ದೂದ್ ಪೇಡ ದಿಗಂತ್​ ಹುಟ್ಟು ಹಬ್ಬಕ್ಕೂ ಅಡ್ಡಿಯಾದ ಸಿಸಿಬಿ ನೋಟಿಸ್!

ಡ್ರಗ್​ ಪ್ರಕರಣದಲ್ಲಿ ದಿಗಂತ್​ಗೆ ನೇರ ಸಂಬಂಧ ಇಲ್ಲ. ಹೀಗಾಗಿ ಅವರಿಗೆ ಏನೂ ಸಮಸ್ಯೆ ಆಗುವುದಿಲ್ಲ ಎನ್ನುವುದು ಚಿತ್ರತಂಡದ ನಂಬಿಕೆ. ಆದಗ್ಯೂ ಮತ್ತಷ್ಟು ದಿನ ಕಾದು ನೋಡಲು ಚಿತ್ರತಂಡ ಮುಂದಾಗಿದೆ.

news18-kannada
Updated:September 17, 2020, 11:56 AM IST
ದೂದ್ ಪೇಡ ದಿಗಂತ್​ ಹುಟ್ಟು ಹಬ್ಬಕ್ಕೂ ಅಡ್ಡಿಯಾದ ಸಿಸಿಬಿ ನೋಟಿಸ್!
ದಿಗಂತ್​
  • Share this:
ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣಕ್ಕೆ ಸಂಬಂಧಿಸಿ ನಟ ದಿಗಂತ್ ಹಾಗೂ ಐದ್ರಿತಾ ರೇ ಅವರು ಬುಧವಾರ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು.. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಈ ಸ್ಟಾರ್ ದಂಪತಿಗೆ ನೋಟಿಸ್​ ನೀಡಲಾಗಿತ್ತು. ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ದಿಗಂತ್ ಹಾಗೂ ಐದ್ರಿತಾ ರೈ ವಿಚಾರಣೆ ನಡೆದಿತ್ತು. ದಿಗಂತ್​ ಹಾಗೂ ಐಂದ್ರಿತಾ ಅವರಿಗೆ ಮಾದಕ ವಸ್ತು ಪ್ರಕರಣದಲ್ಲಿ ಸದ್ಯ ತಲೆಮರೆಸಿಕೊಂಡಿರುವ ಆರೋಪಿ ಶೇಕ್ ಪಾಜಿಲ್​ ಅವರೊಂದಿಗೆ ಸಂಬಂಧ ಇದೆ ಎನ್ನಲಾಗುತ್ತಿದ್ದು, ಅದರ ಬಗ್ಗೆಯೇ ವಿಚಾರಣೆ ನಡೆದಿದೆ ಎನ್ನಲಾಗಿದೆ. ಈಗ ಸಿಸಿಬಿ ವಿಚಾರಣೆ ದೂದ್​ ಪೇಡ ಸಿನಿಮಾ ಮೇಲೂ ಪರಿಣಾಮ ಬೀರಿದೆ.

ದಿಗಂತ್​ ನಟನೆಯ ‘ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾದಲ್ಲಿ ನಟಿಸಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಕೆಲಸ ಮುಗಿದಿದ್ದು, ರಿಲೀಸ್​ಗೆ ರೆಡಿಯಾಗಿದೆ. ಅಕ್ಟೋಬರ್ ನಲ್ಲಿ ಚಿತ್ರಮಂದಿರ ಓಪನ್ ಆದ ಕೂಡಲೇ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ದಿಗಂತ್​ಗೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಚಿತ್ರವನ್ನು ತಡವಾಗಿ ರಿಲೀಸ್ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

ಡ್ರಗ್​ ಪ್ರಕರಣದಲ್ಲಿ ದಿಗಂತ್​ಗೆ ನೇರ ಸಂಬಂಧ ಇಲ್ಲ. ಹೀಗಾಗಿ ಅವರಿಗೆ ಏನೂ ಸಮಸ್ಯೆ ಆಗುವುದಿಲ್ಲ ಎನ್ನುವುದು ಚಿತ್ರತಂಡದ ನಂಬಿಕೆ. ಆದಗ್ಯೂ ಮತ್ತಷ್ಟು ದಿನ ಕಾದು ನೋಡಲು ಚಿತ್ರತಂಡ ಮುಂದಾಗಿದೆ. ಹೀಗಾಗಿ, ಸಿಸಿಬಿ ಎಲ್ಲಾ ವಿಚಾರಣೆ ಅಂತ್ಯವಾದ ಮೇಲೆ ಪರಿಸ್ಥಿತಿ ನೋಡಿಕೊಂಡು ಸಿನಿಮಾ ರಿಲೀಸ್ ಮಾಡಲು ನಿರ್ದೇಶಕ ನಾಗರಾಜ್ ಚಿಂತನೆ ನಡೆಸಿದ್ದಾರಂತೆ.

ಐಂದ್ರಿತಾ ರೇ ವಿಚಾರಣೆ ಏಕೆ?:

ದಿಗಂತ್​ ಹಾಗೂ ಐಂದ್ರಿತಾ ಹೊರದೇಶದಲ್ಲಿ ನಡೆದಿರುವ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದಾಗಿಯೂ ಕೆಲವೊಂದು ಸಾಕ್ಷ್ಯಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿದೆಯಂತೆ. ‌ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ ಎಫ್ ಐ ಆರ್ ನಲ್ಲಿ ಪ್ರಮುಖ ಆರೋಪಿಯಾಗಿರುವ ಶಿವಪ್ರಕಾಶ್ ಜೊತೆ ಸಹ ಐದ್ರಿತಾ ರೈ ಸಾಕಷ್ಟು ಪೋಟೋಗಳು ತೆಗೆಸಿಕೊಂಡಿದ್ದು, ಅವುಗಳು ಸಹ ಸಿಸಿಬಿ ಪೊಲೀಸರಿಗೆ ಸಿಕ್ಕಿದೆ. ಇದರ ಜೊತಗೆ, ಈಗಾಗಲೇ ಬಂಧನವಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ‌ ಸಹ ಇವರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿಯೇ ಹೊಗುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರಂತೆ.
Published by: Rajesh Duggumane
First published: September 17, 2020, 11:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading