Siddaramaiah: ನಾಟಿಕೋಳಿ ಸಾರು ತಿಂದು ದೇವಸ್ಥಾನಕ್ಕೆ ಹೋದ್ರಾ ಸಿದ್ದರಾಮಯ್ಯ? ಫೋಟೋ ವೈರಲ್

ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮಾಂಸದೂಟ ಸೇವಿಸಿ ದೇಗುಲಕ್ಕೆ ತೆರಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಅಂತಹ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕೊಡಗಿನ ಭೇಟಿ ವೇಳೆಯೂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲಕ್ಕೆ ತೆರಳಿದ್ದರು ಎನ್ನಲಾಗಿದೆ. ಫೋಟೋ ವೈರಲ್ ಆಗಿದೆ.

ಕೊಡಗಿನಲ್ಲಿ ಸಿದ್ದರಾಮಯ್ಯ ಭೋಜನ

ಕೊಡಗಿನಲ್ಲಿ ಸಿದ್ದರಾಮಯ್ಯ ಭೋಜನ

  • Share this:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೆರೆ ಹಾನಿ (Flood Effect) ವೀಕ್ಷಣೆಗೆ ಮೊನ್ನೆ ಮೊನ್ನೆಯಷ್ಟೇ ಕೊಡಗಿಗೆ ಭೇಟಿ ನೀಡಿದ್ದರು. ಆದರೆ ಸಿದ್ದರಾಮಯ್ಯರ ಕೊಡಗಿನ ಭೇಟಿ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗ್ತಿದೆ. ಸಿದ್ದರಾಮಯ್ಯರ ಕಾರಿನ ಮೇಲೆ ಮೊಟ್ಟೆ (Egg) ಎಸೆತ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಬಿಜೆಪಿ-ಕಾಂಗ್ರೆಸ್​ (BJP Congress) ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ. ಇದರ ನಡುವೆ ಈಗ ಸಿದ್ದರಾಮಯ್ಯ ಮಾಂಸಾಹಾರ (Non veg Meals) ಸೇವಿಸಿ ದೇವಸ್ಥಾನಕ್ಕೆ (Temple) ತೆರಳಿದ್ದರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಕೊಡಗಿಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದ ವೇಳೆ ಹಿಂದೂಗಳ ಭಾವನೆಗೆ ಧಕ್ಕೆ ಆಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಮಾಂಸಾಹಾರ ತಿಂದು ಹೋದ್ರೆ ತಪ್ಪೇನು ಅಂತಾ ಸಿದ್ದರಾಮಯ್ಯರೇ ಪ್ರಶ್ನೆ ಮಾಡಿದ್ದಾರೆ.

ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮಾಂಸದೂಟ ಸೇವಿಸಿ ದೇಗುಲಕ್ಕೆ ತೆರಳಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈಗ ಮತ್ತೊಮ್ಮೆ ಅಂತಹ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಕೊಡಗಿನ ಭೇಟಿ ವೇಳೆಯೂ ಸಿದ್ದರಾಮಯ್ಯ ಮಾಂಸಾಹಾರ ಸೇವಿಸಿ ದೇಗುಲಕ್ಕೆ ತೆರಳಿದ್ದರು ಎನ್ನಲಾಗಿದೆ. ಫೋಟೋ ವೈರಲ್ ಆಗಿದೆ.

ಸಿದ್ದರಾಮಯ್ಯಗೆ ಭರ್ಜರಿ ಭೋಜನ ವ್ಯವಸ್ಥೆ

ಸಿದ್ದರಾಮಯ್ಯ ಕೊಡಗಿನ ಭೇಟಿ ವೇಳೆ ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ ಮಧ್ಯಾಹ್ನ ಊಟ ಮಾಡಿದ್ದರು. ಈ ವೇಳೆ ಸಿದ್ದರಾಮಯ್ಯರಿಗೆ ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯರವರ ಮನೆಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಿದ್ದರಾಮಯ್ಯಗಾಗಿ ನಾಟಿಕೋಳಿ ಸಾರು, ರಾಗಿ ಮುದ್ದೆ, ಕಳಲೆ (ಕಣಿಲೆ), ಅನ್ನ ತರಕಾರಿ ಸಾರು ವ್ಯವಸ್ಥೆ ಮಾಡಲಾಗಿತ್ತು.

Did Siddaramaiah go to the temple after eating Non veg meals in Kodagu Photo viral
ಕೊಡಗಿನಲ್ಲಿ ಸಿದ್ದರಾಮಯ್ಯ ಭೋಜನ


ನಾಟಿಕೋಳಿ ಸಾರು ತಿಂದು ದೇವಸ್ಥಾನಕ್ಕೆ ಭೇಟಿ

ಮಡಿಕೇರಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸಿದ್ದರಾಮಯ್ಯ ನಾಟಿಕೋಳಿ ಸಾರು ಸೇವಿಸಿದ್ದರು. ಊಟದ ಬಳಿಕ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಈಗ ಸಿದ್ದರಾಮಯ್ಯ ಊಟ ಮಾಡಿದ ಫೋಟೋ, ದೇವಸ್ಥಾನಕ್ಕೆ ಹೋದ ವಿಡಿಯೋ ವೈರಲ್ ಆಗಿದೆ. ಮಾಂಸಾಹಾರ ಸೇವಿಸಿ ದೇಗುಲಕ್ಕೆ ಹೋಗಿದ್ರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಇಸ್ಲಾಂಗೆ ಮತಾಂತರಗೊಳ್ಳೋಕೆ ಸಜ್ಜಾಗಿದ್ದ ಅರ್ಚಕ, ಈಗ ಹಿಂದೂ ಧರ್ಮಕ್ಕೆ ಮರಳಿದ್ದೇಕೆ?

ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು- ಸಿದ್ದರಾಮಯ್ಯ ಪ್ರಶ್ನೆ

ಈ ವಿಚಾರಕ್ಕೆ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ‌ಊಟ ಮಾಡಿದ್ದು ಸುದರ್ಶನ್ ಗೆಸ್ಟ್ ಹೌಸ್ ನಲ್ಲಿ. ಸಂಜೆ‌ ನಾನು ಬಸವೇಶ್ವರ ‌ದೇವಾಲಯಕ್ಕೆ ಹೋಗಿದ್ದೆ. ನಾನ್ ವೆಜ್ ತಿಂದು ದೇವಸ್ಥಾನಕ್ಕೆ ಹೋದ್ರೆ ತಪ್ಪೇನು. ಮಧ್ಯಾಹ್ನ ತಿಂದು ಸಂಜೆ ದೇವಾಲಯಕ್ಕೆ ಹೋದ್ರೆ ತಪ್ಪೇನು. ನನ್ನ ಊಟದ ಬಗ್ಗೆ ಪ್ರಶ್ನಿಸಲು‌ ನೀವ್ಯಾರು ಅಂತಾ ಪ್ರಶ್ನೆ ಮಾಡಿದ್ದಾರೆ.ಜನೋತ್ಸವ ಅಲ್ಲ ಅದು ಭ್ರಷ್ಟೋತ್ಸವ

ನಾನು ದಾಳಿ ಮಾಡಲು ಕೊಡುಗಿಗೆ ಹೊಗುತ್ತಿಲ್ಲ. ಜನರ ಕಷ್ಟಗಳಿಗ ಸ್ಪಂದಿಸಲು ಹೋಗುತ್ತಿದ್ದೇನೆ. ಬಿಜೆಪಿಯವರಿಗೆ ನಮ್ಮ ಏಳಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರ ತಪ್ಪುಗಳನ್ನು ‌ಮುಚ್ಚಿಡಲು ಈ ರೀತಿಯ ಅಪಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಅವರು ನಡೆಸ್ತಿರೋದು ಜನೋತ್ಸವ ಅಲ್ಲ ಅದು ಭ್ರಷ್ಟೋತ್ಸವ ಎಂದು‌ ಲೇವಡಿ ಮಾಡಿದರು.

ಈಗ ಟಿಪ್ಪು ವಿರೋಧ ಯಾಕೆ?

ಟಿಪ್ಪುವನ್ನು ಬಿಜೆಪಿಯವರು ಈಗ ವಿರೋಧ ಮಾಡುತ್ತಿದ್ದಾರೆ. ಈ ಹಿಂದೆ ಟಿಪ್ಪು ವೇಷಭೂಷಣ ಧರಿಸಿದ್ದು‌ ನಾಟಕನಾ? ಅಶೋಕ್, ಜಗದೀಶ್​​ ಶೆಟ್ಟರ್, ಯಡಿಯೂರಪ್ಪ, ಶೋಭ ಕರಂದ್ಲಾಜೆ ಬೆಂಬಲಿಸಿದ್ದು ಯಾಕೆ ಅಂತಾ ಪ್ರಶ್ನಿಸಿದ್ದಾರೆ. ಟಿಪ್ಪು ‌ಪುಸ್ತಕಕ್ಕೆ‌ ಯಡಿಯೂರಪ್ಪ‌ರವರೇ ಮುನ್ನಡಿ ಬರೆದಿದ್ದಾರೆ ಅಂತಾ ಹೇಳಿದ್ರು.

ಇದನ್ನೂ ಓದಿ: ಮನೆ ಮುಂದೆ ಬ್ಯಾನರ್ ಹಾಕಿದ ಶಾಸಕ ರೇಣುಕಾಚಾರ್ಯ; ಮದ್ವೆಯಲ್ಲಿ ಸಾವರ್ಕರ್ ಫೋಟೋ ಗಿಫ್ಟ್

ಸಿದ್ದರಾಮಯ್ಯ ನಾನ್​ವೆಜ್ ಊಟ ತಿಂದಿಲ್ಲ- ವೀಣಾ ಅಚ್ಚಯ್ಯ

ಸಿದ್ದರಾಮಯ್ಯ ಅಂದು ಮಾಂಸಹಾರ ತಿಂದಿಲ್ಲ. ಮಳೆಗಾಲದ ಕೊಡಗಿನ ವಿಶೇಷ ಕಣಿಲೆ ಸೇವಿಸಿದ್ದಾರೆ. ಅದರ ಜೊತೆಗೆ ಅಕ್ಕಿರೊಟ್ಟಿ ತಿಂದಿದ್ದಾರೆ. ಅದು ಬಿಟ್ಟರೆ ಅನ್ನ ತರಕಾರಿ ಸಾಂಬಾರು ತಿಂದಿದ್ದಾರೆ. ಸ್ವತಃ ನಾನೇ ಅವರಿಗೆ ಊಟ ಬಡಿಸಿದ್ದೇನೆ ಅಂತಾ ವೀಣಾ ಅಚ್ಚಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.
Published by:Thara Kemmara
First published: