• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka CM: ಹೈಕಮಾಂಡ್​​ಗೆ ‘ಡಿಕೆ’ ಕಂಡೀಷನ್ಸ್​; ಸಿದ್ದರಾಮಯ್ಯಗೆ ಸಾಥ್​ ಕೊಟ್ಟವರಿಗೆ ಶಾಕ್ ಕೊಡಲು ‘ಕನಕಪುರ ಬಂಡೆ’ ರಣತಂತ್ರ!

Karnataka CM: ಹೈಕಮಾಂಡ್​​ಗೆ ‘ಡಿಕೆ’ ಕಂಡೀಷನ್ಸ್​; ಸಿದ್ದರಾಮಯ್ಯಗೆ ಸಾಥ್​ ಕೊಟ್ಟವರಿಗೆ ಶಾಕ್ ಕೊಡಲು ‘ಕನಕಪುರ ಬಂಡೆ’ ರಣತಂತ್ರ!

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

DK Shivakumar Conditions: ಒಟ್ಟು ಐದು ಸೂತ್ರಗಳನ್ನು ಹೈಕಮಾಂಡ್​ ಮುಂದೆ ಡಿಕೆ ಶಿವಕುಮಾರ್ ಇರಿಸಿದ್ದಾರಂತೆ. ಇಂದು ಸಂಜೆ ದೆಹಲಿಗೆ ತೆರಳಲಿರುವ ಡಿಕೆ ಶಿವಕುಮಾರ್ ಈ ಸಂಬಂಧ ಚರ್ಚೆ ನಡೆಸಲಿದ್ದಾರಂತೆ.

 • News18 Kannada
 • 4-MIN READ
 • Last Updated :
 • Karnataka, India
 • Share this:

ಬೆಂಗಳೂರು: ಕರ್ನಾಟಕದ ಸಿಎಂ (Karnataka CM) ಆಯ್ಕೆ ಕಸರತ್ತು ಮುಂದುವರಿದಿದೆ. 135 ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್​ಗೆ (Congress) ಈಗ ಸಿಎಂ ಆಯ್ಕೆ ಕಬ್ಬಿಣದ ಕಡಲೆಯಾಗಿದೆ. ಇಬ್ಬರು ಪ್ರಬಲ ನಾಯಕರು ಸ್ಪರ್ಧೆಯಲ್ಲಿರೋ ಕಾರಣ 50:50 ಫಾರ್ಮುಲಾವನ್ನು ಕಾಂಗ್ರೆಸ್ ಮುಂದಿಟ್ಟಿದೆಯಂತೆ. ಆದ್ರೆ ಈ ಫಾರ್ಮೂಲಾವನ್ನು ಇಬ್ಬರೂ ಒಪ್ಪಿಕೊಳ್ಳುತ್ತಿಲ್ಲ ಎಂದು ವರದಿಯಾಗ್ತಿದೆ. ಆದ್ರಿಂದ ಈ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Congress President Mallikarjun Kharge) ಕೇಂದ್ರ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸುತ್ತಿದ್ದಾರೆ. ಆದರೂ ಸಿಎಂ ಆಯ್ಕೆ ಇನ್ನೂ ಆಗಿಲ್ಲ. ಹೈಕಮಾಂಡ್ ಬುಲಾವ್ ನೀಡಿದರೂ ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿನಲ್ಲಿಯೇ ಉಳಿದುಕೊಳ್ಳುವ ಮೂಲಕ ಡಿಕೆ ಶಿವಕುಮಾರ್ (DK Shivakumar) ಪರೋಕ್ಷವಾಗಿ ಅಸಮಾಧಾನ ಹೊರಹಾಕಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ.


ಸಿಎಂ ಸ್ಥಾನ ನೀಡಿದರೆ ಅಥವಾ ನೀಡದಿದ್ರೆ ತಮ್ಮ ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು ಎಂದು ಒಂದಿಷ್ಟು ಷರತ್ತುಗಳನ್ನು ಹೈಕಮಾಂಡ್ ಮುಂದೆ ಇರಿಸಿದ್ದಾರಂತೆ. ಹಲವು ಹಿರಿಯ ಕಾಂಗ್ರೆಸ್ ಶಾಸಕರು ಸಿಎಂ ಆಯ್ಕೆಯಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.


ಒಂದು ವೇಳೆ ಸಿದ್ದರಾಮಯ್ಯ ಸಿಎಂ ಆದರೂ ಅವರಿಗೆ ಬೆಂಬಲ ನೀಡಿದವರಿಗೆ ಶಾಕ್ ಕೊಡಲು ಈ ಷರತ್ತುಗಳ ಮೂಲಕ ಡಿಕೆ ಶಿವಕುಮಾರ್ ರಣತಂತ್ರ ರಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಹೈಕಮಾಂಡ್​ಗೆ ಡಿಕೆ ಶಿವಕುಮಾರ್ ಕಂಡೀಷನ್ಸ್!


1.ನನ್ನನ್ನು ಪೂರ್ಣಾವಧಿಗೆ ಅಂದ್ರೆ ಐದೂ ವರ್ಷ ಸಿಎಂ ಮಾಡಬೇಕು ಮತ್ತು ಯಾವುದೇ ಡಿಸಿಎಂ ಹುದ್ದೆಗಳ ರಚನೆ ಮಾಡಬಾರದು.


2.ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿದ್ರೆ, ಅದು ಲೋಕಸಭಾ ಚುನಾವಣೆಗೆ ಮಾತ್ರ ಇರಬೇಕು. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಪ್ರಬಲ ಖಾತೆಗಳಾದ ಗೃಹ, ಇಂಧನ ಮತ್ತು ಜಲಸಂಪನ್ಮೂಲ ನೀಡಬೇಕು.


3.ಸಿದ್ದರಾಮಯ್ಯ ಸಂಪುಟದಲ್ಲಿ ಚುನಾವಣೆ ವೇಳೆ ಸಹಕರಿಸಿದ ತಮ್ಮ ಆಪ್ತರಿಗೆ ಒಳ್ಳೆಯ ಖಾತೆಗಳನ್ನು ನೀಡಬೇಕು. ಹಿರಿಯ ಶಾಸಕರನ್ನು ಪಕ್ಷದ ಕೆಲಸಗಳಿಗೆ ಬಳಸಿಕೊಂಡು, ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು.


4.ರಾಮನಗರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಮೇಕೆದಾಟು ಯೋಜನೆ ಪೂರ್ಣಕ್ಕೆ ಸಹಕಾರ ನೀಡಬೇಕು.


5.ಸರ್ಕಾರ ತೆಗೆದುಕೊಳ್ಳುವ ಮಹತ್ವದ ನಿರ್ಣಯಗಳಲ್ಲಿ ತಮ್ಮನ್ನು ಪರಿಗಣನೆ ಮಾಡಬೇಕು. ಲೋಕಸಭೆ ಟಿಕೆಟ್​ ಹಂಚಿಕೆಗೂ ಪರಿಗಣನೆ ಮಾಡಬೇಕು.
ಇದನ್ನೂ ಓದಿ:  Karnataka CM Suspense: ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ! ಹೈಕಮಾಂಡ್ ವಿರುದ್ಧ ಡಿಕೆಶಿ ಅಸಮಾಧಾನ


ಒಟ್ಟು ಐದು ಸೂತ್ರಗಳನ್ನು ಹೈಕಮಾಂಡ್​ ಮುಂದೆ ಡಿಕೆ ಶಿವಕುಮಾರ್ ಇರಿಸಿದ್ದಾರಂತೆ. ಇಂದು ಸಂಜೆ ದೆಹಲಿಗೆ ತೆರಳಲಿರುವ ಡಿಕೆ ಶಿವಕುಮಾರ್ ಈ ಸಂಬಂಧ ಚರ್ಚೆ ನಡೆಸಲಿದ್ದಾರಂತೆ.

top videos
  First published: