ಉಪ ಚುನಾವಣೆಯಲ್ಲಿ ಸೋತವರಿಗೆ ಬಿಜೆಪಿಯಿಂದ ಬೇರೆ ದಾರಿ; ಎಂಟಿಬಿಗೆ ಪಕ್ಷ ಸಂಘಟನೆ ಜವಾಬ್ದಾರಿ?

17 ಜನ ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇದರಿಂದ ಯಾರನ್ನೂ ಕೈಬಿಡುವುದು ಸೂಕ್ತವಲ್ಲ ಎಂದು ಬಿಜೆಪಿ ಪಕ್ಷದಲ್ಲಿ ಗಂಭೀರ ಚರ್ಚೆ mysore-bjp-mla-sa-ramadas--

news18-kannada
Updated:December 9, 2019, 5:19 PM IST
ಉಪ ಚುನಾವಣೆಯಲ್ಲಿ ಸೋತವರಿಗೆ ಬಿಜೆಪಿಯಿಂದ ಬೇರೆ ದಾರಿ; ಎಂಟಿಬಿಗೆ ಪಕ್ಷ ಸಂಘಟನೆ ಜವಾಬ್ದಾರಿ?
ಹೆಚ್​ ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್​​​​
  • Share this:
ಬೆಂಗಳೂರು(ಡಿ.09): ಉಪ ಚುನಾವಣೆಯಲ್ಲಿ ಹುಣಸೂರು ಹಾಗೂ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಸೋತ ಅಭ್ಯರ್ಥಿಗಳಿಗೆ ಬಿಜೆಪಿ ಕೈಬಿಡದೇ ಅವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲು ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. 

ಹೊಸಕೋಟೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ನಿಂತು ಗೆದ್ದ ಶರತ್​​ ಬಚ್ಚೇಗೌಡ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಬಿಜೆಪಿ ನಾಯಕರಿಂದ ಸಾಧ್ಯವಾಗಿಲ್ಲ ಎಂಬ ಅಸಮಾಧಾನ ಎಂಟಿಬಿಗೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಕೈ ಬಿಟ್ಟರೆ ಸರಿಯಲ್ಲ ಎನ್ನುವುದನ್ನು ಮನಗಂಡು ಅವರಿಗೆ ಪಕ್ಷದ ಸಂಘಟನೆಯ ಜವಾಬ್ದಾರಿಯನ್ನು ಕೊಟ್ಟು ಅವರ ಮಗ ನಿತೀಶ್ ಪುರುಷೋತ್ತಮ ಅವರಿಗೆ ನಿಗಮ ಮಂಡಳಿ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಎಂಟಿಬಿ ನಾಗರಾಜ್ ಅವರನ್ನು ಗೆಲ್ಲಿಸಲು ಬಿಎಸ್​ವೈ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಎಂಟಿಬಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದಕ್ಕೆ ಅಸಮಾಧಾನಗೊಂಡಿದ್ದ ಶರತ್ ಬಚ್ಚೇಗೌಡ ಅವರ ಮನವೊಲಿಸಲು ಕೊನೆಯವರೆಗೂ ವಿಫಲಯತ್ನ ನಡೆಸಿದರು. ಆದರೆ, ಶರತ್ ಬಚ್ಚೇಗೌಡ ಬಂಡಾಯ ಎದ್ದು ಸ್ವತಂತ್ರವಾಗಿ ಕಣಕ್ಕಿಳಿದು ಈಗ ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿ ಪಕ್ಷಕ್ಕಿಂತ ಈ ಎರಡು ಕುಟುಂಬಗಳ ವೈಯಕ್ತಿಕ ವರ್ಚಸ್ಸು ಹೊಸಕೋಟೆ ರಾಜಕಾರಣದಲ್ಲಿ ಮೇಳೈಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಹೊಸಕೋಟೆ ಉಪಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತು.

ಇದೇ ರೀತಿ ಹೂಣಸೂರಿನಲ್ಲಿ ಸೋತ ಹೆಚ್​. ವಿಶ್ವನಾಥ್​​ ಅವರ ಪುತ್ರನಿಗೂ ನಿಗಮ ಮಂಡಳಿ ಸ್ಥಾನ ನೀಡಿ  ಅಸಮಾಧಾನ ಕಡಿಮೆ ಮಾಡಲು ಬಿಜೆಪಿ ಮುಂದಾಗಿದೆ.  ಚುನಾವಣೆಯಲ್ಲಿ ನಿಮಗೆ ಟಿಕೆಟ್ ಬೇಡ. ನಿಮ್ಮ ಮಗನನ್ನು ನಿಲ್ಲಿಸುತ್ತೇವೆ ಎಂದು ಹೇಳಿದರೂ ಕೇಳದೇ ಚುನಾವಣೆಯಲ್ಲಿ ನಿಂತು ವಿಶ್ವನಾಥ್ ಸೋತಿದ್ದಾರೆ.

17 ಜನ ಶಾಸಕರ ರಾಜೀನಾಮೆಯಿಂದಾಗಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಇದರಿಂದ ಯಾರನ್ನೂ ಕೈಬಿಡುವುದು ಸೂಕ್ತವಲ್ಲ  ಎಂದು ಬಿಜೆಪಿ ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ.

ಇದನ್ನೂ ಓದಿ : ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ; ಏನೇ ಅಧಿಕಾರ ಕೊಟ್ಟರೂ ಸ್ವೀಕರಿಸುತ್ತೇನೆ: ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್

ಈ ಬಾರಿಯ ಉಪಚುನಾವಣೆಯು ಹೆಚ್. ವಿಶ್ವನಾಥ್ ಅವರಿಗೆ ಅಕ್ಷರಶಃ ಅಗ್ನಿಪರೀಕ್ಷೆಯೇ ಆಗಿತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳೂ ಕೂಡ ವಿಶ್ವನಾಥ್ ಅವರನ್ನ ಹುರಿದು ಮುಕ್ಕಲು ಅಣಿಗೊಂಡಿದ್ದವು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರು ಈ ಕ್ಷೇತ್ರದ ಚುನಾವಣೆಯನ್ನು ಬಹಳ ವೈಯಕ್ತಿಕವಾಗಿ ತೆಗೆದುಕೊಂಡಿದ್ದರು. ಕುಮಾರಸ್ವಾಮಿ ಅವರಂತೂ ಇಲ್ಲಿ ಜೆಡಿಎಸ್ ಸೋತರೂ ಪರವಾಗಿಲ್ಲ, ವಿಶ್ವನಾಥ್ ಸೋಲಬೇಕು ಎಂದು ನಿಶ್ಚಯಿಸಿದ್ದರು. ಹೀಗಾಗಿ, ವಿಶ್ವನಾಥ್  ಅವರು ಸೋತಿದ್ದಾರೆ.

 
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading