Bellary: ಮೃತ ಮಗನನ್ನು ಬದುಕಿಸಿಕೊಳ್ಳಲು ಶವವನ್ನ ಉಪ್ಪಿನ ರಾಶಿಯಲ್ಲಿಟ್ರು; ಬಳ್ಳಾರಿಯಲ್ಲೊಂದು ವಿಚಿತ್ರ ಘಟನೆ

10 ವರ್ಷದ ಸುರೇಶ್ ಎಂಬ ಬಾಲಕ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದನು. ನೀರಿನಲ್ಲಿ ಮುಳುಗಿ ಸತ್ತವರ ಶವ ಉಪ್ಪಿನ ರಾಶಿಯಲ್ಲಿಟ್ಟರೇ ಬದುಕುಳಿಯುತ್ತಾರೆ ಎಂಬ ವಾಟ್ಸಪ್ ಸಂದೇಶ (Viral Whats app Message) ನೋಡಿದ ಗ್ರಾಮಸ್ಥರು ಈ ಪ್ರಯತ್ನಕ್ಕೆ ಮುಂದಾಗಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೃತ ಬಾಲಕನನ್ನು (Boy) ಬದುಕುಳಿಸಲು ಪೋಷಕರು (Parents) ಮತ್ತ ಗ್ರಾಮಸ್ಥರು ಶವವನ್ನು ಉಪ್ಪಿನ (Salt) ರಾಶಿಯಲ್ಲಿ ಮಲಗಿಸಿರುವ ಘಟನೆ ಬಳ್ಳಾರಿ ತಾಲೂಕಿನ ಸಿರವಾರ (Sirvar, Ballary) ಗ್ರಾಮದಲ್ಲಿ ನಡೆದಿದೆ. ಗ್ರಾಮದ 10 ವರ್ಷದ ಸುರೇಶ್ ಎಂಬ ಬಾಲಕ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದನು. ನೀರಿನಲ್ಲಿ ಮುಳುಗಿ ಸತ್ತವರ ಶವ ಉಪ್ಪಿನ ರಾಶಿಯಲ್ಲಿಟ್ಟರೇ ಬದುಕುಳಿಯುತ್ತಾರೆ ಎಂಬ ವಾಟ್ಸಪ್ ಸಂದೇಶ (Viral Whats app Message) ನೋಡಿದ ಗ್ರಾಮಸ್ಥರು ಈ ಪ್ರಯತ್ನಕ್ಕೆ ಮುಂದಾಗಿದ್ದರು. ಮುಖ ಭಾಗ ಕಾಣುವಂತೆ ಮಾತ್ರ ಬಾಲಕನ ಶವವನ್ನು (Deadbody) ಉಪ್ಪಿನ ರಾಶಿಯಲ್ಲಿ ಸುಮಾರು ನಾಲ್ಕರಿಂದ ಐದು ಗಂಟೆಗಳ ಕಾಲ ಇರಿಸಿದ್ದರು. ನಂಬಿಕೆ ಹುಸಿಯಾದ ಬಳಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸದ್ಯ ಶವವನ್ನು ಉಪ್ಪಿನ ರಾಶಿಯಲ್ಲಿರಿಸಿದ್ದ ಫೋಟೋಗಳು ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅಲ್ಲಿ ನಡೆದಿದ್ದೇನು?

ಸ್ನೇಹಿತರ ಜೊತೆ ಸುರೇಶ್ ಈಜಾಡಲು ಹೊಂಡಕ್ಕೆ ತೆರಳಿದ್ದನು. ಈ ವೇಳೆ ನೀರಿನ ಹೊಂಡದಲ್ಲಿ ಮುಳುಗಿ ಸುರೇಶ್ ಮೃತನಾಗಿದ್ದಾನೆ. ಶವವನ್ನ ಮೇಲೆತ್ತಿದ್ದ ಗ್ರಾಮಸ್ಥರು ಆತನನ್ನು ಉಳಿಸಿಕೊಳ್ಳಲು ಈ ಕೆಲಸಕ್ಕೆ ಮುಂದಾಗಿದ್ದರು. ಮೊಬೈಲ್​​ಗಳಲ್ಲಿ (Mobile) ನೀರಿನಲ್ಲಿ ಮುಳುಗಿ ಮೃತರಾದವರನ್ನು ಉಪ್ಪಿನ ರಾಶಿಯಲ್ಲಿಟ್ಟರೇ ಬದುಕಿ ಬರುತ್ತಾರೆ ಎಂಬ ಸಂದೇಶ ನೋಡಿದ್ದೆವು. ಒಳ್ಳೆಯದು ಆಗೋದಾದ್ರೆ ಯಾಕೆ ಮಾಡಬಾರದು ಅಂತ ಈ ಪ್ರಯತ್ನ ಮಾಡಲಾಯ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಆದ್ರೆ ಈ ವಾಟ್ಸಪ್ ಸಂದೇಶ ಸುಳ್ಳು ಎಂಬುವುದು ಸಾಬೀತಾಗಿದೆ.

ಸುಳ್ಳಾಯ್ತು ನಂಬಿಕೆ

ಹೊಂಡದಿಂದ ಶವ ತೆಗೆದು ಬಳಿಕ ಸುಮಾರು ನಾಲ್ಕೈದು ಚೀಲ ಅಂದ್ರೆ ನೂರು ಕೆಜಿಗೂ ಹೆಚ್ಚು ಉಪ್ಪನ್ನು ತರಲಾಯ್ತು. ನಂತರ ಶವವನ್ನು ಮುಖ ಹೊರತಪಡಿಸಿ ಎಲ್ಲಾ ದೇಹವನ್ನು ಮುಚ್ಚಲಾಯ್ತು. ಸುಮಾರು ನಾಲ್ಕು ಗಂಟೆ ಊರಿನ ಎಲ್ಲಾ  ಜನರು ಆಶ್ಚರ್ಯದಿಂದ ಎಲ್ಲಾ ಘಟನೆ ನೋಡುತ್ತಿದ್ದರು. ಆದ್ರೆ ನಮ್ಮ ನಂಬಿಕೆ ಸುಳ್ಳಾಯ್ತು ಎಂದು ಗ್ರಾಮಸ್ಥರಾದ ತಿಪ್ಪೇಸ್ವಾಮಿ ಮತ್ತು ಗಣೇಶ್ ಹೇಳುತ್ತಾರೆ.

Died boy dead body put in salt at sirvar bellary mrq
ಉಪ್ಪಿ ಸಮಾಧಿ


ಗ್ರಾಮಸ್ಥರ ನಡುವೆಯೇ ಪರ ವಿರೋಧದ ಚರ್ಚೆ

ಇನ್ನೂ ಈ ಪ್ರಯತ್ನಕ್ಕೆ ಮುಂದಾದಾಗ ಕೆಲವರು ವಿರೋಧ  ವ್ಯಕ್ತಪಡಿಸಿದ್ದಾರೆ. ಕೆಲ ಸಮಯ ಈ ಸಂಬಂಧ ಗ್ರಾಮಸ್ಥರಲ್ಲಿ ಪರ ವಿರೋಧ ಬಗ್ಗೆ ಚರ್ಚೆಗಳು ಸಹ ನಡೆದಿವೆ. ಕೊನೆಗೆ ಕುಟುಂಬಸ್ಥರು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರ ಒಪ್ಪಂದ ಮೇರೆಗೆ ಈ ಪ್ರಯತ್ನಕ್ಕೆ ಮುಂದಾದ್ರು ಎಂದು ವರದಿಯಾಗಿದೆ.

ಇದನ್ನೂ ಓದಿ:  Suicide Cases: 2021ರಲ್ಲಿ ಕೆಲಸ ಸಿಗಲಿಲ್ಲ ಅಂತ ವಾರಕ್ಕೆ 50 ಆತ್ಮಹತ್ಯೆಗಳು: NCRB

ಮುಗಿಲು ಮುಟ್ಟಿದ ಆಕ್ರಂದನ

ಈ ಎಲ್ಲಾ ಪ್ರಕ್ರಿಯೆ ನಡೆಯುವ ವೇಳೆ ಬಾಲಕನ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಷ್ಟೆಲ್ಲಾ ನಡೆದ್ರೂ ಮಗ ಬದುಕುಳಿಯಲಿಲ್ಲ ಎಂಬ ವಿಷಯ ಮನವರಿಕೆ ಆಗುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಹೆಚ್ಚಾಗಿತ್ತು. ಕೊನೆಗೆ ವಿಧಿವಿಧಾನಗಳಂತೆ ಮೃತ ಬಾಲಕನ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ವೈರಲ್ ಮೆಸೇಜ್ ಶೇರ್ ಮಾಡುವ ಮುನ್ನ ಎಚ್ಚರ

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಎಲ್ಲಾ ಸುದ್ದಿಗಳನ್ನು ನಂಬಬೇಕಿಲ್ಲ. ನಿಮ್ಮ ಮೊಬೈಲ್​​ಗೆ ಬಂದಿರುವ ಸುದ್ದಿ ಅಥವಾ ಫೋಟೋವನ್ನು ಫಾರ್ವರ್ಡ್​​ ಮಾಡುವ ಮುನ್ನ ಅದರ ಸತ್ಯಾಂಶ ತಿಳಿದುಕೊಳ್ಳಬೇಕು.

Died boy dead body put in salt at sirvar bellary mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Bengaluru Rains: ಬೆಂಗಳೂರು ಮಳೆ ಅವಾಂತರಕ್ಕೆ ಯುವತಿ ಬಲಿ; ವಿದ್ಯುತ್ ಸ್ಪರ್ಶಿಸಿ ಸಾವು

15 ದಿನಕ್ಕೆ ನವವಿವಾಹಿತೆ ಆತ್ಮಹತ್ಯೆ

ಒಲ್ಲದ ವಿವಾಹಕ್ಕೆ ನವವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ಹೊರವಲಯದ ಅಂಬ್ಲಮೊಗರು ಎಂಬಲ್ಲಿ ನಡೆದಿದೆ. ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. ರಶ್ಮಿಗೆ ಕೇವಲ 15 ದಿನಗಳ ಹಿಂದೆ ವಿವಾಹವಾಗಿತ್ತು. ಅಷ್ಟರಲ್ಲೇ ಸೂಸೈಡ್ ಮಾಡಿಕೊಂಡಿದ್ದಾರೆ. ಮಂಗಳೂರಿನ ಗಂಜಿಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಅವರನ್ನು ರಶ್ಮಿ ವಿವಾಹವಾಗಿದ್ದರು. 15 ದಿನದ ಹಿಂದೆಯಷ್ಟೇ ಸಪ್ತಪದಿ ತುಳಿದು ಬಂದಿದ್ದರು. ಆದರೆ ಮದುವೆ ಇಷ್ಟ ಇಲ್ಲದ್ದಕ್ಕೆ ಸೆಪ್ಟೆಂಬರ್ 3 ರಂದು ಇಲಿ ಪಾಷಣ ಸೇವಿಸಿ ಅಸ್ವಸ್ಥಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ರಶ್ಮಿ ಸಾವನ್ನಪ್ಪಿದ್ದಾರೆ.
Published by:Mahmadrafik K
First published: