• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Govt Employees Strike: ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ? ಮಧ್ಯಾಹ್ನ ಆದೇಶ ಸಾಧ್ಯತೆ

Govt Employees Strike: ಶೇಕಡಾ 20ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರದ ಒಪ್ಪಿಗೆ? ಮಧ್ಯಾಹ್ನ ಆದೇಶ ಸಾಧ್ಯತೆ

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ನಾಳೆಯಿಂದ ನೌಕರರು ಕಚೇರಿಗೆ ಆಗಮಿಸಿ ಕೆಲಸ ಮಾಡಿಕೊಳ್ಳುವಂತೆ ನೋಡಿಕೊಳ್ಳಿ. ಸದ್ಯ ಮಧ್ಯಂತರ ಪರಿಹಾರ ಕಂಡುಕೊಳ್ಳಿ. ಸಾರ್ವಜನಿಕ ವಲಯದಲ್ಲೂ ಅನಗತ್ಯ ಚರ್ಚೆಗೆ ಕಾರಣವಾಗಿದೆ. ಈಗಲೇ ನೌಕರರ ಬೇಡಿಕೆ ಈಡೇರಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

  • Share this:

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು (State Government Employees Strike) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳೇ (CM Basavaraj Bommai) ಸರ್ಕಾರಿ ನೌಕರರ ಜೊತೆ ಸಭೆ ನಡೆಸಿ, ಸುದೀರ್ಘ ಚರ್ಚೆ ನಡೆಸಿದ್ದರು. ಆದರೆ ಈ ಸಂಧಾನ ಸಫಲವಾಗಿರಲಿಲ್ಲ. ಸಭೆ ಬಳಿಕ ಮಾತನಾಡಿದ್ದ ಸಿಎಂ ಬೊಮ್ಮಾಯಿ, ಬೇಡಿಕೆ (Government Employees Demands) ಈಡೇರಿಕೆ ಕುರಿತು ಚರ್ಚಿಸಲಾಗಿದೆ. ಒಮ್ಮತದ ತೀರ್ಮಾನಕ್ಕೆ ಹೇಳಲಾಗಿದೆ. ಶೀಘ್ರದಲ್ಲೇ ಮುಷ್ಕರ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೀಗ ಸಿಎಂ ಬೊಮ್ಮಾಯಿ ಅವರು ಶೇ.20ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು, ಮಧ್ಯಾಹ್ನದ ವೇಳೆಗೆ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ


ಶೇ.20ರಷ್ಟು ವೇತನ‌ ಹೆಚ್ಚಳ ಹಾಗೂ OPS ಸಮಿತಿ ರಚನೆ ಬಗ್ಗೆ ಮಧ್ಯಾಹ್ನ 2 ಗಂಟೆಯ ನಂತರ ಆದೇಶ ಹೊರಬೀಳುವ ಸಾಧ್ಯತೆಗಳಿವೆ. ಈ ಬಗ್ಗೆ ರಾಜ್ಯ ಸರ್ಕಾರಿ ನೌಕರರ ತಾತ್ವಿಕ ಒಪ್ಪಿಗೆ ನೀಡಿದ್ದು, ಆದೇಶ ಹೊರಡಿಸುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಹೇಳಿದ್ದಾರಂತೆ.


ಪರಮಾಧಿಕಾರ ಬಳಸಿ ಆದೇಶ ಸಾಧ್ಯತೆ


7ನೇ ವೇತನ ಆಯೋಗ ಮಧ್ಯಂತರ ವರದಿ ಬರೋದು ತಡವಾಗಲಿದೆ. ಈ ಹಿನ್ನೆಲೆ ಸಿಎಂ ಪರಮಾಧಿಕಾರ ಬಳಸಿ 1-7-2022ರಿಂದ ಜಾರಿಯಾಗುವಂತೆ ಆದೇಶ ಹೊರಡಿಸುವ ಸಾಧ್ಯತೆ ಇದೆ. ಮಧ್ಯಂತರ ವರದಿಯಲ್ಲಿ ಶೇ.30ಕ್ಕೆ ಶಿಫಾರಸ್ಸು ಸಾಧ್ಯತೆ ಇದೆ.


OPS ಪಿಂಚಣಿ ಯೋಜನೆ ಜಾರಿಗೆ ಸಮಿತಿ ರಚನೆ ಮಾಡಲಾಗುವುದು. ಈಗಾಗಲೇ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿರುವ ರಾಜ್ಯಗಳಿಗೆ ಭೇಟಿ ಮಾಡಿ ಐದು ತಿಂಗಳೊಳಗೆ ವರದಿ ಸಲ್ಲಿಸಲು ಸಿಎಂ ಸೂಚನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.


ಸಿಎಂಗೆ ಹೈಕಮಾಂಡ್ ಸೂಚನೆ


ಇನ್ನು ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಸಿಎಂ ಬೊಮ್ಮಾಯಿ ಅವರಿಗೆ ಸಂದೇಶ ರವಾನಿಸಿದ್ದು, ಅವರ ಬೇಡಿಕೆ ಕೂಡಲೇ ಬಗೆಹರಿಸಿ. ಈಗಗಾಲೇ ವಿಳಂಬವಾಗಿದ್ದು, ನೌಕರರ ಮಷ್ಕರ ಸರ್ಕಾರದ ಇಮೇಜಿಗೆ ಡ್ಯಾಮೇಜ್ ಆಗಿದೆ. ಇವತ್ತಿಗೆ ಎಲ್ಲವನ್ನು ಮುಗಿಸಿ ಎಂದು ಖಡಕ್ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


ನಾಳೆಯಿಂದ ನೌಕರರು ಕಚೇರಿಗೆ ಆಗಮಿಸಿ ಕೆಲಸ ಮಾಡಿಕೊಳ್ಳುವಂತೆ ನೋಡಿಕೊಳ್ಳಿ. ಸದ್ಯ ಮಧ್ಯಂತರ ಪರಿಹಾರ ಕಂಡುಕೊಳ್ಳಿ. ಸಾರ್ವಜನಿಕ ವಲಯದಲ್ಲೂ ಅನಗತ್ಯ ಚರ್ಚೆಗೆ ಕಾರಣವಾಗಿದೆ. ಈಗಲೇ ನೌಕರರ ಬೇಡಿಕೆ ಈಡೇರಿಸುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.


ಇದನ್ನೂ ಓದಿ: Govt Employees Strike: ಸಿಎಂ ಜೊತೆಗಿನ ಸಂಧಾನ ವಿಫಲ; ಇಂದಿನಿಂದ ಸರ್ಕಾರಿ ಕಚೇರಿಗಳು ಬಂದ್!


ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.


ಯಾವ ಸೇವೆ ಇರಲ್ಲ?


ವಿಧಾನಸೌಧದ ಕಚೇರಿಗಳು, ಬಿಬಿಎಂಪಿ ಕೇಂದ್ರ ಕಚೇರಿ , ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯ್ತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ (ಒಪಿಡಿ), ಉಪ ನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಕಸ ಸಂಗ್ರಹಣೆ, ನೀರು ಪೂರೈಕೆ
ಏನೆಲ್ಲಾ ಇರುತ್ತೆ?


ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ.


ನೌಕರರ ಬೇಡಿಕೆಗಳೇನು


1.ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ ಬೇಕು


2.ಮೂಲ ವೇತನದ ಶೇ. 40ರಷ್ಟು ವೇತನ ಹೆಚ್ಚಳ


3.2023ರ ಏಪ್ರಿಲ್‌ 1ರಿಂದ ಆರ್ಥಿಕ ಅನುಕೂಲ ಬೇಕು


4.NPS ರದ್ದು ಮಾಡಿ OPS ವ್ಯಾಪ್ತಿಗೆ ತರಬೇಕು.

Published by:Mahmadrafik K
First published: