• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Karnataka Assembly Results: ಯಡಿಯೂರಪ್ಪ ಕಣ್ಣೀರಲ್ಲಿ ಕೊಚ್ಚಿ ಹೋದ ಕಮಲ! 'ರಾಜಾಹುಲಿ'ಯನ್ನು ಕಡೆಗಣಿಸಿ ತಪ್ಪು ಮಾಡಿದ್ರಾ ದಿಲ್ಲಿ ದೊರೆಗಳು?

Karnataka Assembly Results: ಯಡಿಯೂರಪ್ಪ ಕಣ್ಣೀರಲ್ಲಿ ಕೊಚ್ಚಿ ಹೋದ ಕಮಲ! 'ರಾಜಾಹುಲಿ'ಯನ್ನು ಕಡೆಗಣಿಸಿ ತಪ್ಪು ಮಾಡಿದ್ರಾ ದಿಲ್ಲಿ ದೊರೆಗಳು?

ಬಿ.ಎಸ್​​.ಯಡಿಯೂರಪ್ಪ

ಬಿ.ಎಸ್​​.ಯಡಿಯೂರಪ್ಪ

ಬಿಜೆಪಿಗೆ ಈ ಪರಿಸ್ಥಿತಿ ಬರೋದಕ್ಕೆ ದಿಲ್ಲಿ ದೊರೆಗಳೇ ಕಾರಣ ಅಂತ ಹೇಳಲಾಗುತ್ತಿದೆ. ಅರೇ ಅವರೇನು ಮಾಡೋಕ್​ ಆಗುತ್ತೆ ಅಂತ ನೀವು ಕೇಳಬಹುದು. ಈ ಹಿಂದೆ ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಈಗ ಎಫೆಕ್ಟ್​ (Effect) ಆಗಿದ್ಯಾ?

 • News18 Kannada
 • 5-MIN READ
 • Last Updated :
 • Karnataka, India
 • Share this:

ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಕರುನಾಡಿನ ಚುಕ್ಕಾಣಿಯನ್ನು ಕಾಂಗ್ರೆಸ್​ (Congress) ಪಕ್ಷ ಹಿಡಿದಿದೆ. ಯಾರ ಪಕ್ಷದ ಜೊತೆಯೂ ಮೈತ್ರಿಗೆ ಅವಕಾಶ ನೀಡದೇ ಬಹುಮತ ಇರಲಿ ಒಟ್ಟು 136 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪ್ರಾಬಲ್ಯ ಮೆರೆದಿದೆ. ಬಿಜೆಪಿ (BJP) ಕೇವಲ 65 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ. ಇದಕ್ಕೇನು ಕಾರಣ ಅಂತ ಜನ ಚರ್ಚೆ ಮಾಡುತ್ತಿದ್ದಾರೆ. ಆದರೆ ಬಿಜೆಪಿಗೆ ಈ ಪರಿಸ್ಥಿತಿ ಬರೋದಕ್ಕೆ ದಿಲ್ಲಿ ದೊರೆಗಳೇ ಕಾರಣ ಅಂತ ಹೇಳಲಾಗುತ್ತಿದೆ. ಅರೇ ಅವರೇನು ಮಾಡೋಕ್​ ಆಗುತ್ತೆ ಅಂತ ನೀವು ಕೇಳಬಹುದು. ಈ ಹಿಂದೆ ಅವರು ತೆಗೆದುಕೊಂಡ ಆ ಒಂದು ನಿರ್ಧಾರ ಈಗ ಎಫೆಕ್ಟ್​ (Effect) ಆಗಿದ್ಯಾ? ಅನ್ನುವ ಚರ್ಚೆ ಹುಟುಹಾಕಿದೆ. ಹೌದು, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ (Former CM BS Yeddyurappa) ಕಡೆಗಣಿಸಿದ್ದೇ ಮುಳುವಾಯ್ತು ಎನ್ನಲಾಗ್ತಿದೆ.


ರಾಜಾಹುಲಿ ಕಡೆಗಣಿಸಿದ್ದೇ ತಪ್ಪಾಯ್ತಾ?


ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ ಎಂದೇ ಬಿರುದು ಪಡೆದುಕೊಂಡವರು. ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ಧೀಮಂತ ನಾಯಕರು ಎಂದರೆ ತಪ್ಪಾಗಲ್ಲ. ಆದರೆ ಅವರನ್ನು ಬಿಜೆಪಿ ಈ ಮಟ್ಟಕ್ಕೆ ಕಡೆಗಣಿಸಿದ್ದು ನಿಜಕ್ಕೂ ಅವರ ಅಭಿಮಾನಿಗಳಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಚುನಾವಣೆ ಪೂರ್ವ ನಡೆದ ಸಭೆಗಳಿಗೆ ಬಿಎಸ್​ವೈಗೆ ಆಹ್ವಾನ ಇರಲಿಲ್ಲ. ಪ್ರಚಾರದ ಸಮಯದಲ್ಲಷ್ಟೇ ರಾಜಾಹುಲಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿದ್ದರು


ದಿಲ್ಲಿ ದೊರೆಗಳ ಎಡವಟ್ಟು?


ಬಿಎಸ್​ವೈ ಹೇಳಿದಂತೆ ನಡೆದುಕೊಳ್ಳುವುದು ಬೇಡ, ಅವರ ಸಲಹೆಯನ್ನು ಈ ಬಿಜೆಪಿ ಪಕ್ಷದ ನಾಯಕರು ಪಾಲಿಸಿದಿದ್ರೆ ಇವತ್ತು ಇಂಥ ಪರಿಸ್ಥಿತಿ ಬರ್ತಿರಲಿಲ್ಲ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕೇಂದ್ರ ನಾಯಕರು ಇಲ್ಲಿಗೆ ಬಂದಾಗ ಬಿಎಸ್​​ವೈ ಸಲಹೆಗಳನ್ನು ಪಾಲಿಸಲಿಲ್ವಂತೆ. ಅವರನ್ನು ಯಾವುದೇ ಸಭೆಗೂ ಕರೆಯುತ್ತಿರಲಿಲ್ವಂತೆ. ಬೇಕಾಬಿಟ್ಟಿ ಆಹ್ವಾನ ನೀಡಿದ್ದೇ ಬಿಜೆಪಿ ಪತನಕ್ಕೆ ಕಾರಣವಂತೆ.


ಇದನ್ನೂ ಓದಿ: ಕಾಂಗ್ರೆಸ್ ಗೆಲುವಿಗೆ, ಬಿಜೆಪಿ ಸೋಲಿಗೆ ಕಾರಣಗಳೇನು?


ಎಲ್ಲಿಯೂ ಏನೂ ಹೇಳದ ಬಿಎಸ್​ವೈ!


ಇಷ್ಟೆಲ್ಲಾ ನಡೆಯುತ್ತಿದ್ದರು ಬಿಎಸ್​ವೈ ಮಾತ್ರ ಎಲ್ಲಿಯೂ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಇಂದಿಗೂ ಎಲ್ಲಿಯೂ ಹೇಳಿಕೊಂಡಿಲ್ಲ. ಅಂದು ಸಿಎಂ ಸ್ಥಾನಕ್ಕೆ ರಾಜಿನಾಮೆ ಕೊಡುವಾಗ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಹೈಕಮಾಂಡ್  ನಿರ್ಧಾರಕ್ಕೆ ಯಾವಗಲೂ ಬದ್ಧನಾಗಿರುತ್ತೇನೆ ಎಂದಿದ್ದರು. ಆಗಲೇ ಹಲವರು ಬಿಎಸ್​ವೈ ಕಣ್ಣೀರಿನಲ್ಲಿ ಕಮಲ ಕೊಚ್ಚಿ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದರು. ಈಗ ಅದು ಸತ್ಯವಾಗಿದೆ ಎಂದರೆ ತಪ್ಪಾಗಲ್ಲ.
ಬಿಜೆಪಿ ಸೋಲಿಗೆ ಕಾರಣಗಳು


1.ಅತಿಯಾದ ಆತ್ಮವಿಶ್ವಾಸ


2.ಹೈಕಮಾಂಡ್ ಮೇಲೆ ಅವಲಂಬನೆ


3.ಕೈ ಹಿಡಿಯದ ವರಿಷ್ಠರ ತಂತ್ರ


4.ಟಿಕೆಟ್ ಹಂಚಿಕೆಯಲ್ಲಿ ಗೊಂದಲ


5.ದೊಡ್ಡ ಜಿಲ್ಲೆಗಳಲ್ಲಿ ಭಿನ್ನಮತ


6.ಬಿಎಸ್‌ವೈ ಮನ್ನಣೆಯಲ್ಲಿ ವಿಳಂಬ


8.ಶೆಟ್ಟರ್, ಸವದಿ ಸೈಡ್ ಎಫೆಕ್ಟ್


9.ಸ್ಥಳೀಯ ವಿಚಾರಗಳ ಅವಗಣನೆ


10.ಲಿಂಗಾಯತ V/S ಬ್ರಾಹ್ಮಣ ಪ್ರಚಾರ

top videos
  First published: