ಸಿಎಂ ಆದವರು ಮತ ಹಾಕದವರನ್ನೂ ಸಮಾನವಾಗಿಯೇ ನೋಡಬೇಕು; ಎಚ್​ಡಿಕೆಗೆ ಟಾಂಗ್​ ನೀಡಿದ ದಿನೇಶ್​​

news18
Updated:July 26, 2018, 4:00 PM IST
ಸಿಎಂ ಆದವರು ಮತ ಹಾಕದವರನ್ನೂ ಸಮಾನವಾಗಿಯೇ ನೋಡಬೇಕು; ಎಚ್​ಡಿಕೆಗೆ ಟಾಂಗ್​ ನೀಡಿದ ದಿನೇಶ್​​
news18
Updated: July 26, 2018, 4:00 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜು.26): ಮೈತ್ರಿ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂಬ ಆಕ್ಷೇಪ ಕೇಳಿ ಬಂದ ಬೆನ್ನಲ್ಲೇ ಈಗ ಸಿಎಂ ಹೇಳಿಕೆ ಇನ್ನಷ್ಟು ಕಿಚ್ಚು ಹತ್ತಿಸಿದ್ದು,  ಉತ್ತರ ಕರ್ನಾಟಕ ಜನರಿಂದ ಪ್ರತ್ಯೇಕ ರಾಜ್ಯ ಕೂಗು ಕೇಳಿ ಬಂದಿದೆ.

ಸಿಎಂ ಉತ್ತರ ಕರ್ನಾಟಕದ ಮಂದಿ ನನಗೆ ಮತ ಹಾಕಿ ಸಹಾಯ ಮಾಡಿಲ್ಲ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಆಗಸ್ಟ್​ 2ರಂದು ಬಂದ್​ಗೆ ಕರೆ ನೀಡಿದ್ದಾರೆ.

ಈ ಬೆಳವಣಿಗೆ ಹಿನ್ನಲೆ ಈಗ ಮೈತ್ರಿ ಪಾಳಯದ ಕಾಂಗ್ರೆಸ್​ ನಾಯಕರು ಆ ಭಾಗದ ಜನರ ಮನವೊಲಿಕೆ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್​ನಲ್ಲಿ ಯಾವುದೇ ಅನ್ಯಾಯವಾಗಿಲ್ಲ.  ಕೆಲವರು ಬಜೆಟ್ ಅನ್ನು ತಪ್ಪಾಗಿ ಅರ್ಥೈಸಿ ಸುಳ್ಳು ಹರಡಿಸುತ್ತಿದ್ದಾರೆ. ಎಲ್ಲ ಭಾಗಗಳನ್ನೂ ಅಭಿವೃದ್ಧಿ ಮಾಡುವುದು ಕಾಂಗ್ರೆಸ್ ನ ಉದ್ದೇಶ ಎಂದಿದ್ದಾರೆ.

ಜೆಡಿಎಸ್ ಶಾಸಕರು ಮಾತ್ರ ಹಾಸನ, ಮಂಡ್ಯ, ರಾಮನಗರ ಕ್ಷೇತ್ರಗಳಿಂದ ಗೆದ್ದು ಬಂದಿದ್ದಾರೆ. ಆದರೆ ಕಾಂಗ್ರೆಸ್ ಶಾಸಕರು ಎಲ್ಲ ಭಾಗಗಳಿಂದಲೂ ಗೆದ್ದು ಬಂದಿದ್ದಾರೆ. ನಮ್ಮ ಸಚಿವ ಸಂಪುಟದಲ್ಲಿಯೂ ಉತ್ತರ ಕರ್ನಾಟಕ ಜನರಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.

ಸಿಎಂ ಕುಮಾರಸ್ವಾಮಿ  ರಾಜ್ಯದ ಸಿಎಂ ಆಗಿ ಎಲ್ಲ ಜನರನ್ನೂ ಪ್ರತಿನಿಧಿಸುತ್ತಾರೆ. ಮತ ಹಾಕುವುದಕ್ಕೂ ಅಭಿವೃದ್ಧಿಗೂ ಯಾವುದೇ ಸಂಬಂಧ ಇಲ್ಲ.  ಕರಾವಳಿಯಲ್ಲಿ ನಮ್ಮ ಶಾಸಕರಿಲ್ಲ ಅಂತ ನಾವು ತಿರಸ್ಕಾರ ಮಾಡುವುದಕ್ಕೆ ಸಾಧ್ಯವಿಲ್ಲ. ಸಿಎಂ ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಯಾವ ಮಾತುಗಳನ್ನಾಡಿದ್ದಾರೆ ಗೊತ್ತಿಲ್ಲ. ಆದರೆ ಸಮಗ್ರ ಕರ್ನಾಟಕ ಅಭಿವೃದ್ಧಿ ಸಿಎಂ ಗುರಿ.  ರಾಜಕೀಯ ಮಾತುಗಳಿಗೂ ಅಡಳಿತಾತ್ಮಕ ವಿಚಾರಕ್ಕೂ ಸಂಬಂಧ ಇರುವುದಿಲ್ಲ ಎಂದು ಪರೋಕ್ಷವಾಗಿ ಅವರಿಗೆ ಟಾಂಗ್​ ನೀಡಿದರು.

ಇಬ್ಬರ ನಡುವಳಿಕೆ ಮುಖ್ಯ:  ಮೈತ್ರಿ ಸರ್ಕಾರದ ಬಗ್ಗೆ ಕಾಂಗ್ರೆಸ್​ ನಾಯಕರು ಬಹಿರಂಗವಾಗಿ ಅಸಮಾಧಾನದ ಹೇಳಿಕೆ ನೀಡುತ್ತಿರುವ ಬಗ್ಗೆ ಹೈ ಕಮಾಂಡ್​ ಇದು ಸರ್ಕಾರದ ಆಡಳಿತ ವೈಖರಿ ಮೇಲೆ ಹಾಗೂ ಲೋಕಸಭಾ ಚುನಾವಣೆಗೆ ಧಕ್ಕೆ ಮೂಡಲಿದೆ ಎಂದು ಸೂಚನೆ ನೀಡಿತು.
Loading...

ಈ ಬಗ್ಗೆ ಮಾತನಾಡಿದ್ದ ಸಿಎಂ  ಮೈತ್ರಿ ವಿಚಾರ ಕಾಂಗ್ರೆಸ್​ ನಾಯಕರ ನಡುವಳಿಕೆಯನ್ನು ನಿರ್ಧರಿಸುತ್ತದೆ. ಅವರು  ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ಕಾಂಗ್ರೆಸ್​ ನಾಯಕರ ಮೇಲೆ ಸಿಎಂ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಇದು ಮೈತ್ರಿ ಸರ್ಕಾರವಾದ್ದರಿಂದ ಇಬ್ಬರ ನಡವಳಿಕೆಯೂ ಮುಖ್ಯ.  ಇಬ್ಬರ ನಡವಳಿಕೆಯೂ ಸರಿಯಾಗಿರಬೇಕು. ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಎಂದು ಕುಮಾರಸ್ವಾಮಿಯವರ ಸಮ್ಮುಖದಲ್ಲೇ ತೀರ್ಮಾನವಾಗಿದೆ ಎಂದು ತಿರುಗೇಟು ನೀಡಿದರು

 

ಮಾಧ್ಯಮಕ್ಕೆ ನಿಷೇಧ ಇಲ್ಲ:  ಮಾಧ್ಯಮಗಳ ಜೊತೆ ಉತ್ತಮ ಸಂಬಂಧ ಇರಬೇಕಾಗುತ್ತೆ. ಸರ್ಕಾರ ಹಾಗೂ ಜನರ ನಡುವಿನ ಸಂಪರ್ಕ ಕೊಂಡಿ ಮಾಧ್ಯಮ. ಈ ಕಾರಣದಿಂದ ಮಾಧ್ಯಮಗಳಿಗೆ ಹೇರುವ ಸಾಧ್ಯತೆ ಇಲ್ಲ.   ಆದರೆ,  ಈ ನಿಯಮವನ್ನು ವ್ಯವಸ್ಥಿತವಾಗಿ ಜಾರಿಯಾಗಿರಬೇಕು ಅಷ್ಟೇ ಎಂದರು.

 
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...