ನೀವೆಲ್ಲಾ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambarish) ಹಾಗೂ ವಿಷ್ಣುದಾದಾ(Vishnu Vardhan) ಅಭಿನಯದ ದಿಗ್ಗಜರು ಸಿನಿಮಾ(Diggajaru Film) ನೋಡಿಯೇ ನೋಡಿರುತ್ತೀರಿ. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಅವರ ಮನೋಜ್ಞ ಅಭಿನಯಕ್ಕೆ ನೀವೆಲ್ಲಾ ಮಾರುಹೋಗಿ ಇರುತ್ತೀರಿ. ಕನ್ನಡದ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ(Hit Film) ಒಂದಾಗಿರುವ ದಿಗ್ಗಜರು ಸಿನಿಮಾದ ಪ್ರತಿಯೊಂದು ದೃಶ್ಯಗಳು ಕನ್ನಡಿಗರ(Kannadiga) ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ.. ಅದರಲ್ಲೂ ದಿಗ್ಗಜರು ಸಿನಿಮಾದ ಹಾಸ್ಯ ದೃಶ್ಯಗಳಲ್ಲೂ ಅತಿ ಹೆಚ್ಚು ನೆನಪಾಗುವ ದೃಶ್ಯ ಅಂದರೆ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರು ಕಾರು ಖರೀದಿಗೆ ಬರುವ ದೃಶ್ಯ.. ಹಳ್ಳಿಯಿಂದ ಬಂದವರು ಎನ್ನುವ ಕಾರಣಕ್ಕೆ ಕಾರು ಶೋ ರೂಮ್ ನಲ್ಲಿ(Car Show Room) ಇಬ್ಬರಿಗೂ ಅವಮಾನ ಉಂಟಾಗುತ್ತದೆ. ಈ ವೇಳೆ ಮೂಟೆಯಲ್ಲಿ ತಂದಿದ್ದ ಹಣವನ್ನು(Money) ರಾಶಿರಾಶಿಯಾಗಿ ಸುರಿದು ಕಾರು ಖರೀದಿ ಮಾಡಿ ಹಳ್ಳಿಗರು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ವಿಷ್ಣುವರ್ಧನ್ ಹಾಗೂ ಅಂಬರೀಶ್ ಆ ಸಿನಿಮಾದ ದೃಶ್ಯದಲ್ಲಿ ನಟಿಸಿದ್ದಾರೆ..
ಹೀಗಾಗಿ ಈ ಸಿನಿಮಾದ ದೃಶ್ಯವನ್ನು ನೋಡಿ ನೀವೆಲ್ಲರೂ ಮೆಚ್ಚಿಕೊಂಡೆ ಇರುತ್ತೀರಾ.. ಆದ್ರೆ ಅಷ್ಟಕ್ಕೂ ನಾನ್ಯಾಕೆ ಈ ಸಿನಿಮಾದ ಘಟನೆಯನ್ನು ನಿಮಗೆ ಎಳೆಎಳೆಯಾಗಿ ಹೇಳುತ್ತಿದ್ದೇನೆ ಅಂತ ನೀವು ಅಂದುಕೊಳ್ಳುತ್ತಿದ್ದೀರಾ ಅಲ್ವಾ.. ಈ ಸಿನಿಮಾದಲ್ಲಿ ನಡೆದಿರುವ ದೃಶ್ಯಕ್ಕೂ ತುಮಕೂರಿನಲ್ಲಿ ನಡೆದಿರುವ ಘಟನೆಗೆ ಬಹುತೇಕ ಹೋಲಿಕೆ ಆಗುತ್ತಿದೆ.. ಹೀಗಾಗಿಯೇ ನಿಮಗೆ ದಿಗ್ಗಜರು ಸಿನಿಮಾದ ಈ ದೃಶ್ಯವನ್ನು ಒಮ್ಮೆ ಮೆಲುಕು ಹಾಕುವಂತೆ ಮಾಡಿದ್ದು..
ಕಾರು ಖರೀದಿಗೆ ಎಂದು ಬಂದ ರೈತನಿಗೆ ಅವಮಾನ
ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಐದಾರು ಜನ ಸ್ನೇಹಿತರು ಸೇರಿಕೊಂಡು, ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರುವ ಮಹಿಂದ್ರ ಶೋರೂಮ್ ಗೆ ಕಾರು ಖರೀದಿ ಮಾಡಲು ಹೋಗಿದ್ದಾರೆ.
ಇಲ್ಲಿ ಇವರ ವೇಷಭೂಷಣಗಂಡ ಶೋರೂಮ್ ಸಿಬ್ಬಂದಿಯೊಬ್ಬ ಕಾರು ಕೊಳ್ಳಲು ನಿಮ್ಮಲ್ಲಿ ಯೋಗ್ಯತೆ ಇಲ್ಲ. ಹತ್ತು ರೂಪಾಯಿಗೂ ಗತಿ ಇಲ್ಲದ ಕಾರು ಕೊಳ್ಳಲು ಯಾಕೆ ಬಂದಿದ್ದೀರಾ ಎಂದು ಅವಮಾನ ಮಾಡಿದ್ದಾನೆ.
ಶೋರೂಮ್ ಸಿಬ್ಬಂದಿಯ ಅವಮಾನಕ್ಕೆ ರೊಚ್ಚಿಗೆದ್ದ ರಾಮನ ಪಾಳ್ಯದ ಸ್ನೇಹಿತರು ಅರ್ಧಗಂಟೆಯಲ್ಲಿ ನಾವು 10 ಲಕ್ಷ ತರುತ್ತೇವೆ ನಮಗೆ ನೀವು ಕಾರು ಕೊಡಲೇಬೇಕು ಎಂದು ಹೇಳಿ ಅವಾಜ್ ಹಾಕಿ ಕಾರ್ ಶೋರೂಮ್ ಇಂದ ಹಿಂತಿರುಗಿದ್ದಾರೆ.
ಇದನ್ನೂ ಓದಿ: Koppal: ಶಾಲೆಗೆ ಕೋಟಿ ಮೌಲ್ಯದ ಭೂಮಿ ದಾನ; ಮಕ್ಕಳಿಗೆ ಅಡುಗೆ ಮಾಡಿ ಜೀವನ ನಡೆಸ್ತಿರೋ ಮಹಾತಾಯಿಯ ಕಥೆ
ಕೇವಲ ಅರ್ಧಗಂಟೆಯಲ್ಲಿ 10 ಲಕ್ಷದೊಂದಿಗೆ ಮರಳಿದ ರಾಮನ ಪಾಳ್ಯದ ಸ್ನೇಹಿತರು
ಅರ್ಧಗಂಟೆಯಲ್ಲಿ 10 ಲಕ್ಷ ದುಡ್ಡು ತರುವುದಾಗಿ ಹೇಳಿ ಹೋಗಿದ್ದ ರಾಮನ ಪಾಳ್ಯದ ಕೆಂಪೇಗೌಡ ಹಾಗೂ ಸ್ನೇಹಿತರು ಅದಕ್ಕೂ ಮೊದಲೇ ದುಡ್ಡು ತೆಗೆದುಕೊಂಡು ಗುಬ್ಬಿ ಗೇಟ್ ಬಳಿಯಿರುವ ಮಹಿಂದ್ರಾ ಕಾರ್ ಶೋರೂಮ್ ಗೆ ಪ್ರತ್ಯಕ್ಷರಾಗಿದ್ದಾರೆ.
ಹೀಗೆ ಬಂದ ಸ್ನೇಹಿತರು ನಾವು ದುಡ್ಡು ತಂದಿದ್ದೇವೆ ನಮಗೆ ಕಾರು ನೀಡಿ ಎಂದು ಶೋರೂಂನಲ್ಲಿ ಇದ್ದ ಪ್ರತಿಯೊಬ್ಬ ಸಿಬ್ಬಂದಿಗೂ ಬೆವರಿಳಿಸಿದ್ದಾರೆ. ದುಡ್ಡು ತಂದ್ರೆ ಕಾರು ಕೊಡುವುದಾಗಿ ಹೇಳಿದರು ನಾವು ದುಡ್ಡು ತಂದಿದ್ದೇವೆ ನಮಗೆ ಕಾರು ನೀಡಿ ಅಂತ ಸ್ನೇಹಿತರು ಪಟ್ಟು ಹಿಡಿದು ಕುಳಿತಿದ್ದಾರೆ..
2-3 ದಿನದಲ್ಲಿ ಕಾರು ಕೊಡ್ತೀವಿ ಅಂತ ಶೋರೂಮ್ ಸಿಬ್ಬಂದಿ ಸಬೂಬು
ನಿಮ್ಮಲ್ಲಿ 10 ರೂಪಾಯಿಗೂ ಗತಿ ಇಲ್ಲ ನಿಮಗೆ ಕಾರು ಕೊಳ್ಳಲು ಆಗುವುದಿಲ್ಲ ಎಂದು ಅವಮಾನ ಮಾಡಿದ ಕಾರು ಶೋರೂಮ್ ಸಿಬ್ಬಂದಿಗೆ ಸರಿಯಾಗಿ ಪಾಠ ಕಲಿಸಲು ಅರ್ಧಗಂಟೆಯಲ್ಲೇ 10 ಲಕ್ಷ ಹೊಂದಿಸಿಕೊಂಡು ಬಂದಿದ್ದ ರಾಮನ ಪಾಳ್ಯದ ಕೆಂಪೇಗೌಡ ಹಾಗೂ ಸ್ನೇಹಿತರಿಗೆ ಕಾರನ್ನೂ ಇನ್ನೂ ಎರಡು ಮೂರು ದಿನದಲ್ಲಿ ಕೊಡ್ತೀವಿ ಎಂದು ಶೋರೂಮ್ ಸಿಬ್ಬಂದಿ ಸಬೂಬು ಹೇಳಲು ಪ್ರಾರಂಭ ಮಾಡಿದ್ದಾರೆ.
ಇದಕ್ಕೆ ಒಪ್ಪದ ರಾಮನ ಪಾಳ್ಯದ ಸ್ನೇಹಿತರು ಕಾರ್ ಶೋರೂಮ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ.. ಕಾರನ್ನು ಇಂದೇ ಡೆಲಿವರಿ ಕೊಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ
ಕೊನೆಗೆ ರಾತ್ರಿ 10.30ರವರೆಗೂ ಚರ್ಚೆ ನಡೆಯುತ್ತೆ. ಕೊನೆಗೆ ಗಲಾಟೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತೆ. ನಂತ್ರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸೋ ಮೂಲಕ ಪ್ರಕರಣ ಅಂತ್ಯ ಕಂಡಿದೆ.
ಇದನ್ನೂ ಓದಿ: ಮಹದೇಶ್ವರ ಬೆಟ್ಟದಲ್ಲಿ ಬೀದಿಗೆ ಬಿದ್ದಿದ್ದ ಕುಟುಂಬಕ್ಕೆ ತಾತ್ಕಾಲಿಕ ವಸತಿಗೃಹ: ಪ್ರಕರಣ ಸುಖಾಂತ್ಯ
ಒಟ್ಟಾರೆ ನಾವು ಹಾಕುವ ಬಟ್ಟೆ ಮತ್ತು ಮಾತನಾಡುವ ಶೈಲಿಯಿಂದ ಯಾರನ್ನು ಅವಮಾನ ಮಾಡಬಾರದು.. ಪ್ರತಿಯೊಬ್ಬ ವ್ಯಕ್ತಿಗೂ ಅವರ ಹಿಂದೆ ಅವರದೇ ಆದ ಘನತೆ ಇರುತ್ತದೆ. ಹಾಗೂ ಬಟ್ಟೆ ಹಾಗೂ ನಡವಳಿಕೆ ವ್ಯಕ್ತಿಯ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುವುದಿಲ್ಲ ಎನ್ನುವುದು ಈ ಘಟನೆಯಿಂದ ಮತ್ತೆ ಸಾಬೀತಾಗಿದೆ.. ಸದ್ಯ ರೈತ ಎನ್ನುವ ಕಾರಣಕ್ಕೆ ಕಾರ್ ಶೋರೂಮ್ ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ನಡೆದುಕೊಂಡಿರುವುದು ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ