ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಕೊಂಡ ಹುಕ್ಕೇರಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ

news18
Updated:June 11, 2018, 6:27 PM IST
ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಕೊಂಡ  ಹುಕ್ಕೇರಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ
news18
Updated: June 11, 2018, 6:27 PM IST
- ಲೋಹಿತ್ ಶಿರೋಳ, ನ್ಯೂಸ್18 ಕನ್ನಡ 

ಚಿಕ್ಕೋಡಿ ( ಜೂನ್ 11) :  ಹುಟ್ಟು ಹಬ್ಬ ಬಂದ್ರೆ ಸಾಕು ಕೆಕ್ ಕತ್ತರಿಸಿ ತಮ್ಮ ಬಂಧು ಬಳಗ ಅಭಿಮಾನಿಗಳನ್ನ ಕರೆಸಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ರು ಸ್ವಾಮೀಜಿ ತಮ್ಮ ಹುಟ್ಟು ಹಬ್ಬವನ್ನ ಪರಿಸರ ದಿನವಾಗಿ ಆಚರಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇವರ ಹೆಸರು ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಗ್ರಾಮದ ಪ್ರಸಿದ್ದ ದುರುದುಂಡೆಶ್ವರ ಮಠದ ಪಿಠಾಧಿಪತಿ ತಮ್ಮ 75 ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ದಾರೆ ಗ್ರಾಮದ ಜನ ತಮ್ಮ ಗುರುಗಳ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಣೆ ಮಾಡಲು ಮುಂದಾಗಿದ್ದರು.

ಆದರೆ ಇದಕ್ಕೆ ನಿರಾಕರಿಸಿದ ಸ್ವಾಮೀಜಿ ಯುವಕರಿಗೆ ಪರಿಸರ ದಿನವಾಗಿ ಆಚರಣೆ ಮಾಡುವಂತೆ ಕರೆ ನೀಡಿದ್ದರೂ ಕರೆಗೆ ಒಗೊಟ್ಟ 50 ಕ್ಕು ಹೆಚ್ಚು ಯುವಕರು ಸ್ವಾಮೀಜಿಗಳ ಹುಟ್ಟು ಹಬ್ಬದ ನಿಮಿತ್ತ ಇಡಿ ಗ್ರಾಮವನ್ನ ಸ್ವಚ್ಛಗೊಳಿಸುವ ಹಾಗೂ ಗ್ರಾಮದಲ್ಲಿ ಗಿಡ ನೆಡುವ ಕಾರ್ಯವನ್ನ ಮಾಡಿದ್ದಾರೆ. ಗ್ರಾಮದ ಹಲವೆಡೆ ಈ ಯುವಕರ ಗುಂಪು ಗಿಡಗಳನ್ನ ನೆಟ್ಟು ಅವುಗಳನ್ನ ಬೆಳೆಸುವ ಜವಾಬ್ದಾರಿಯನ್ನು ತಾವೆ ಹೊತ್ತುಕೊಂಡಿದ್ದಾರೆ‌

ಇನ್ನು ತಾಮ್ಮ ಮಾತಿಗೆ ಬೆಲೆ ನೀಡಿ ಯುವಕರು ಸ್ವಯಂ ಪ್ರೇರಿತರಾಗಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ಮಾಡಿದ್ದು ಅಲ್ಲದೆ ಪರಿಸರ ಬೆಳೆಸುವ ನಿಟ್ಟಿನಲ್ಲಿ ಗಿಡಗಳನ್ನ ನಿಟ್ಟಿರುವ ಯುವಕರ ಕಾರ್ಯ ತಮಗೆ ಖುಷಿ ತಂದಿದೆ ಸಮಾಜದಲ್ಲಿ ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿ ವಹಿಸಿ ಪರಿಸರ ರಕ್ಷಿಸಲು ಮುಂದಾಗಬೇಕಾಗಿದೆ ಪ್ರತಿಯೊಬ್ಬ ಯುವಕರು ಮನಸ್ಸು ಮಾಡಿದ್ರೆ ಮಾತ್ರ ಒಳ್ಳೆ ಸಮಾಜ ಹಾಗೂ ಉತ್ತಮ ಪರಿಸರ ಬೆಳೆಯಲು ಸಾದ್ಯ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಹುಟ್ಟು ಹಬ್ಬ ಬಂದ್ರೆ ಸಾಕು ದುಂದು ವೆಚ್ಚ ಮಾಡಿ ಪರಿಸರ ಹಾಳು ಮಾಡುವವರೆ ಜಾಸ್ತಿ ಆದ್ರೆ ತಮ್ಮ ಗುರುಗಳ ಮಾತಿಗೆ ಯವಕರು ಪರಿಸರ ರಕ್ಷಣೆ ಮಾಡಲು ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ.
First published:June 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ