ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ತಂತ್ರಜ್ಞಾನದಲ್ಲಿ ಪಾಸ್: ಧಾರವಾಡದ ನಡಕಟ್ಟಿನ್​​ಗೆ Padma Shri ಗೌರವ

ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದಿದ್ದರೂ ಅವಕಾಶ ಸಿಗಲಿಲ್ಲ. ಆದರೆ ರೈತರಿಗೆ ಏನಾದ್ರೂ ಮಾಡಬೇಕೆಂಬ ತುಡಿತ ಈ ಸಂಶೋಧನೆಗೆ ನಾಂದಿ ಹಾಡಿತು.

ಅಬ್ದುಲ್ ಖದರ್​ ನಡಕಟ್ಟಿನ್

ಅಬ್ದುಲ್ ಖದರ್​ ನಡಕಟ್ಟಿನ್

  • Share this:
ಹುಬ್ಬಳ್ಳಿ (ಜ. 26):  ಈ ಬಾರಿ ಪದ್ಮ ಪ್ರಶಸ್ತಿಗೆ  ಧಾರವಾಡ ಜಿಲ್ಲೆ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಅಬ್ದುಲ್ ಖದರ್​ ನಡಕಟ್ಟಿನ್ (Abdul Khadar Nadakattin) ಭಾಜನರಾಗಿದ್ದಾರೆ.  ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸೋಕೆ ಮಾಡಿದ ಪ್ರಯತ್ನದ ಫಲವಾಗಿ ಇಂದು ಆತನಿಗೆ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ (Padma Award) ಒಲಿದು ಬಂದಿದೆ. ನಡಕಟ್ಟಿನ್ ಕೂರಿಗೆ ಅಂದ್ರೆ ಕರ್ನಾಟಕದ ಮೂಲೆ ಮೂಲೆಯ ರೈತರಿಗೂ ಚಿರಪರಿಚಿತ. ಅಷ್ಟರ ಮಟ್ಟಿಗೆ ಈ ಬಿತ್ತನೆ ಕೂರಿಗೆ ಖ್ಯಾತಿ ಪಡೆದಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ,  ರೂಪಿಸಿದ ಈ ಕೂರಿಗೆಗೆ ದೇಶದಲ್ಲಿ ಬೇಡಿಕೆ ಹೊಂದಿದೆ. ಪ್ರತಿ ವರ್ಷ ಎಂಟು ಸಾವಿರಕ್ಕೂ ಅಧಿಕ ಕೂರಿಗೆ ಸಿದ್ಧಪಡಿಸಿದರೂ, ರೈತರ ಬೇಡಿಕೆಗೆ ಅನ್ವಯ ಪೂರೈಕೆ ಮಾಡಲಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಈ ಕೂರಿಗೆಗೆ ಡಿಮ್ಯಾಂಡ್ ಇದೆ. 

ನಡಕಟ್ಟಿನ್ ಕೂರಿಗೆಗೆ ಬೇಡಿಕೆ

ಕೃಷಿ ತಂತ್ರಜ್ಞಾನ ಅಳವಡಿಕೆ ಕೇವಲ ಕೂರಿಗೆಗೆ ಸೀಮಿತವಾಗಿಲ್ಲ. ಕಲ್ಟಿವೇಟರ್ ಸೇರಿದಂತೆ ಕೃಷಿಗೆ ಪೂರಕವಾದ ಹಲವಾರು ಯಂತ್ರಗಳನ್ನು ರೂಪಿಸಿ ಸೈ ಅನಿಕೊಂಡಿದ್ದಾರೆ.
ವಿಶ್ವದ ಯಾವುದೇ ಮೂಲೆಯಲ್ಲಿ ಸಿಗೋ ಬೀಜಗಳನ್ನು ನಡಕಟ್ಟಿನ್ ಅವರ ಕೂರಿಗೆಯಿಂದ ಬಿತ್ತನೆ ಮಾಡಬಹುದು. ಸಾಸಿವೆ ಕಾಳಿನಿಂದ ಹಿಡಿದು ದೊಡ್ಡ ಗಾತ್ರದ ಕಡಲೆ ಇತ್ಯಾದಿಗಳವರೆಗೂ ಈ ಗೂರಿಗೆ ಮೂಲಕ ಬಿತ್ತನೆ ಮಾಡಬಹುದಾಗಿದೆ. ಅದೇ ರೂಪದಲ್ಲಿ ತಂತ್ರಜ್ಞಾನ ಅಳವಡಿಸಿರೋದರಿಂದಾಗಿ ಭಾರತ ದೇಶದ ವಿವಿಧೆಡೆ ನಡಕಟ್ಟಿನ್ ಕೂರಿಗೆಗೆ ಬೇಡಿಕೆ ಇದೆ. ತಮ್ಮದೇ ಆದ ವಿಶ್ವಶಾಂತಿ ಸಂಶೋಧನಾ ಕೇಂದ್ರ ಆರಂಭಿಸಿ, ಕೃಷಿ ಯಂತ್ರೋಪಕರಣಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ ಅವರುದಾರಿ ಸುಲಭದಲ್ಲ

ಪದ್ಮ ಪ್ರಶಸ್ತಿ ಸಿಕ್ಕಿರುವ ಕುರಿತು ಮಾತನಾಡಿರುವ ಅವರು, ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದಿದ್ದರೂ ಅವಕಾಶ ಸಿಗಲಿಲ್ಲ. ಆದರೆ ರೈತರಿಗೆ ಏನಾದ್ರೂ ಮಾಡಬೇಕೆಂಬ ತುಡಿತ ಈ ಸಂಶೋಧನೆಗೆ ನಾಂದಿ ಹಾಡಿತು. ವಿಶ್ವಶಾಂತಿ ಕೃಷಿ ಸಂಶೋಧನಾ ಕೇಂದ್ರ ಆರಂಭಿಸಿ ಕೃಷಿ ಉಪಕರಣ ರೂಪಿಸ್ತಿದೇನೆ. ಈ ಸಂಶೋಧನೆ ಒಂದು ಹಂತದಲ್ಲಿ ನನ್ನನ್ನು ಆತ್ಮಹತ್ಯೆಗೂ ಕರೆದೊಯ್ದಿತ್ತು. ಧಾರವಾಡ ಕೃಷಿ ವಿವಿ  ಕುಲಪತಿ ಪ್ರೊ.ಎಸ್.ಎ.ಪಾಟೀಲರು  ಧೈರ್ಯ ತುಂಬಿ ನನ್ನನ್ನು ಇದೇ ದಾರಿಯಲ್ಲಿ ಮುನ್ನಡೆಯುವಂತೆ ಮಾಡಿದ್ರು. ನಾನು ರೂಪಿಸಿರುವ ಕೂರಿಗೆ ಯಿಂದ ಲಕ್ಷಾಂತರ ರೈತರು ಉಪಯೋಗ ಆಗುತ್ತಿದೆ ಕರ್ನಾಟಕವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಯೂ ಕೂರಿಗೆ ಬಳಕೆಯಾಗ್ತಿದೆ.

ಇದನ್ನು ಓದಿ: ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ Sandhya Mukherjee; ಇಳಿವಯಸ್ಸಿನಲ್ಲಿ ಮಾಡುವ ಅವಮಾನ ಇದು ಎಂದ ಗಾಯಕಿ

ಸದ್ಯ  ಬಿತ್ತನೆ ಕೂರಿಗೆಯ ಪೇಟೆಂಟ್ ತೆಗೆದುಕೊಳ್ಳಲು ಪ್ರಯತ್ನದಲ್ಲಿದ್ದೇನೆ. ಇಷ್ಟರಲ್ಲಿಯೇ ಅದು ಸಿಗೋ ಸಾಧ್ಯತೆ ಇದೆ. ಇದೇ ಹಂತದಲ್ಲಿಯೇ ನನಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ನನ್ನ ಸಂಶೋಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಮೋದಿ ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹರ್ಷ ವ್ಯಕ್ತಪಡಿಸಿದರು.ಇದನ್ನು ಓದಿ: ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

ನಡಕಟ್ಟಿನ ಅವರಿಗೆ ಪ್ರಶಸ್ತಿ ಬಂದುದರ ಬಗ್ಗೆ ಕುಟುಂಬದ ಸದಸ್ಯರಿಂದಲೂ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ನಮಗೆ ಬಂದಿದ್ದಲ್ಲ ನಮ್ಮ ಇಡೀ ರೈತ ಸಮುದಾಯಕ್ಕೆ ಬಂದದ್ದು. ಅದನ್ನು ರೈತ ಸಮುದಾಯಕ್ಕೆ ಸೇವೆ ಎಂದು ನಡಕಟ್ಟಿನ್ ಹಿರಿ ಪುತ್ರ ಶರೀಫ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರ ನಿನ್ನೆ ನಡಕಟ್ಟಿನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು. ಈ ಹಿಂದೆ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳಿಗೆ ನಡಕಟ್ಟಿನ್ ಭಾಜರನಾಗಿದ್ದಾರೆ. ಇದೀಗ ಪದ್ಮಶ್ರೀ ಪ್ರಶಸ್ತಿ ಬಂದಿರೋದಕ್ಕೆ ಧಾರವಾಡ ಜಿಲ್ಲೆಯ ಜನತೆಯಿಂದಲೂ ಸಂತಸ ವ್ಯಕ್ತವಾಗಿದೆ.

ನಡಕಟ್ಟಿನ್ ಗೆ ಸನ್ಮಾನ
ಅಬ್ದುಲ್ ನಡಕಟ್ಟಿನ್ ಅವರಿಗೆ ಪದ್ಮಶ್ರೀ ಘೋಷಣೆಯಾಗಿದೆ ಎಂಬ ಸುದ್ದಿ ತಿಳಿದ ಕೂಡಲೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ರೈತರು ಆಗಮಿಸಿ, ಸನ್ಮಾನಿಸಿ ಗೌರವಿಸಿದ್ದಾರೆ. ಮಾಜಿ ಶಾಸಕ ಎನ್.ಎಸ್.ಕೋನರೆಡ್ಡಿ, ಅಣ್ಣೀಗೇರಿ ಪುರಸಭೆಯ ಸದಸ್ಯರು, ಮತ್ತಿತರ ನಾಗರೀಕರು ಸನ್ಮಾನಿಸಿ, ಶುಭ ಕೋರಿದ್ದಾರೆ. ನಡಕಟ್ಟಿನ್ ಸೇವೆಯನ್ನು ಸ್ಮರಿಸಿಕೊಂಡಿದ್ದಾರೆ.  ಕೃಷಿ ಸಂಶೋಧನೆಗೆ ಅತ್ಯುನ್ನತ ಗೌರವ ಸಿಕ್ಕಿದೆ ಎಂದು ಅಭಿಮಾನ ಮಾತುಗಳನ್ನಾಡಿದ್ದಾರೆ. ಪ್ರಶಸ್ತಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅಣ್ಣಿಗೇರಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
Published by:Seema R
First published: