ಬೆಂಗಳೂರು: ರಾಜ್ಯ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalpad) ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನಲಪಾಡ್ ಮತ್ತು ಅವರ ತಂಡ ಲಕ್ಷಾಂತರ ಮೌಲ್ಯದ ಮೇಕೆಗಳನ್ನು ಖರೀದಿಸಿ ಹಣ ನೀಡುತ್ತಿಲ್ಲ ಎಂದು ವ್ಯಾಪಾರಿ ಶರತ್ ಕುಮಾರ್ ಎಂಬವರು ಹೇಳಿದ್ದಾರೆ. ಈ ಸಂಬಂಧ ನಲಪಾಡ್ ಬಲಗೈ ಬಂಟ, ರೌಡಿಶೀಟರ್ ರಾಮಚಂದ್ರ ಅಲಿಯಾಸ್ ರಾಮನಾಯಕ್ ವಿರುದ್ಧ ಶರತ್ ದೂರು ದಾಖಲಿಸಿದ್ದಾರೆ. ಕಳೆದ ವರ್ಷ ನಲಪಾಡ್ ಹುಟ್ಟುಹಬ್ಬದ ಪ್ರಯುಕ್ತ ಹೊಸಕೋಟೆಯಲ್ಲಿ (Hoskote) ದೊಡ್ಡಮಟ್ಟದ ಪಾರ್ಟಿ (Party) ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿ ಹಿನ್ನೆಲೆ ನಲಪಾಡ್ ಬಲಗೈ ಬಂಟನಾಗಿರುವ ರಾಮಚಂದ್ರ ಒಟ್ಟು ನಾಲ್ಕೂವರೆ ಲಕ್ಷ ಮೌಲ್ಯದ ಮೇಕೆ (Goats) ಖರೀದಿ ಮಾಡಿದ್ದ. ಬರ್ತ್ ಡೇ ಪಾರ್ಟಿ ಮುಗಿದು ವರ್ಷ ಕಳೆದ್ರೂ ಇದುವರೆಗೂ ರಾಮಚಂದ್ರ ಹಣ ಪಾವತಿಸಿಲ್ಲ. ಕೇಳಿದ್ರೆ ಜೀವ ಬೆದರಿಕೆ ಹಾಕ್ತಾರೆ ಎಂದು ಶರತ್ ಕುಮಾರ್ ಆರೋಪಿಸಿದ್ದಾರೆ.
ಈ ಬಗ್ಗೆ ಎಲ್ಲಾ ಗೊತ್ತಿದ್ದರೂ ನಲಪಾಡ್ ಸುಮ್ಮನಿದ್ದಾರೆ ಅನ್ನೋದು ಶರತ್ ಕುಮಾರ್ ಮಾತು. ನಲಾಪಡ್ ಸ್ನೇಹಿತರು ಇದೇ ರೀತಿ ಬಟ್ಟೆ ಖರೀದಿಸಿ ಹಣ ನೀಡದೇ ಏಳೂವರೆ ಲಕ್ಷ ರೂಪಾಯಿ ಮೋಸ ಮಾಡಲಾಗಿದೆ ಎಂಬ ಆರೋಪವೂ ಸಹ ಕೇಳಿ ಬಂದಿದೆ.
ಈ ಬಗ್ಗೆ ನಲಪಾಡ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ತೆಗೆದುಕೊಳ್ಳುತ್ತಿಲ್ಲ. ಕಮಿಷನರ್ ಅವರಿಗೆ ದೂರು ಕೊಟ್ಟಿದ್ದೇನೆ, ಈಗ ಕೋರ್ಟ್ ಮೊರೆ ಹೋಗಲು ಸಿದ್ಧನಿದ್ದೇನೆ ಎಂದು ಮೋಸ ಹೋದ ವ್ಯಕ್ತಿ ಶರತ್ ಹೇಳುತ್ತಾರೆ.
ಎಲ್ಲಾ ಕಡೆ ನಲಪಾಡ್ ಪಿಎ ಎಂಟ್ರಿ
ಮಾಧ್ಯಮಗಳ ಜೊತೆ ಮಾತನಾಡಿದ ಶರತ್ ಕುಮಾರ್, ನನ್ನದು ಬಟ್ಟೆ ಅಂಗಡಿ ಇದೆ. ಅಲ್ಲಿಗೆ ಬಂದ ರಾಮಚಂದ್ರ ಪ್ರತಿ ತಿಂಗಳು 30 ರಿಂದ 40 ಸಾವಿರ ವ್ಯವಹಾರ ನಡೆಸುತ್ತಿದ್ದರು. ನಂತರ ಸಾಲ ಪಡೆದು ಬಟ್ಟೆ ಖರೀದಿ ಮಾಡಿದರು. ಇನ್ನು ನಲಪಾಡ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ 30-40 ಮೇಕೆ ಖರೀದಿ ಮಾಡಿದರು. ಆದರೆ ಈಗ ಹಣ ಕೊಡುತ್ತಿಲ್ಲ. ನಾನು ಸಹಾಯ ಕೇಳಿದ್ರೆ ಅಲ್ಲಿ ನಲಪಾಡ್ ಎಂಟ್ರಿ ಆಗುತ್ತಿದ್ದಾರೆ ಎಂದು ಆರೋಪಿಸಿದರು.
ಅಮ್ಮನ ಮುಂದೆಯೇ ಬೆದರಿಕೆ
ನಲಪಾಡ್ ಜೊತೆ ಮಾತನಾಡಲು ನಮಗೆ ಅವಕಾಶವೇ ಕೊಡುತ್ತಿಲ್ಲ. ಆದರೆ ಈ ವಿಷಯ ಅವರಿಗೆ ಗೊತ್ತಿಲ್ಲ. ನಮ್ಮ ತಾಯಿ ಮುಂದೆ ನನ್ನ ಬಲಗೈ ಕತ್ತರಿಸಿ ಹಾಕುತ್ತೇನೆ ಎಂದು ರಾಮಚಂದ್ರ ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಲ್ಲಿ ನಲಪಾಡ್ ಪಿಎ ಸಹ ಇದ್ರು ಎಂಬ ವಿಚಾರವನ್ನು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ