ಹೀಗೂ ಬರ್ತ್​ ಡೇ ಆಚರಣೆ ಮಾಡುತ್ತಾರೆ ಇಲ್ಲಿದೆ ನೊಡಿ ...

G Hareeshkumar | news18
Updated:October 8, 2018, 6:45 PM IST
ಹೀಗೂ ಬರ್ತ್​ ಡೇ ಆಚರಣೆ ಮಾಡುತ್ತಾರೆ ಇಲ್ಲಿದೆ ನೊಡಿ ...
G Hareeshkumar | news18
Updated: October 8, 2018, 6:45 PM IST
- ಲೋಹಿತ್ ಶಿರೋಳ, ನ್ಯೂಸ್ 18 ಕನ್ನಡ

ಚಿಕ್ಕೋಡಿ (ಅ.08) :  ಕೆಲವರು ತಮ್ಮ ಹುಟ್ಟು ಹಬ್ಬವನ್ನ ವಿಶೇಷವಾಗಿ ಆಚರಣೆ ಮಾಡಿಕೊಳ್ಳಬೇಕು ಎಂಬ ಬಯಕೆ ಇರುತ್ತದೆ. ಹೀಗಾಗಿ ಕೆಲವರು ಖಡ್ಗದಿಂದ ಕೇಕ್ ಕಟ್ ಮಾಡಿ ಆಚರಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಬರ್ತ್​ ಡೇ ಯನ್ನು ಗ್ರಾಂಡ್ ಆಗಿ ಹೋಟೆಲ್ ರೆಸ್ಟೋರೆಂಟ್​ಗಳಲ್ಲಿ ಆಚರಣೆ ಮಾಡಿಕೊಳ್ಳುತ್ತಾರೆ.

ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಹುಟ್ಟು ಹಬ್ಬವನ್ನು ಆತನ ಸ್ನೇಹಿತರು ವಿಚಿತ್ರವಾಗಿ ಆಚರಣೆ ಮಾಡಿದ್ದಾರೆ. ಗೆಳೆಯನ ಮೈಮೇಲೆ ಪಾರ್ಟಿ ಮಾಡಲು ಬಂದಿದ್ದ ಢಾಬಾದಲ್ಲಿನ ನಿರುಪಯುಕ್ತ ಕಸವನ್ನು ಯುವಕ ಮೇಲೆ ಸುರಿದು ಸಂಭ್ರಮಿಸಿದ್ದಾರೆ.

ಅಂದ ಹಾಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಶಿರಕೋಳಿ ಮೆಡಿಕಲ್ ಕಾಲೇಜಿನ ಬಿಎಚ್ ಎಮ್ ಎಸ್ ಓದುತ್ತಿರುವ ಯುವಕರ ಗುಂಪು ಈ ರೀತಿಯಾಗಿ ವಿಚಿತ್ರವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಬಿ ಎಚ್ ಎಮ್ ಎಸ್ ವಿದ್ಯಾರ್ಥಿ ಮನೋಜಕುಮಾರ ಹುಟ್ಟು ಹಬ್ಬವನ್ನು ಅವನ ಗೆಳೆಯರು ಈ ರೀತಿ ವಿಚಿತ್ರವಾಗಿ ಆಚರಿಸಿದ್ದಾರೆ.

ಮನೋಜ ಕುಮಾರನ ಮೈ ಮೇಲೆ ಅಡುಗೆ ಎಣ್ಣೆ, ಮೊಟ್ಟೆ, ಮೊಸರು, ಹಿಟ್ಟ್ಟು ಸೇರಿದಂತೆ ವಿವಿಧ ವಸ್ತುಗಳನ್ನ ಹಾಕಿ ವಿಚಿತ್ರ ಬರ್ಥಡೆ ಮಾಡಿರುವ ಈ ವಿಡಿಯೋ ಈಗ ಫುಲ್ ವೈರಲ್ ಆಗಿದೆ.

ವೈರಲ್​ ಆಗುತ್ತಿವೆ ರಶ್ಮಿಕಾ ಮಂದಣ್ಣ ಹಾಟ್ ಫೋಟೋಗಳು..!


First published:October 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ