ಶಾಸಕರ ಭೇಟಿಗೆ ಅವಕಾಶ ಕೋರಿ ಹೈಕೋರ್ಟ್ ಮೊರೆಹೋದ ದಿಗ್ವಿಜಯ್ ಸಿಂಗ್

ಶಾಸಕರ ಭೇಟಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ನನಗೆ ಅವರ ಭೇಟಿಗೆ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. 

ದಿಗ್ವಿಜಯ್ ಸಿಂಗ್

ದಿಗ್ವಿಜಯ್ ಸಿಂಗ್

  • Share this:
ಬೆಂಗಳೂರು(ಮಾ. 18 ): ಮಧ್ಯ ಪ್ರದೇಶ ಕಾಂಗ್ರೆಸ್ ಶಾಸಕರ ಭೇಟಿಗೆ ಅವಕಾಶ ನೀಡುವಂತೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್ ​ಹೈಕೋರ್ಟ್​ಗೆ ರಿಟ್​ ಅರ್ಜಿ ಸಲ್ಲಿಸಿದ್ದಾರೆ.  

ನಾನು ರಾಜ್ಯಸಭಾ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದು, ಪ್ರಚಾರ ನಡೆಸಿ ಮತ ಕೇಳುವುದು ನಮ್ಮ ಹಕ್ಕು. ಹಾಗಾಗಿ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರರಿಂದ ಮತ ಕೇಳಲು ಇಲ್ಲಿಗೆ ಬಂದಿದ್ದೆ. ಆದರೆ , ಶಾಸಕರ ಭೇಟಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಹಾಗಾಗಿ ನನಗೆ ಅವರ ಭೇಟಿಗೆ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತುರ್ತು ವಿಚಾರಣೆಗೆ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಮನವಿ ಸಲ್ಲಿಸಿದ್ದಾರೆ. ಇಂದೇ ಅರ್ಜಿ ವಿಚಾರಣೆ್ಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಗರದ ಹೊರ ವಲಯದಲ್ಲಿರುವ ರಮಾಡ ರೆಸಾರ್ಟ್​ ಮುಂಜಾನೆಯೇ ರಾಜಕೀಯ ಹೈಡ್ರಾಮಾಗೆ ಸಾಕ್ಷಿಯಾಯಿತು. ಮಧ್ಯ ಪ್ರದೇಶ ಕಾಂಗ್ರೆಸ್‌ನ ಕೆಲ ರೆಬೆಲ್​ ಶಾಸಕರು ಇಲ್ಲಿ ತಂಗಿದ್ದು, ಇವರನ್ನು ಭೇಟಿ ಮಾಡಲು ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್​ ಆಗಮಿಸಿದ್ದರು. ಆದರೆ, ಭೇಟಿಗೆ ಅವಕಾಶ ಸಿಗದ ಕಾರಣ ಅವರು ಸೇರಿದಂತೆ 500 ಮಂದಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು​ ತೀವ್ರ ಪ್ರತಿಭಟನೆ ನಡೆಸಿದ್ದರು.

ಆಪರೇಷನ್​ ಕಮಲ ಮಾಡುವಾಗ ಬಿಜೆಪಿ ರಾಜ್ಯದ ಕೆಲ ಕಾಂಗ್ರೆಸ್​ ಶಾಸಕರನ್ನು ಮುಂಬೈ ಹೋಟೆಲ್​ನಲ್ಲಿ ಇರಿಸಿತ್ತು. ಈ ವೇಳೆ ಡಿಕೆ ಶಿವಕುಮಾರ್​ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಅಲ್ಲಿನ ಪೊಲೀಸರು ಭೇಟಿಗೆ ಅವಕಾಶ ನೀಡಿರಲಿಲ್ಲ. ಈಗ ಇದೇ ಪರಿಸ್ಥಿತಿ ದಿಗ್ವಿಜಯ್​ ಸಿಂಗ್​ಗೂ ಬಂದೊದಗಿದೆ. ಶಾಸಕರನ್ನು ಭೇಟಿ ಮಾಡಲು ಅವರು ಪ್ರಯತ್ನಿಸಿದರಾದರೂ ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ.

ಬಿಜೆಪಿಯನ್ನು ನಾವು ಮಧ್ಯಪ್ರದೇಶದಲ್ಲಿ 2018 ರಲ್ಲಿ ಸೋಲಿಸಿದೆವು.  ಸಿಎಂ  ಕಮಲನಾಥ್ ಬಿಜೆಪಿಯ ಲ್ಯಾಂಡ್ ಮಾಫಿಯಾ, ಮೈನಿಂಗ್ ಮಾಫಿಯಾ, ಸ್ಯಾಂಡ್ ಮಾಫಿಯಾ ವಿರುದ್ದ ಹೋರಾಟ ನಡೆಸಿದ್ದರು. ಇದು ಬಿಜೆಪಿ ನಾಯಕರಿಗೆ ಸಹಿಸೋದಕ್ಕೆ ಸಾಧ್ಯವಾಗಲಿಲ್ಲ. ಶಾಸಕರನ್ನು ಖರೀದಿ ಮಾಡಿ ಇಲ್ಲಿ ಇಟ್ಡುಕೊಂಡಿರುವುದು ದುರದೃಷ್ಟ. ನಮ್ಮ ಕಾಂಗ್ರೆಸ್ ಪಕ್ಷ ಸಿದ್ದಾಂತದಲ್ಲಿ ನಂಬಿಕೆ‌ ಇಟ್ಟಿಕೊಂಡಿರುವ ಪಕ್ಷ. ಸಿದ್ಧಾಂತಕ್ಕೆ ಬೆಲೆ ಕೊಡುತ್ತಿದ್ದ ವಾಜಪೇಯಿಯಂಥ ನಾಯಕತ್ವ ಈಗ ಬಿಜೆಪಿಗೆ ಇಲ್ಲ ಎಂದು ದಿಗ್ವಿಜಯ್ ಸಿಂಗ್ ವ್ಯಥೆ ಪಟ್ಟರು.

ಬಿಜೆಪಿಯ ಕಾರ್ಯಕ್ರಮಗಳು ಹೇಗಿದೆ ಜನರಿಗೆ ಗೊತ್ತಿದೆ. ವ್ಯಾಪಂ ಕೇಸ್,ಮನಿ ಲ್ಯಾಂಡರಿಂಗ್,ಹನಿಟ್ರ್ಯಾಪ್ ಪ್ರಕರಣ ನಡೆದಿವೆ ಇದೆಲ್ಲದರ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಮೈನಿಂಗ್ ಮಾಫಿಯಾಕೆ ಕಮಲ್ ನಾಥ್ ಕಡಿವಾಣ ಹಾಕಿದ್ದರು. ಆಡಳಿತದಲ್ಲಿ ಪಾರದರ್ಶಕತೆಯನ್ನ ತಂದಿದ್ದರು. ಸರ್ಕಾರ ರಚನೆಯಿಂದಲೂ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡಿದ್ದರು. ಕರ್ನಾಟಕದಲ್ಲೂ ಕುದುರೆ ವ್ಯಾಪಾರ ಮಾಡಿದ್ದು ಗೊತ್ತಿದೆ. ಇದನ್ನ ಬಿಜೆಪಿ ಈಗಲೂ ಮುಂದುವರಿಸಿಕೊಂಡು ಬರುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ : ಅಮೃತಹಳ್ಳಿ ಪೊಲೀಸ್ ಠಾಣೆಯಿಂದ ದಿಗ್ವಿಜಯ್ ಸಿಂಗ್ ಮತ್ತಿತರರು ಬಿಡುಗಡೆ; ಎಫ್ಐಆರ್ ದಾಖಲು

ದೇಶದಲ್ಲಿ ಹಲವು ಸಮಸ್ಯೆಗಳು ತಾಂಡವವಾಡುತ್ತಿದ್ದು, ಉದ್ಯೋಗವಿಲ್ಲದೆ ಜನ ಪರದಾಡುತ್ತಿದ್ದಾರೆ. ಕೊರೋನಾ ವೈರಸ್ ಇಂದು ತಲ್ಲಣವನ್ನೇ ಮೂಡಿಸಿದೆ. ಇದರ ಬಗ್ಗೆ ಗಮನ ಹರಿಸೋಕೆ ಪ್ರಧಾನಿಗೆ ಬಿಡುವಿಲ್ಲ. ಬಿಜೆಪಿ ನಾಯಕರು ಶಾಸಕರ ಖರೀದಿಗೆ ಒತ್ತು ನೀಡಿದ್ದಾರೆ. ಪ್ರಜಾಪ್ರಭುತ್ವದ ಮೇಲೆ ಬಂದ ಸರ್ಕಾರಗಳನ್ನ ಉರುಳಿಸ್ತಿದ್ದಾರೆ ಎಂದು  ಬಿಜೆಪಿ ನಾಯಕರ ವಿರುದ್ಧ ದಿಗ್ವಿಜಯ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
First published: