ಧರ್ಮಸ್ಥಳದ ನಂದಾದೀಪ ಆರಿಲ್ಲ, ವದಂತಿಗಳಿಗೆ ಕಿವಿಗೊಡಬೇಡಿ; ಡಾ. ವೀರೇಂದ್ರ ಹೆಗ್ಗಡೆ ಸ್ಪಷ್ಟನೆ

ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ. ಈ ವದಂತಿಗೆ ಯಾರೂ ಕಿವಿಗೊಡಬೇಡಿ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

ಧರ್ಮಸ್ಥಳದ ಪ್ರಕಟಣೆ

ಧರ್ಮಸ್ಥಳದ ಪ್ರಕಟಣೆ

  • Share this:
ಬೆಂಗಳೂರು (ಮಾ. 27): ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕನ್ನಡದ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಂದಾದೀಪ ಆರಿಹೋಗಿದೆ. ಇದು ಅಪಶಕುನವಾಗಿದ್ದು, ದೇಶಕ್ಕೆ ಕಂಟಕ ಎದುರಾಗಲಿದೆ ಎಂಬ ಸುದ್ದಿ ನಿನ್ನೆಯಿಂದ ಎಲ್ಲೆಡೆ ಹರಿದಾಡುತ್ತಿತ್ತು. ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಇಂದು ಸ್ಪಷ್ಟನೆ ನೀಡಿದ್ದಾರೆ.

ಧರ್ಮಸ್ಥಳದ ಮಂಜುನಾಥಸ್ವಾಮಿಯ ನಂದಾದೀಪ ಮತ್ತು ತಿರುಪತಿಯಲ್ಲಿ ಹಚ್ಚಿರುವ ದೀಪ ಆರಿಹೋಗಿದೆ. ಇದರಿಂದ ದೊಡ್ಡ ಕಂಟಕ ಉಂಟಾಗಲಿದೆ. ಹೀಗಾಗಿ, ಪ್ರತಿಯೊಬ್ಬರೂ ರಾತ್ರಿ ತಮ್ಮ ಮನೆಯ ಎದುರು ದೀಪ ಹಚ್ಚಿ, ಅದು ಆರಿಹೋಗದಂತೆ ನೋಡಿಕೊಳ್ಳಬೇಕು. ಯಾರೂ ರಾತ್ರಿ ನಿದ್ರೆ ಮಾಡಬಾರದು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಕೊರೋನಾ ಸೋಂಕು ಹೆಚ್ಚಾಗುತ್ತಿರುವುದರಿಂದ ಇದು ಆಪತ್ತಿನ ಸೂಚನೆ ಎಂದು ಅನೇಕ ಜನರು ನಿನ್ನೆ ರಾತ್ರಿ ನಿದ್ರೆ ಮಾಡದೆ, ತಮ್ಮ ಮನೆಯಲ್ಲಿ ದೀಪ ಹಚ್ಚಿ, ಬೆಳಗಾಗುವುದನ್ನೇ ಕಾದಿದ್ದ ಘಟನೆಗಳು ನಡೆದಿದ್ದವು. ದಾವಣಗೆರೆ, ಚಿಕ್ಕಬಳ್ಳಾಪುರ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಭಕ್ತರು ರಾತ್ರಿ ದೀಪ ಹಚ್ಚಿಸಿದ್ದರು.ಇದನ್ನೂ ಓದಿ: ತುಮಕೂರಲ್ಲಿ ಕೊರೋನಾಗೆ ಮೊದಲ ಬಲಿ; ರಾಜ್ಯದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಆದರೆ, ವಾಟ್ಸಾಪ್, ಫೇಸ್​ಬುಕ್​ನಲ್ಲಿ ಹರಿದಾಡಿರುವ ಈ ಕುರಿತಾದ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ವತಃ ಧರ್ಮಸ್ಥಳ ಆಡಳಿತ ಮಂಡಳಿಯೇ ಸ್ಪಷ್ಟನೆ ನೀಡಿದೆ. ಅಲ್ಲದೆ, ಈ ರೀತಿ ಜನರ ಧಾರ್ಮಿಕ ನಂಬಿಕೆಗಳೊಂದಿಗೆ ಆಟವಾಡುವುದು ಸರಿಯಲ್ಲ ಎಂದು ತಿಳಿಸಲಾಗಿದೆ.ಧರ್ಮಸ್ಥಳದ ಮಂಜುನಾಥಸ್ವಾಮಿ ದೇವಸ್ಥಾನದ ಬಾಗಿಲನ್ನು ರಾತ್ರಿ 8 ಗಂಟೆಗೆ ಹಾಕಲಾಗುತ್ತದೆ. ಬೆಳಗ್ಗೆ 5 ಗಂಟೆಗೆ ಬಾಗಿಲು ತೆರೆಯಲಾಗುತ್ತದೆ. ಮಧ್ಯದಲ್ಲಿ ದೇವಾಲಯದೊಳಗೆ ಯಾರೂ ಪ್ರವೇಶ ಮಾಡುವುದಿಲ್ಲ. ನಂತರ ಪ್ರವೇಶ ಮಾಡಿದವರು ಯಾರು? ನಂದಾದೀಪ ಆರಿಹೋಗಿದನ್ನು ನೋಡಿದ್ದು ಯಾರು? ಇದು ಭಕ್ತರ ಭಾವನೆ, ನಂಬಿಕೆ ಜೊತೆ ಕಿಡಿಗೇಡಿಗಳು ಮಾಡಿದ ಸುಳ್ಳು ವದಂತಿಯಾಗಿದೆ. ಈ ವದಂತಿಗೆ ಯಾರೂ ಕಿವಿಗೊಡಬೇಡಿ ಎಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಲಾಠಿ ಬಳಸದಂತೆ ಪೊಲೀಸ್ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್
First published: