ರೇಷ್ಮೆನಗರಿಯ ಜೆಡಿಎಸ್​ ಘಟಕದಲ್ಲಿ ಚುನಾವಣೆಗೂ ಮೊದಲೇ ಭುಗಿಲೆದ್ದ ಭಿನ್ನಮತ


Updated:February 13, 2018, 4:43 PM IST
ರೇಷ್ಮೆನಗರಿಯ ಜೆಡಿಎಸ್​ ಘಟಕದಲ್ಲಿ ಚುನಾವಣೆಗೂ ಮೊದಲೇ ಭುಗಿಲೆದ್ದ ಭಿನ್ನಮತ

Updated: February 13, 2018, 4:43 PM IST
-ನ್ಯೂಸ್ 18 ಕನ್ನಡ

ದೊಡ್ಡಬಳ್ಳಾಪುರ(ಫೆ.13): ಕರ್ನಾಟಕದಲ್ಲಿ ಚುನಾವಣಾ ಕಣ ರಂಗೇರಿದೆ, ಪಕ್ಷಗಳು ಪ್ರತಿ ಪಕ್ಷಗಳ ಮೇಲೆ ವಾಗ್ದಾಳಿ ನಡೆಸುವ ಯಅವುದೇ ಅವಕಾಶವನ್ನು ಬಿಟ್ಟು ಕೊಡುತ್ತಿಲ್ಲ. ಹೀಗಿರುವಾಗ ಜೆಡಿಎಸ್​ನಲ್ಲಿ ಚುನಾವಣೆಗೂ ಮೊದಲು ಪಕ್ಷದೊಳಗೇ ಟಿಕೆಟ್ ಫೈಟ್ ಆರಂಭವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದೆ. ಯಾರ ನಡುವೆ ಈ ಸಮರ ನಡೆಯುತ್ತಿದೆ? ಇಲ್ಲಿದೆ ವಿವರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜೆಡಿಎಸ್​ ಘಟಕದಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಮುನೇಗೌಡ ವಿರುದ್ಧ ಜಿಲ್ಲೆಯ ಪ್ರಭಾವಿ ಜೆಡಿಎಸ್ ಮುಖಂಡ, ಹಾಲಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬೆಂಗಳೂರು ಹಾಲು ಮಹಾಮಂಡಳಿಯ(ಬಮೂಲ್) ಅಧ್ಯಕ್ಷರಾಗಿರುವ ಅಪ್ಪಯ್ಯಣ್ಣ ರೆಬೆಲ್ ಆಗಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಇಬ್ಬರ ನಡುವೆ ಸಮರ ಆರಂಭವಾಗಿದೆ.

ಈಗಾಗಲೇ ಸ್ವತಃ ಕುಮಾರಸ್ವಾಮಿಯೇ ಬಿ.ಮುನೇಗೌಡರನ್ನು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಜನವರಿ 10 ರಂದು ನಡೆದ ಜೆಡಿಎಸ್ ಯುವ ಸಮಾವೇಶದಲ್ಲಿ ಹೆಚ್​ಡಿಕೆ ಇದನ್ನು ಘೋಷಿಸಿದ್ದಾರೆ. ಆದರೀಗ ಕುಮಾರಸ್ವಾಮಿ ಮಾತನ್ನು ಲೆಕ್ಕಿಸದೆ ಬಮೂಲ್ ಅಧ್ಯಕ್ಷ ಅಪ್ಪಯ್ಯಣ್ಣ 'ನಾನೇ ಅಭ್ಯರ್ಥಿ' ಎಂದು ಹೇಳಿಕೊಳ್ಳುತ್ತಿದ್ದಾರೆ. ಅಲ್ಲದೇ ಪಕ್ಷದಿಂದ ಟಿಕೆಟ್ ಸಿಗದೆ ಇದ್ದರೆ ರೆಬೆಲ್ ಆಗುವ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ