ್ತಿನಿಂದ ಇರಬೇಕು ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ಕರ್ನಾಟಕದ (Karnataka) ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತ್ಯೇಕವಾಗಿ ಚರ್ಚೆಯಾಗಿಲ್ಲ ಎಂದು ತಿಳಿಸಿದರು.

ವರದಿ: ಧರಣೀಶ್ ಬೂಕನಕೆರೆ
Published by:Vijayasarthy SN
First published: