ಧಾರವಾಡದ ಜೈಲಿನಲ್ಲಿ ಹೈಡ್ರಾಮ; ರುಚಿಯಾದ ಊಟ ಕೊಡದಿದ್ದಕ್ಕೆ ತೆಂಗಿನ ಮರವೇರಿ ಕುಳಿತ ಕೈದಿ

ಜೈಲಿನಲ್ಲಿ ಒಳ್ಳೆಯ ಊಟ ನೀಡಿ ಎಂದಿದ್ದಕ್ಕೆ ತನಗೆ ಥಳಿಸಿರುವುದಕ್ಕೆ ಕೋಪ ಮಾಡಿಕೊಂಡು ತೆಂಗಿನ ಮರ ಹತ್ತಿರುವ ಕೈದಿ ಚೇತನ್​ನನ್ನು ಕೆಳಗೆ ಇಳಿಸಲು ಸಿಬ್ಬಂದಿ ಪರದಾಡುತ್ತಿದ್ದಾರೆ.

news18-kannada
Updated:January 15, 2020, 3:12 PM IST
ಧಾರವಾಡದ ಜೈಲಿನಲ್ಲಿ ಹೈಡ್ರಾಮ; ರುಚಿಯಾದ ಊಟ ಕೊಡದಿದ್ದಕ್ಕೆ ತೆಂಗಿನ ಮರವೇರಿ ಕುಳಿತ ಕೈದಿ
ಸಾಂದರ್ಭಿಕ ಚಿತ್ರ
  • Share this:
ಧಾರವಾಡ (ಜ. 15): ಜೈಲಿನಲ್ಲಿ ತನಗೆ ಒಳ್ಳೆಯ ಊಟ ಸಿಗುತ್ತಿಲ್ಲ ಎಂಬ ಅಸಮಾಧಾನದಿಂದ ಗಲಾಟೆ ಮಾಡಿದ ಕೈದಿಯೊಬ್ಬ ಮರವೇರಿ ಕುಳಿತಿದ್ದಾನೆ. ಈ ಮೂಲಕ ಜೈಲಿನ ಅಧಿಕಾರಗಳ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾನೆ. ಧಾರವಾಡದ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು, ಆ ಕೈದಿಯನ್ನು ಮರದಿಂದ ಇಳಿಸಲು ಜೈಲಧಿಕಾರಿಗಳು ಪರದಾಡುತ್ತಿದ್ದಾರೆ.

ತಮಗೆ ಜೈಲಿನಲ್ಲಿ ಒಳ್ಳೆಯ, ರುಚಿಯಾದ ಊಟ ನೀಡಬೇಕೆಂದು ಆಗ್ರಹಿಸಿದ ಧಾರವಾಡ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿ ಹಠ ಹಿಡಿದಿದ್ದಾನೆ. ತನ್ನ ಹಠ ಬಿಡದೆ ಗಲಾಟೆ ಮಾಡಿ, ಧರಣಿ ನಡೆಸಿದ್ದರಿಂದ ಸಿಬ್ಬಂದಿ ಆತನಿಗೆ ಥಳಿಸಿ ಬುದ್ಧಿ ಕಲಿಸಲು ಪ್ರಯತ್ನಿಸಿದ್ದರು. ಇದರಿಂದ ಇನ್ನಷ್ಟು ಕೋಪಗೊಂಡ ಕೈದಿ ಕಾರಾಗೃಹದ ಆವರಣದಲ್ಲಿದ್ದ ತೆಂಗಿನ ಮರ ಹತ್ತಿ ಕುಳಿತಿದ್ದಾನೆ.

ಇದನ್ನೂ ಓದಿ: ವಿಮಾನದಲ್ಲಿದ್ದ ಯುವತಿಯಿಂದ ಬಾಂಬ್ ಸ್ಫೋಟದ ಬೆದರಿಕೆ; ಏರ್​ಪೋರ್ಟ್​ಗೆ ಹಿಂತಿರುಗಿದ ಪೈಲಟ್​ಗೆ ಕಾದಿತ್ತು ಶಾಕ್!

ಒಳ್ಳೆಯ ಊಟ ನೀಡಿ ಎಂದಿದ್ದಕ್ಕೆ ತನಗೆ ಥಳಿಸಿರುವುದಕ್ಕೆ ಕೋಪ ಮಾಡಿಕೊಂಡು ತೆಂಗಿನ ಮರ ಹತ್ತಿರುವ ಕೈದಿ ಚೇತನ್​ನನ್ನು ಕೆಳಗೆ ಇಳಿಸಲು ಸಿಬ್ಬಂದಿ ಪರದಾಡುತ್ತಿದ್ದಾರೆ. 6 ತಿಂಗಳ ಹಿಂದೆ ಬಳ್ಳಾರಿಯಿಂದ ಶಿಫ್ಟ್ ಆಗಿದ್ದ ಆರೋಪಿ ಚೇತನ್ ತೆಂಗಿನ ಮರ ಹತ್ತಿ ಕುಳಿತು ತನ್ನ ಬೇಡಿಕೆ ಈಡೇರಿಸಲು ಹಠ ಹಿಡಿದಿದ್ದಾನೆ. ಹಿರಿಯ ಅಧಿಕಾರಿಗಳು ಬಂದರಷ್ಟೇ ಇಳಿಯೋದಾಗಿ ಪಟ್ಟು ಹಿಡಿದಿರುವ ಚೇತನ್ ಮನವೊಲಿಕೆಗೆ ಜೈಲಿನ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.

(ವರದಿ: ಮಂಜು ಯಡಳ್ಳಿ)
First published:January 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ