• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Madal Virupakshappa ಏನು ಪಾಕಿಸ್ತಾನದ ವಿರುದ್ಧ ಹೋರಾಡಿದ್ದನಾ? ಮುತಾಲಿಕ್ ವಾಗ್ದಾಳಿ

Madal Virupakshappa ಏನು ಪಾಕಿಸ್ತಾನದ ವಿರುದ್ಧ ಹೋರಾಡಿದ್ದನಾ? ಮುತಾಲಿಕ್ ವಾಗ್ದಾಳಿ

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್

ಗೋ ಹಂತಕರು ಸಂವಿಧಾನ ಕಾನೂನು ಉಲ್ಲಂಘನೆ ಅಲ್ಲಾ ಅಂತ ಮುಸ್ಲಿಂರು ಉದ್ಧಟತನ ಮೆರೆಯುತ್ತಾರೆ. ಹಾಗಾಗಿ ಅವರ ಜೊತೆ ವ್ಯವಹಾರ ಮಾಡಬೇಡಿ. ಶತ್ರು ಪೂಜೆಯನ್ನ ಮನೆಯಲ್ಲಿ ಮಾಡಬೇಕು ನಮ್ಮ ಸಂಪ್ರದಾಯದಲ್ಲಿದೆ ಎಂದು ಕೋಮು ಸಂಘರ್ಷದ ಕಿಡಿ ಹಚ್ಚಿದರು.

  • News18 Kannada
  • 3-MIN READ
  • Last Updated :
  • Karnataka, India
  • Share this:

ಬೆಂಗಳೂರು: ಲೋಕಾಯುಕ್ತ ದಾಳಿ (Lokayukta Raids) ವೇಳೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ (MLA Madal Virupakshappa) ನಿವಾಸದಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಈ ಪ್ರಕರಣದಲ್ಲಿ ಶಾಸಕರೇ ಎ1 ಆರೋಪಿ. ನ್ಯಾಯಾಲಯದಿಂದ ಜಾಮೀನು (Bail) ಸಿಕ್ಕ ಬಳಿಕ ಶಾಸಕರ ಮೇಲೆ ಹೂಮಳೆ ಸುರಿಸಿ ಸ್ವಾಗತ ಮಾಡಲಾಗಿತ್ತು. ಮೆರವಣಿಗೆ ಮೂಲಕ ಅದ್ಧೂರಿ ಸ್ವಾಗತ ಮಾಡಲಾಗಿದೆ. ಮೆರವಣಿಗೆ ವೇಳೆ ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗಲಾಗಿದೆ. ಈ ಘೋಷಣೆ ಕೂಗಲು ಮಾಡಾಳ್ ವಿರೂಪಾಕ್ಷಪ್ಪ ಏನು ಪಾಕಿಸ್ತಾನದ (Pakistan) ವಿರುದ್ಧ ಹೋರಾಡಿದ್ದನಾ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Srirama sena Founder Pramod Muthalik) ನೆಲಮಂಗಲದಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಬಡವರನ್ನ ಲೂಟಿ ಮಾಡಲಾಗಿದೆ. ದೇಶದಲ್ಲಿ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು. ನಿಮಗೆ ಮಾನ ಮರ್ಯಾದೆ ಇದೆಯಾ? ಎಲ್ಲಾ ಪಕ್ಷದವರು ನಿರ್ಲಜ್ಜಗೇಡಿ ಇದ್ದೀರಾ ಎಂದು ಹರಿಹಾಯ್ದರು.


ಹಿಂದೂಗಳ ಜೊತೆ ಮಾತ್ರ ವ್ಯವಹರಿಸಿ


ಚೀನಿ ವಸ್ತು ಖರೀದಿ ಮಾಡಬೇಡಿ, ದೇಶಿ ವಸ್ತು ಖರೀದಿಸಿ. ಪಾಕಿಸ್ತಾನಕ್ಕಿಂತ ಚೀನಾ ತುಂಬಾ ಅಪಾಯಕಾರಿಯಾಗಿದ್ದು, ಹಿಂದೂಗಳ ಜೊತೆಯಲ್ಲಿ ವ್ಯವಹರಿಸಿ. ಹಿಂದೂಗಳ ಜೊತೆ ವ್ಯಾಪಾರ ಮಾಡಿ ಹಿಂದೂಗಳಿಗೆ ಮಾತ್ರ ಮನೆ, ಅಂಗಡಿಗಳನ್ನು  ಬಾಡಿಗೆಗೆ ಕೊಡಿ ಎಂದು ಕರೆ ನೀಡಿದರು.


did Madal Virupakshappa fought with pakistan asks pramod muthalik mrq
ಪ್ರಮೋದ್ ಮುತಾಲಿಕ್


ಗೋ ಹಂತಕರು ಸಂವಿಧಾನ ಕಾನೂನು ಉಲ್ಲಂಘನೆ ಅಲ್ಲಾ ಅಂತ ಮುಸ್ಲಿಂರು ಉದ್ಧಟತನ ಮೆರೆಯುತ್ತಾರೆ. ಹಾಗಾಗಿ ಅವರ ಜೊತೆ ವ್ಯವಹಾರ ಮಾಡಬೇಡಿ. ಶತ್ರು ಪೂಜೆಯನ್ನ ಮನೆಯಲ್ಲಿ ಮಾಡಬೇಕು ನಮ್ಮ ಸಂಪ್ರದಾಯದಲ್ಲಿದೆ ಎಂದು ಕೋಮು ಸಂಘರ್ಷದ ಕಿಡಿ ಹಚ್ಚಿದರು.


ಮಹಾರಾಷ್ಟ್ರ ಮತ್ತೆ ಗಡಿ ಕಿರಿಕ್​


ಕರ್ನಾಟಕದ 865 ಹಳ್ಳಿಗಳಲ್ಲಿ ಮಹಾರಾಷ್ಟ್ರ ಸರ್ಕಾರದ (Maharashtra Government) ಆರೋಗ್ಯ ಯೋಜನೆ (Health Schemes) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಗಡಿ ವಿವಾದ (Karnataka-Maharashtra Border Issue) ಮತ್ತೆ ಭುಗಿಲೆದ್ದಿದೆ. ಪ್ರತಿಪಕ್ಷ ಕಾಂಗ್ರೆಸ್ ಈ ಕ್ರಮವನ್ನು ಖಂಡಿಸಿದೆ.




ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾದ ಕಾರಣಕ್ಕಾಗಿ ಸಿಎಂ ಬೊಮ್ಮಾಯಿ ಅವರ ರಾಜೀನಾಮೆಗೆ ಕಾಂಗ್ರೆಸ್​​ ಒತ್ತಾಯಿಸಿದೆ. ಮಾರ್ಚ್ ಮೊದಲ ವಾರದಲ್ಲಿ, ಮಹಾರಾಷ್ಟ್ರ ಸರ್ಕಾರವು ತನ್ನ ಮಹಾತ್ಮ ಜ್ಯೋತಿರಾವ್ ಫುಲೆ ಜನ್ ಆರೋಗ್ಯ ಯೋಜನೆಯನ್ನು ಕರ್ನಾಟಕದ ಗ್ರಾಮಗಳಲ್ಲಿ ಜಾರಿಗೆ ತರಲು ನಿರ್ಧರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ ಮಹಾರಾಷ್ಟ್ರದ ಯೋಜನೆಯನ್ನ ತಡೆಯೋದು ಗೊತ್ತಿದೆ ಅಂತಾ ಟಾಂಗ್ ಕೊಟ್ಟಿದ್ದಾರೆ.


ಅಶ್ವತ್ಥ್, ಅಶೋಕ್ ಸಂಶೋಧನೆ ಮಾಡಿದ್ದಾರೆ


ಟಿಪ್ಪು ಉರಿಗೌಡ, ನಂಜೇಗೌಡ ಚರ್ಚೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಗೆ ಸಚಿವ ಮುನಿರತ್ನ (Minister Munirtna) ಟಾಂಗ್ ಕೊಟ್ಟಿದ್ದಾರೆ. HDKಗೆ ಯಾಕೆ ಅನುಮಾನ ಬಂದಿದ್ಯೊ ಗೊತ್ತಿಲ್ಲ. ಇತಿಹಾಸವನ್ನ ಯಾರೂ ತಿರುಚಲು ಸಾಧ್ಯವಿಲ್ಲ. ಉರಿಗೌಡ, ನಂಜೇಗೌಡ ಬಗ್ಗೆ ಅಶ್ವತ್ಥ ನಾರಾಯಣ, ಆರ್.ಅಶೋಕ್ ಸಂಶೋಧನೆ ನಡೆಸಿದ್ದಾರೆ. ಈ ಹಿಂದೆ ಮುಚ್ಚಿಟ್ಟಿದ್ದ ಸತ್ಯ ಹೊರಬಂದಿದ್ದಕ್ಕೆ ಕೆಲವರಿಗೆ ಸಹಿಸಿಕೊಳ್ಳೋಕಾಗ್ತಿಲ್ಲ ಎಂದು ಸಚಿವ ಮುನಿರತ್ನ ಹೇಳಿದರು.




ಇದನ್ನೂ ಓದಿ: Pramod Muthalik: ಒಂದು ಹಿಂದೂ ಹುಡುಗಿಗೆ ಪ್ರತಿಯಾಗಿ 10 ಮುಸ್ಲಿಂ ಯುವತಿಯರನ್ನ ಬಲೆಗೆ ಬೀಳಿಸಿಕೊಳ್ಳಿ; ಪ್ರಮೋದ್ ಮುತಾಲಿಕ್


ಬಾಂಬೆ ರಿಟರ್ನ್ಸ್  ಪುಸ್ತಕ ರಿಲೀಸ್​​


ರಾಜಕೀಯ ಬಿರುಗಾಳಿ ಎಬ್ಬಿಸಲಿದೆ ಎಂದೇ ಬಿಂಬಿತವಾಗಿದ್ದ ಬಾಂಬೆ ರಿಟರ್ನ್ಸ್​​ ಡೇಸ್ ಪುಸ್ತಕ ರಿಲೀಸ್ ಆಗಿದೆ. ಮುಂಚೆಲ್ಲಾ ಬಾಂಬೆ ಬಾಯ್ಸ್ ಟೀಂನಲ್ಲಿದ್ದ ಹೆಚ್​ ವಿಶ್ವನಾಥ್ ಪುಸ್ತಕ ಬರೆಯುತ್ತಾರೆ ಎಂದೇ ಹೇಳಲಾಗ್ತಿತ್ತು. ಆದರೆ, ಮೈಸೂರಿನ ವಿ. ವೀರಭದ್ರಪ್ಪ ಬಿಸ್ಲಳ್ಳಿ ಪುಸ್ತಕ ಬರೆದಿದ್ದಾರೆ. ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಪುಸ್ತಕ ರಿಲೀಸ್ ಆಯ್ತು. ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಲೇಖಕ ವೀರಭದ್ರಪ್ಪ, ತಮ್ಮ ಬರವಣಿಗೆಯನ್ನು ಸಮರ್ಥಿಸಿಕೊಂಡರು.

Published by:Mahmadrafik K
First published: