ಗದಗನಲ್ಲಿ ಮೇಳೈಸಿತ್ತು ಮೊಹರಂ ಆಚರಣೆ ; ಶಿಯಾ ಸಮುದಾಯದವ್ರಿಂದ ದೇಹ ದಂಡಿಸಿ ಶೋಕಾಚರಣೆ

news18
Updated:September 21, 2018, 9:01 PM IST
ಗದಗನಲ್ಲಿ ಮೇಳೈಸಿತ್ತು ಮೊಹರಂ ಆಚರಣೆ  ; ಶಿಯಾ ಸಮುದಾಯದವ್ರಿಂದ ದೇಹ ದಂಡಿಸಿ ಶೋಕಾಚರಣೆ
  • Advertorial
  • Last Updated: September 21, 2018, 9:01 PM IST
  • Share this:
- ಸಂತೋಷ ಕೊಣ್ಣೂರ,  ನ್ಯೂಸ್ 18 ಕನ್ನಡ 

ಗದಗ ( ಸೆ.21) : ಮೈಯಲ್ಲಿ ಸ್ವಲ್ಪ ರಕ್ತ ಬಂದ್ರೆ ಎಲ್ಲರಿಗೂ ನೋವಾಗುತ್ತದೆ. ಅಂತದರಲ್ಲಿ ಬ್ಲೇಡ್ ಚಾಕು ಇತರೆ ಆಯುಧಗಳ ಮೂಲಕ ಎದೆಗೆ ಹೊಡೆದುಕೊಳ್ಳುವುದು ಅಂದ್ರೆ ಸುಮ್ನೆನಾ. ಶಿಯಾ ಮುಸ್ಲಿಂರಿಗೆ ಈ ಮೊಹರಂ ಹಬ್ಬ ಒಂದೊಂದು ದು:ಖದ ದಿನ ಅಂತೆ. ಈ ದು:ಖದ ದಿನವನ್ನ ದೇಹ ದಂಡನೆ ಮಾಡಿಕೊಳ್ಳುವುದರ ಮೂಲಕ ಇರಾನಿ ಜನಾಂಗ ಹೇಗೆ ಆಚರಿಸುತ್ತಾರೆ. ನೋಡಬೇಕಾ ಈ ವರದಿ ಓದಿ...

ಶ್ರದ್ಧಾ ಭಕ್ತಿಯಿಂದ ಆಚರಿಸುವ ಈ ಮೊಹರಂ ಇರಾನಿ ಮುಸ್ಲಿಂರಿಗೆ ದು:ಖದ ದಿನ. ಈ ಇರಾನಿ ಜನಾಂಗ ಮೊಹರಂ ಕೊನೆಯದಿನವನ್ನ ಹೀಗೆ ಎದೆಗೆ ಬಡಿದುಕೊಳ್ಳುತ್ತಾ ವಿಭಿನ್ನವಾಗಿ ಆಚರಿಸುತ್ತಾರೆ. ಮುಸ್ಲಿಂ ಧರ್ಮದಲ್ಲಿ ಹಜರತ್ ಹುಸೆನ್ ಶರಣರು ಬಲಿಯಾದ ದಿನವೇ ಮೊಹರಂ ದು:ಖದ ದಿನ. ಗದುಗಿನ ಇರಾನಿ ಕಾಲೋನಿ ಶಿಯಾ ಮುಸ್ಲಿಂ ಜನಾಂಗದವರೆಲ್ಲರು ದೇಹ ದಂಡನೆಯ ಮೂಲಕ ವಿಶೀಷ್ಟವಾಗಿ ಆಚರಿಸುತ್ತಾರೆ. ಈ ದೇಹ ದಂಡನೆ ನೋಡುಗರೆಲ್ಲರನ್ನು ರೊಮಾಂಚನಗೊಳಿಸುತ್ತದೆ. ಇರಾನಿ ಜನಾಂಗದ ಅನೇಕ ಯುವಕರು ಬ್ಲೇಡ್ ಹಿಡಿದುಕೊಂಡು ದೇಹ ದಂಡನೆ ಮಾಡಿಕೊಂಡರು. ಇದು ಹಬ್ಬವಲ್ಲ ದು:ಖದ ದಿನ ಎಂತಿದ್ದಾರೆ ಶಿಯಾ ಮುಸ್ಲಿಂರು.

ಶಿಯಾ ಧರ್ಮದ ಹಿರಿಯರು ಬಲಿದಾನ(ಮಡಿದ) ದಿನವನ್ನ ಸ್ಮರಿಸುವ ಸಲುವಾಗಿ ಎದೆಗೆ ಬಡಿದುಕೊಳ್ಳುತ್ತಾ ರಕ್ತ ಚಿಮ್ಮಿಸುತ್ತಾರೆ. ಈ ಆಚರಣೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಈ ಮೊಹರಂ ನ್ನು ಕೆಲವರು ಸಂಭ್ರಮದಿಂದ ಆಚರಿಸಿದ್ರೆ, ಮತ್ತೆ ಕೆಲವರು ದು:ಖದಿಂದ ಆಚರಿಸುತ್ತಾರೆ. ಹೀಗೆ ಹೊಡೆದುಕೊಳ್ಳುವುದರಿಂದ ನಮಗೆ ಏನು ಆಗುವುದಿಲ್ಲ. ಎಲ್ಲಾ ದೇವರ ಮಹಿಮೆ. ನಮ್ಮ ಹಿರಿಯರು ಮಡಿದ ದಿನವನ್ನ ನಾವು ಹಿಗೆ ಬಡಿದುಕೊಳ್ಳುವ ಮೂಲಕ ದು:ಖ ಹೊರಹಾಕುತ್ತೆವೆ. ಇದು ಸಾವಿರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಎಂತಿದ್ದಾರೆ ಶಿಯಾ ಅನುಯಾಯಿಗಳು.

ಈ ಇರಾನಿ ಜನಾಂಗದವರು ಎದೆಗೆ ಹೊಡೆದುಕೊಳ್ಳುವುದನ್ನ ನೋಡಿದ್ರೆ ಮೈ ನವಿರೆಳುತ್ತವೆ. ಮುಸ್ಲಿಂ ಕುಟುಂಬದ ತ್ಯಾಗ ಬಲಿದಾನದ ದಿನವೆ ಈ ಮೊಹರಂ ಹಬ್ಬ ಆಚರಿಸುತ್ತಾರೆ. ಹೀಗೆ ದೇಹ ದಂಡನೆ ಮಾಡಿಕೊಳ್ಳುತ್ತಾ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು

 
First published:September 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...