Karnataka Congress: ಟಿಕೆಟ್​ ಕೊಡುವ ವಿಚಾರ ಒಬ್ಬರ ತೀರ್ಮಾನ ಅಲ್ಲ; ಡಿಕೆಶಿಗೆ ದಿನೇಶ್​ ಗುಂಡೂರಾವ್​ ತಿರುಗೇಟು

ಹೇಳಿದ ಕೆಲಸ ಮಾಡ್ದೆ ಇದ್ರೆ ಟಿಕೆಟ್​ ಕೊಡಲ್ಲ ಎನ್ನುವ ಮಾತು ಸರಿ ಅಲ್ಲ, ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕಾರ ಕೊಡ್ತಾರೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆತಂಕ ಪಡೋ ಅಗತ್ಯ ಇಲ್ಲ. ಕೆಲವರಿಗೆ ಮಾಡೋಕೆ ಆಗುತ್ತೆ ಕೆಲವರು ಜಾಸ್ತಿ ಮಾಡ್ತಾರೆ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

D.K ಶಿವಕುಮಾರ್​, ದಿನೇಶ್​ ಗುಂಡೂರಾವ್​

D.K ಶಿವಕುಮಾರ್​, ದಿನೇಶ್​ ಗುಂಡೂರಾವ್​

  • Share this:
ಕಾಂಗ್ರೆಸ್​ ಸಭೆಯಲ್ಲಿ ಕೈ​ ಶಾಸಕರ (Congress MLA) ವಿರುದ್ಧ ಗರಂ ಆಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ಗೆ (D.K Shivakumar) ಇದೀಗ ಕಾಂಗ್ರೆಸ್​ ನಾಯಕರೇ (Congress Leaders) ತಿರುಗೇಟು ನೀಡಿದ್ದಾರೆ. ಶಾಸಕರು  ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದಿದ್ರು. ಅಲ್ಲದೇ ಮುಂದಿನ ಎಲೆಕ್ಷನ್​ನಲ್ಲಿ (Election) ಪಕ್ಷ ಹಾಗೂ ಜನರಿಗಾಗಿ ಕೆಲಸ ಮಾಡಿದವರಿಗೆ ಟಿಕೆಟ್ (Ticket) ನೀಡೋದಾಗಿ ಘೋಷಿಸಿದ್ರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ 18 ಕನ್ನಡಕ್ಕೆ ಎಕ್ಸ್​ಕ್ಲೂಸಿವ್ ಹೇಳಿಕೆ ನೀಡಿದ್ದಾರೆ.​ ಕಾಂಗ್ರೆಸ್ ನಲ್ಲಿ ಟಿಕೆಟ್ ಕೊಡುವುದು ಒಬ್ಬರೇ ಅಲ್ಲ, ಎಲ್ಲ ನಾಯಕರು ಸೇರಿಯೇ ತೀರ್ಮಾನ ಮಾಡುತ್ತಾರೆ ಎಂದ್ರು. ಒಬ್ಬರ ಕೈಯಲ್ಲಿ ಏನೂ ಇಲ್ಲ ಎಂದು ಡಿಕೆ ಶಿವಕುಮಾರ್​ಗೆ ದಿನೇಶ್​ ಗುಂಡೂರಾವ್ (Dinesh Gundurao)​ ತಿರುಗೇಟು ನೀಡಿದ್ದಾರೆ. ಒತ್ತಡದ ಮೇಲೆ ಕಾರ್ಯಕ್ರಮ ಮಾಡಬೇಕು ಎಂಬ ಒತ್ತಡ ಹಾಕೋದು ಸರಿ ಅಲ್ಲ ಎಂದು ಕಿವಿಮಾತು ಹೇಳಿದ್ರು.

ಡಿಕೆಶಿಗೆ ತಿರುಗೇಟು ಕೊಟ್ಟ ದಿನೇಶ್​ ಗುಂಡೂರಾವ್​

ಇನ್ನು ಅವರು ಹೇಳಿದ ಕೆಲಸ ಮಾಡ್ದೆ ಇದ್ರೆ ಟಿಕೆಟ್​ ಕೊಡಲ್ಲ ಎನ್ನುವ ಮಾತು ಸರಿ ಅಲ್ಲ, ಕಾರ್ಯಕ್ರಮ ಯಶಸ್ಸಿಗೆ ಎಲ್ಲರೂ ಸಹಕಾರ ಕೊಡ್ತಾರೆ. ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಆತಂಕ ಪಡೋ ಅಗತ್ಯ ಇಲ್ಲ. ಕೆಲವರಿಗೆ ಮಾಡೋಕೆ ಆಗುತ್ತೆ ಕೆಲವರು ಜಾಸ್ತಿ ಮಾಡ್ತಾರೆ, ಇನ್ನು ಕೆಲವರು ಕಡಿಮೆ ಸಹಕಾರ ಕೊಡ್ತಾರೆ ಇದೇನು ದೊಡ್ಡ ವಿಚಾರ ಅಲ್ಲ ಬಿಡಿ. ಎಲ್ಲಾ ಚೆನ್ನಾಗಿಯೇ ಮಾಡ್ತೇವೆ, ಎಲ್ಲರೂ ಸೇರಿಯಾಗಿಯೇ ಮಾಡ್ತೇವೆ ಎಂದು ದಿನೇಶ್​ ಗುಂಡೂರಾವ್​ ಹೇಳಿದ್ದಾರೆ.

D K Shivakumar attack on bjp for cbi given a notice to his close friend vijay Mulagund
ಡಿ.ಕೆ. ಶಿವಕುಮಾರ್


ಟಿಕೆಟ್​ ತೀರ್ಮಾನ ಮಾಡಲು ಕಮಿಟಿ ಇದೆ

ಚುನಾವಣೆಗೆ ಇನ್ನು ಸಮಯ ಇದೆ ಟಿಕೆಟ್ ಕೊಡುವ ವಿಚಾರವನ್ನು ಒಬ್ರೇ ತೀರ್ಮಾನ ಮಾಡಲ್ಲ. ಅದಕ್ಕೆ ಅಂತಾನೇ ಚುನಾವಣಾ ಸಮಿತಿ ಇದೆ. ಸ್ಕ್ರೀನಿಂಗ್ ಕಮಿಟಿ ಇದೆ, ಸೆಂಟ್ರಲ್ ಎಲೆಕ್ಷನ್ ಕಮಿಟಿ , ಜಿಲ್ಲಾ ಕಮಿಟಿ, ಸ್ಟೇಟ್ ಕಮಿಟಿ ಇದೆ, ಎಲ್ಲಾ ಸೇರಿ ತೀರ್ಮಾನ ಮಾಡೋದು ಎನ್ನುವ ಮೂಲಕ ಡಿಕೆಶಿ ಹೇಳಿಕೆ ಸ್ವಪಕ್ಷ ನಾಯಕ ದಿನೇಶ್​ ಗುಂಡೂರಾವ್​ ತಿರುಗೇಟು ನೀಡಿದ್ದಾರೆ

ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುವೆ

ಗೋವಾ ಟಿಕೆಟ್ ಹಂಚಿಕೆಯಲ್ಲಿ ಕೋಟಿ ಕೋಟಿ ಹಣ ಪಡೆದಿರೋ ಆರೋಪಕ್ಕೆ ಸಂಬಂಧಿಸಿದಂತೆ ದಿನೇಶ್​ ಗುಂಡೂರಾವ್​ ಕಿಡಿಕಾರಿದ್ದಾರೆ. 12 ಜನ ಶ್ರೀಮಂತರಿಂದ ಹಣ ಪಡೆದು ಟಿಕೆಟ್ ನೀಡಲಾಗಿದೆ ಎಂದು ಪಕ್ಷಾಂತರಗೊಂಡ ಶಾಸಕ ಸಂಕಲ್ಪ ಅಮೋನಕರ್ ಗಂಭೀರ ಆರೋಪ ಮಾಡಿದ್ರು. ಈ ಆರೋಪದ ಪ್ರಶ್ನೆಗೆ ದಿನೇಶ್​ ಗುಂಡೂರಾವ್​ ಕೆಂಡಾಮಂಡಲರಾಗಿದ್ರು. ಒಂದೇ ಒಂದು ರೂಪಾಯಿ ಹಣ ಪಡೆದು ಟಿಕೆಟ್ ಕೊಟ್ಟಿದ್ದೇನೆಂದು ಸಾಬೀತು ಪಡಿಸಲಿ ನೋಡೋಣ, ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲ್ ಹಾಕಿದ್ದಾರೆ. ಸಂಕಲ್ಪ ಅಮೋನಕರ್ 30 ಕೋಟಿ ಹಣ ಪಡೆದು ಬಿಜೆಪಿ ಸೇರಿದ್ದಾರೆ. ನನ್ನ ಬಗ್ಗೆ ಆರೋಪ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ದಿನೇಶ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Basangouda Patil Yatnal: ಸಿಎಂಗೆ ಧಮ್ ಇದ್ದರೆ ಎನ್​​ಕೌಂಟರ್ ಮಾಡಲಿ; ಶಾಸಕ ಯತ್ನಾಳ್

ಕೈ ನಾಯಕರ ಮುಸುಕಿನ ಗುದ್ದಾಟ

ಭಾರತ್ ಜೋಡೋ ಯಾತ್ರೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ಗೊಂದಲ ಉಂಟಾಗಿದ್ದು, ಕೈ ನಾಯಕರ ಮುಸುಕಿನ ಗುದ್ದಾಟ ಬಟಾಬಯಲಾಗಿದೆ. ಕಾಂಗ್ರೆಸ್ ‌ಪಕ್ಷದ‌ ಶಾಸಕರ ವಿರುದ್ಧ ಡಿಕೆಶಿ ವೇದಿಕೆಯಲ್ಲೇ ಗರಂ ಆದ್ರು. ನಮ್ಮಲ್ಲಿ ಕೆಲ ಶಾಸಕರು ಇದ್ದಾರೆ. ಒಂದು ದಿನ ಬಂದು ಕೆಲಸ ಮಾಡೋಕೆ ಆಗಲ್ಲ. ನಾನು ದೇಶಪಾಂಡೆ ಅವರಿಗೆ ಒಂದು ದಿನ ಜನರನ್ನ ಕಳಿಸೋಕೆ  ಕೇಳಿದೆ. ಅವರು ಆಗಲ್ಲ ಅಂದ್ರು , 5 ವರ್ಷದಲ್ಲಿ ಒಂದು ದಿನ ಅದ್ರೂ ರಾಹುಲ್ ಗಾಂಧಿ ಜೊತೆ ಕೆಲಸ ಮಾಡೋಕೆ ಆಗಲ್ಲ ಅಂದ್ರೆ‌ ಏನ್ಮಾಡೋದು? ಯಾವ ಎಂಎಲ್‌ಎಗೂ  ಮಾಫಿ ಮಾಡೋಕೆ ಆಗಲ್ಲ.
Published by:ಪಾವನ ಎಚ್ ಎಸ್
First published: