ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Minister Sudhakar) ನಾಮಪತ್ರ ಸಲ್ಲಿಕೆ ವೇಳೆ 10 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಸುಧಾಕರ್ ಸ್ಟೌವ್ ಹಂಚಿದ್ದಾರೆ. ಕೇವಲ ನಾಮಿನೇಷನ್ (Nomination) ಹಾಕೋಕೆ 10 ಕೋಟಿ ಖರ್ಚು ಮಾಡಿದ್ದಾರೆ. ಆದ್ರೆ ಇಂತಹವೆಲ್ಲ ಇಲ್ಲಿ ನಡೆಯಲ್ಲ ಎಂದು ಹೇಳಿದರು. ಇದೇ ವೇಳೆ ತಾವು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ (Mandya Constituency) ಸ್ಪರ್ಧೆ ಮಾಡಲ್ಲ ಅನ್ನೋದನ್ನು ಖಚಿತಪಡಿಸಿದರು. ಯಾರು ಎಲ್ಲಿ ಬೇಕಾದರೂ ನಿಲ್ಲಲಿ ಎಂದು ಸಂಸದೆ ಸುಮಲತಾ ಅಂಬರೀಶ್ಗೆ (MP Sumalatha Ambareesh) ಟಾಂಗ್ ನೀಡಿದರು.
ವರುಣಾದಲ್ಲಿ ಜೆಡಿಎಸ್- ಬಿಜೆಪಿ ಒಳ ಮೈತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು. ಸಿದ್ದರಾಮಯ್ಯ ಜೆಡಿಎಸ್-ಬಿಜೆಪಿ ಎಂದು ಹೇಳಿದ್ರೆ ಸಿಎಂ ಬೊಮ್ಮಾಯಿ ಜೆಡಿಎಸ್-ಕಾಂಗ್ರೆಸ್ ಒಳಮೈತ್ರಿ ಎಂದು ಹೇಳ್ತಾರೆ. ಆದರೆ ಇದೆಲ್ಲವನ್ನು ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ದುಡ್ಡು ಇದೆ ಅಂತ ಆಟ ಆಡ್ತಾರೆ
ಯಾರು ಎಲ್ಲಿಂದ ಬೇಕಾದ್ರೂ ನಿಂತುಕೊಳ್ಳಿ. ನಾನು ತಡೆಯೋಕೆ ಆಗುತ್ತಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ದುಡ್ಡು ಇದೆ ಅಂತ ಮದದಿಂದ ನಡೆದುಕೊಳ್ತಿದ್ದಾರೆ. ದುಡ್ಡು ಇದೆ ಅಂತ ಆಟ ಆಡ್ತಾರೆ. ಇವೆಲ್ಲಾ ನಡೆಯಲ್ಲ? ಯಾರು ರೀ ಅವರ ಪ್ರೀತಂಗೌಡ ಎಂದು ವಾಗ್ದಾಳಿ ನಡೆಸಿದರು.
60 ಸಾವಿರ ಮತಗಳಿಂದ ಗೆಲುವು ಖಚಿತ
ನಮ್ಮ ನಾಯಕರು ಹೇಳಿದಂತೆ 60 ಸಾವಿರ ಮತಗಳಿಂದ ಗೆಲ್ಲುತ್ತೇವೆ. ಈಶ್ವರಪ್ಪನವರು ಸ್ಟಾರ್ ಕ್ಯಾಂಪೇನರ್ ಆಗಿದ್ದು, ಎಲ್ಲಾ ಕಡೆ ಪ್ರಚಾರಕ್ಕೆ ಹೋಗ್ತಾರೆ. ಅದರಂತೆ ಶಿವಮೊಗ್ಗದಲ್ಲೂ ಸಹ ಪ್ರಚಾರ ನಡೆಸುತ್ತಾರೆ.
ಇದನ್ನೂ ಓದಿ: YSV Datta ವಿರುದ್ಧ 41 ಚೆಕ್ ಬೌನ್ಸ್ ಕೇಸ್; ಬಿಜೆಪಿ ಅಭ್ಯರ್ಥಿ ಬಳಿ ಸಾಲ ಪಡೆದಿರುವ ಮೇಷ್ಟ್ರು!
ಈಶ್ವರಪ್ಪನವರು ಸಹ ಸಂಘಟನೆ ಮಾತನ್ನು ಮೀರಲ್ಲ ನಾವು ಮೀರಲ್ಲ. ಶಿವಮೊಗ್ಗದಲ್ಲಿ ಆಯನೂರು ಮಂಜುನಾಥ್ ಹುಟ್ಟುವ ಮುಂಚೆನೂ ಸಹ ಕೋಮುಗಲಭೆ ನಡೆದಿತ್ತು. ಅದನ್ನು ಅವರು ಮರೆಯಬಾರದು ಎಂದು ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ