ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು..!

ಈ ಪ್ರತಿಕೃತಿ ಸಿದ್ದಪಡಿಸಲು 40 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಬೆಳಗಾವಿಯ ನೂರಾರು ಓಲ್ಡ್ ಮ್ಯಾನ್ ಗಳ ಪೈಕಿ ಈ ಪ್ರತಿಕೃತಿ ಅತ್ಯಂತ ಹೆಚ್ಚು ಆಕರ್ಷಣೆಗೆ ಪಡೆದಿದೆ. ಹೊಸ ವರ್ಷಕ್ಕೆ ಬೀಗಿ ಭದ್ರತೆ ಬೆಳಗಾವಿ ನಗರದಲ್ಲಿ ಹೊಸ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ನಗರ ಪೊಲೀಸರು ವ್ಯಾಪಕ ಭದ್ರತೆಯನ್ನು ಮಾಡಿದ್ದಾರೆ

news18-kannada
Updated:December 31, 2019, 4:43 PM IST
ಹೊಸ ವರ್ಷದ ಸಂಭ್ರಮದ ಜತೆಗೆ ಸಂದೇಶ ಸಾರಿದ ಬೆಳಗಾವಿಯ ಕ್ಯಾಂಪ್ ಯುವಕರು..!
ಪ್ರತಿಕೃತಿ
  • Share this:
ಬೆಳಗಾವಿ(ಡಿ.31): 2020ರ ಹೊಸ ವರ್ಷದ ಸ್ವಾಗತಕ್ಕೆ ಬೆಳಗಾವಿಯಲ್ಲಿ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿವೆ. ಸಂಭ್ರಮದ ಜತೆಗೆ ಸಂದೇಶ ಸಾರಲು ಬೆಳಗಾವಿಯ ಕ್ಯಾಂಪ್ ಯುವಕರು ಅಂತಿಮ ಸಿದ್ದತೆ ನಡೆಸಿದ್ದಾರೆ.

2019ರಲ್ಲಿ ದೆಹಲಿ, ಹೈದ್ರಾಬಾದ್ ಹಾಗೂ ಬೆಳಗಾವಿಯ ಕಡೋಲಿಯಲ್ಲಿ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಸದ್ದು ಮಾಡಿದ್ದವು. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಜತೆಗೆ ಇಂತಹ ಪ್ರಕರಣ 2019ರಲ್ಲಿ ಅಂತ್ಯವಾಗಬೇಕು ಎಂಬ ಸಂದೇಶವನ್ನು ಪ್ರತಿಕೃತಿ ಮೂಲಕ ನೀಡಿದ್ದಾರೆ.

ಬೆಳಗಾವಿಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಇಲ್ಲಿನ ಗಲ್ಲಿ ಗಲ್ಲಿಯಲ್ಲಿ ಓಲ್ಡ್ ಮ್ಯಾನ್ ದಹಿಸುವ ಸಂಪ್ರದಾಯವಿದೆ. ಓಲ್ಡ್ ಮ್ಯಾನ್ ಗಳನ್ನು ಕಾಗದ, ಹುಲ್ಲಿನಿಂದ ಸಿದ್ದಪಡಿಸಲಾಗುತ್ತದೆ. ಸಂಜೆಯಿಂದಲೇ ಓಲ್ಡ್ ಮ್ಯಾನ್ ಮುಂದೆ ಡಿಜೆ ಸೌಂಡ್ ಡ್ಯಾನ್ಸ್ ಮಾಡೋ ಯುವಕರು ರಾತ್ರಿ 12ಕ್ಕೆ ಸರಿಯಾಗಿ ಓಲ್ಡ್ ಮ್ಯಾನ್ ದಹಿಸುತ್ತಾರೆ. ಈ ಮೂಲಕ ಹಿಂದ ವರ್ಷದ ಕಹಿ ಮರೆತು ಹೊಸ ವರ್ಷದಲ್ಲಿ ಉತ್ತಮವಾಗಿ ಎಂಬ ಸಂದೇಶ ರವಾನೆ ಮಾಡುತ್ತಾರೆ. ಈ ಬಾರಿ ಕ್ಯಾಂಪ್ ಪ್ರದೇಶದ ಗವಳಿ ಗಲ್ಲಿಯಲ್ಲಿ ಈ ಬಾರೀ 40 ಎತ್ತರದ ಪ್ರತಿಕೃತಿ ಸಂಭ್ರಮದ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ.

ಪ್ರತಿಕೃತಿ ಕೈದಿ ಆಕಾರದಲ್ಲಿ ಸಿದ್ದಪಡಿಸಿಲಾಗಿದೆ. ಜತೆಗೆ ಇನ್ನೇನು ಗಲ್ಲಿಗೆ ಏರಲು ಸಿದ್ದವಾಗಿರೋ ರೀತಿಯಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಸಹ ಹಾಕಲಾಗಿದೆ. ಈ ಮೂಲಕ ಇತ್ತೀಚಿಗೆ ದೆಹಲಿ, ಹೈದ್ರಾಬಾದ್ ಹಾಗೂ ಬೆಳಗಾವಿಯ ಕಡೋಲಿಯಲ್ಲಿ ನಡೆದ ಅತ್ಯಾಚಾರಿ ಪ್ರಕರಣವನ್ನು ತೀವ್ರವಾಗಿ ಖಂಡಿಸಲಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಶೀಘ್ರಗತಿಯಲ್ಲಿ ವಿಚಾರಣೆ ನಡೆಯಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಸಂದೇಶ ರವಾನೆ ಮಾಡಿದ್ದಾರೆ.

ಈ ಪ್ರತಿಕೃತಿ ಸಿದ್ದಪಡಿಸಲು 40 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಬೆಳಗಾವಿಯ ನೂರಾರು ಓಲ್ಡ್ ಮ್ಯಾನ್ ಗಳ ಪೈಕಿ ಈ ಪ್ರತಿಕೃತಿ ಅತ್ಯಂತ ಹೆಚ್ಚು ಆಕರ್ಷಣೆಗೆ ಪಡೆದಿದೆ. ಹೊಸ ವರ್ಷಕ್ಕೆ ಬೀಗಿ ಭದ್ರತೆ ಬೆಳಗಾವಿ ನಗರದಲ್ಲಿ ಹೊಸ ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ನಗರ ಪೊಲೀಸರು ವ್ಯಾಪಕ ಭದ್ರತೆಯನ್ನು ಮಾಡಿದ್ದಾರೆ. ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ನಗರದಲ್ಲಿ ಇಂದು ರಾತ್ರಿ 2 ಗಂಟೆಯ ವರೆಗೆ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ :  Celebrities Death in 2019 | ಈ ಒಂದು ವರ್ಷ ನಮ್ಮನ್ನಗಲಿದ ಪ್ರಮುಖ ರಾಜಕೀಯ ಧುರೀಣರು, ಗಣ್ಯರು

1500 ಪೊಲೀಸರು ಹಾಗೂ 3 ಕೆ ಎಸ್ ಆರ್ ಪಿ ತುಕಡಿ, 7 ಸಿಎಆರ್ ತುಕಡಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಪ್ರತಿ ಓಲ್ಡ್ ಮ್ಯಾನ್ ಬಳಿಯಲ್ಲಿ ಓರ್ವ ಪೊಲೀಸ್ ಹಾಗೂ ಹೋಂ ಗಾರ್ಡ್ ನಿಯೋಜನೆ ಮಾಡಲಾಗಿದೆ. 12.30ರ ನಂತರ ಹೋಟೆಲ್ ಸಂಭ್ರಮ ಮುಗಿಸಬೇಕು ಎಂಬ ಸೂಚನೆಯನ್ನು ನಗರ ಪೊಲೀಸ್ ಆಯಕ್ತರು ನೀಡಿದ್ದಾರೆ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ