ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಧಾರವಾಡದ ವಿದ್ಯಾರ್ಥಿ ಆಯ್ಕೆ

ಧಾರವಾಡದ ನರೇಂದ್ರ ಗ್ರಾಮದ ನವೀನ ಹಿರೇಮಠ ಎಂಬ ವಿದ್ಯಾರ್ಥಿಯೇ  ಪ್ರಧಾನಿಯೊಂದಿಗೆ ಸಂವಾದ ಮಾಡಲು ಆಯ್ಕೆಯಾಗಿದ್ದು, ಈತ ಧಾರವಾಡ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 10 ನೇ ವಿದ್ಯಾರ್ಥಿಯಾಗಿದ್ದಾನೆ. 

G Hareeshkumar | news18
Updated:January 24, 2019, 5:28 PM IST
ಪ್ರಧಾನಿಯೊಂದಿಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಧಾರವಾಡದ ವಿದ್ಯಾರ್ಥಿ ಆಯ್ಕೆ
ಪ್ರಾಯೋಗಿಕ ಚಿತ್ರ
G Hareeshkumar | news18
Updated: January 24, 2019, 5:28 PM IST
 -ಮಂಜುನಾಥ್ ಯಡಳ್ಳಿ 

ಧಾರವಾಡ ( ಜ.24) :  ಮುಂಬರುವ ಪರೀಕ್ಷೆಗಳಿಗೆ ಶಾಲಾ ವಿದ್ಯಾರ್ಥಿಗಳು ಹೇಗೆ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲು ಮತ್ತು ಅವರಿಗೆ ಪ್ರೇರಣೆ ನೀಡಲು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳೊಂದಿಗೆ ನಡೆಸಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಧಾರವಾಡದ ವಿದ್ಯಾರ್ಥಿ ಆಯ್ಕೆಯಾಗಿದ್ದಾನೆ. ಧಾರವಾಡದ ನರೇಂದ್ರ ಗ್ರಾಮದ ನವೀನ ಹಿರೇಮಠ ಎಂಬ ವಿದ್ಯಾರ್ಥಿಯೇ  ಪ್ರಧಾನಿಯೊಂದಿಗೆ ಸಂವಾದ ಮಾಡಲು ಆಯ್ಕೆಯಾಗಿದ್ದು, ಈತ ಧಾರವಾಡ ನಗರದ ಸರ್ಕಾರಿ ಆದರ್ಶ ವಿದ್ಯಾಲಯದ 10 ನೇ ವಿದ್ಯಾರ್ಥಿಯಾಗಿದ್ದಾನೆ. 

ಇದನ್ನೂ ಓದಿ :  ಚಂದಾ​ ಕೊಚ್ಚರ್​ ಗಂಡನ ಅಕ್ರಮ ಸಾಲ ಪ್ರಕರಣ; ವಿಡಿಯೋಕಾನ್​ ಮುಖ್ಯಕಚೇರಿ ಮೇಲೆ ಸಿಬಿಐ ದಾಳಿ

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚರ್ಚೆಗೆ ಆಹ್ವಾನ ಬಂದಿದ್ದನ್ನು ತಿಳಿದು ಆನ್​​ಲೈನ್ ಮೂಲಕ ಅರ್ಜಿ ಹಾಕಿದ್ದನು. ಬಳಿಕ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆಗೆ ಕ್ಯಾಪ್ಷನ್ ಹಾಕಿದ್ದನ್ನು. ಅಲ್ಲದೇ ನರೇಂದ್ರ ಮೋದಿ ರಚನೆಯ ಎಕ್ಸಾಮ್ ವಾರಿಯರ್ ಬುಕ್ ಬಗ್ಗೆ ಅಭಿಪ್ರಾಯ ಕೇಳಲಾಗಿತ್ತು. ಆ ಪುಸ್ತಕ ಓದಿದ್ದ ನವೀನ, ತನ್ನ ಅಭಿಪ್ರಾಯ ವಿಡಿಯೋ ಮಾಡಿ ವೆಬ್ ಸೈಟ್ ಗೆ ಅಪಲೋಡ್ ಮಾಡಿದ್ದನ್ನು. ಅದನ್ನು ನೋಡಿ ಈ ಚರ್ಚೆಗೆ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. 

ಈ ರೀತಿ ಆಯ್ಕೆಯಾದ ರಾಷ್ಟ್ರ ವಿವಿಧ ರಾಜ್ಯದ ಮಕ್ಕಳೊಂದಿಗೆ ನರೇಂದ್ರ ಮೋದಿ ಜನವರಿ 29 ರಂದು ಚರ್ಚೆ ಹಾಗೂ ಸಂವಾದ ನಡೆಸಲಿದ್ದಾರೆ. ಪ್ರಧಾನಿಯೊಂದಿಗೆ ಸಂವಾದಕ್ಕೆ ಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿದ್ದಕ್ಕೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಖುಷಿಯಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.

Loading...

First published:January 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ