ಬೆಳಗಾವಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ (Congress-JDS Government) ಕಾರಣರಾದ ರೆಬೆಲ್ ಲೀಡರ್ಗಳು ಸದ್ಯ ಬಿಜೆಪಿಯಲ್ಲಿದ್ದಾರೆ. ಆದರೆ ಈ ಬಾರಿ ವಿಧಾನಸಭಾ ಚುನಾವಣೆ (Karnataka Assembly Election 2023) ಟಿಕೆಟ್ ಸಿಗುತ್ತಾ ಅಥವಾ ಇಲ್ಲವಾ ಅನ್ನೋ ಸಣ್ಣ ಆತಂಕವೊಂದು ಅವರಲ್ಲಿ ಮನೆ ಮಾಡಿದೆ. ಸಚಿವರಾದ ಎಸ್.ಟಿ.ಸೋಮಶೇಖರ್ (ST Somashekhar), ನಾರಾಯಣ ಗೌಡ (Narayan Gowda), ಎಂಎಲ್ಸಿ ಹೆಚ್.ವಿಶ್ವನಾಥ್ (H Vishwanath) ಕಾಂಗ್ರೆಸ್ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಇತ್ತ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬೈ ಎಲೆಕ್ಷನ್ನಲ್ಲಿ ಗೆದ್ದರೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ (MLA Mahesh Kumatalli) ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ.
ಇಷ್ಟು ದಿನ ಬೆಳಗಾವಿ ಸಾಹುಕಾರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ (Former Minister Ramesh Jarkiholi) ಜೊತೆ ಕಾಣಿಸಿಕೊಳ್ಳುತ್ತಿದ್ದ ಶಾಸಕ ಮಹೇಶ್ ಕುಮಟಳ್ಳಿ ಇಂದು ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Former DCM Laxman Savadi) ಜೊತೆ ರಹಸ್ಯವಾಗಿ ಒಪ್ಪಂದ ಮಾಡಿಕೊಂಡಿರುವ ಸುಳಿವನ್ನು ಮಹೇಶ್ ಕುಮಟಳ್ಳಿ ನೀಡಿದ್ದಾರೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಕುಮಟಳ್ಳಿ
ಹೌದು, 2018ರ ವಿಧಾನಸಭಾ ಚುನಾವಣೆಯಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಮತ್ತು ಲಕ್ಷ್ಮಣ ಸವದಿ ಮುಖಾಮುಖಿಯಾಗಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಸವದಿ ಅವರನ್ನು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಮಹೇಶ್ ಕುಮಟಳ್ಳಿ ಸೋಲಿಸಿದ್ದರು. ಬದಲಾದ ರಾಜಕಾರಣದಲ್ಲಿ ಮಹೇಶ್ ಕುಮಟಳ್ಳಿ ಕಮಲ ಬಾವುಟ ಹಿಡಿದರು.
2019ರಲ್ಲಿ ನಡೆದ ಬೈ ಎಲೆಕ್ಷನ್ನಲ್ಲಿ ಬಿಜೆಪಿಯಿಂದಲೇ ಸ್ಪರ್ಧೆ ಮಾಡಿ ಅಥಣಿ ಕ್ಷೇತ್ರದ ಶಾಸಕರಾಗಿ ಮಹೇಶ್ ಕುಮಟಳ್ಳಿ ಆಯ್ಕೆಯಾದರು. ಇತ್ತ ಸೋತಿದ್ದ ಸವದಿ ಅವರನ್ನು ಬಿಜೆಪಿ ಹೈಕಮಾಂಡ್ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಸವದಿ ವರ್ಸಸ್ ಕುಮಟಳ್ಳಿ, ಟಿಕೆಟ್ ಫೈಟ್
ಈಗ ವಿಧಾನಸಭೆ ಸಮೀಪಿಸುತ್ತಿದ್ದಂತೆ ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆ ಎದುರಾಗಿತ್ತು. ಲಕ್ಷ್ಮಣ ಸವದಿ ಮೂರು ಬಾರಿ ಅಥಣಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದು, ತಮ್ಮದೇ ಪ್ರಾಬಲ್ಯವನ್ನು ಹೊಂದಿದ್ದಾರೆ. ಇತ್ತ ಮಹೇಶ್ ಕುಮಟಳ್ಳಿ ಹಾಲಿ ಶಾಸಕರಾಗಿದ್ದಾರೆ. ಹಾಗಾಗಿ ಇಬ್ಬರ ಮಧ್ಯೆ ಟಿಕೆಟ್ ಫೈಟ್ ನಡೆದಿತ್ತು.
ಇಬ್ಬರು ಮಧ್ಯೆ ನಡೆದಿದ್ಯಾ ಒಪ್ಪಂದ?
ಸದ್ಯ ಲಕ್ಷ್ಮಣ ಸವದಿ ಮತ್ತು ಮಹೇಶ್ ಕುಮಟಳ್ಳಿ ನಡುವೆ ಚುನಾವಣೆಗೆ ಸಂಬಂಧಿಸಿದಂತೆ ಒಪ್ಪಂದ ನಡೆದಿದೆ ಎನ್ನಲಾಗಿದೆ. ಈ ಒಪ್ಪಂದದಲ್ಲಿ ಮಹೇಶ್ ಕುಮಟಳ್ಳಿ ಚುನಾವಣೆ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಥಣಿ ಕ್ಷೇತ್ರವನ್ನು ಲಕ್ಷ್ಮಣ ಸವದಿ ಅವರಿಗೆ ಬಿಟ್ಟುಕೊಟ್ಟು ಎಂಎಲ್ಸಿ ಆಗಲು ಮಹೇಶ್ ಕುಮಟಳ್ಳಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ಜೊತೆ ಟುಬಿಟ್ರಾ?
ರಮೇಶ್ ಜಾರಕಿಹೊಳಿ ತಮ್ಮ ಭಾಷಣಗಳಲ್ಲಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಬೇಕು ಎಂದು ಹೇಳುತ್ತಿದ್ದಾರೆ. ಆಪ್ತ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ಕೊಡಿಸಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಆದ್ರೀಗ ಮಹೇಶ್ ಕುಮಟಳ್ಳಿ ಅವರೇ ಚುನಾವಣೆಯಿಂದ ಹಿಂದೆ ಬರಲು ನಿರ್ಧರಿಸಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
BSY ಸುಧಾಕರ್ ಮಾತು ಕೇಳ್ತಿದ್ರು
ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಸುಧಾಕರ್ ಹೇಳಿದ ಮಾತು ಕೇಳುತ್ತಿದ್ರು. ಈಗ ಬಸವರಾಜ್ ಬೊಮ್ಮಾಯಿ ಸಹ ಸುಧಾಕರ್ ಹೇಳಿದ ಮಾತು ಕೇಳುತ್ತಾರೆ. ಸಿಎಂ ಬೊಮ್ಮಾಯಿಗೆ ಅದೇನು ಮರಳು ಮಾಡಿದ್ದಾರೋ ಏನೋ ಗೊತ್ತಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ಸುಧಾಕರ್ ಏನು ಹೇಳಿದ್ರೂ ಸಹ ಡಾಕ್ಟರ್ ಹೇಳಿದ್ರೇ ಕೊಡ್ರಿ ಅಂತ ಸಿಎಂ ಅಂತಾರೆ. ಸಚಿವ ಸುಧಾಕರ್ ಸರ್ ಎಂ ವಿಶ್ವೇಶ್ವರಯ್ಯ ಮಾದರಿಯಲ್ಲೇ ಕೆಲಸ ಮಾಡ್ತಾರೆ ಎಂದು ಸೋಮಶೇಖರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ