ಹುಬ್ಬಳ್ಳಿ: ಮಕ್ಕಳು ಹೊರ ದೇಶಕ್ಕೆ ವಿದ್ಯಾಭ್ಯಾಸಕ್ಕೆ (Education) ಹೋದರೆ ಪಾಲಕರಿಗೊಂದು ಪ್ರತಿಷ್ಠೆ. ಆದರೆ ವಿದೇಶಕ್ಕೆ (Abroad) ವಿದ್ಯಾಭ್ಯಾಸಕ್ಕೆ ಹೋಗಿರುವ ಮಕ್ಕಳ ಬಗ್ಗೆಯೇ ಈಗ ಪಾಲಕರಲ್ಲಿ ಆತಂಕ ಎದುರಾಗಿದೆ. ಮಕ್ಕಳ ಸ್ಥಿತಿ ಕಂಡು ಪಾಲಕರು ಕಣ್ಣೀರು ಹಾಕುವ ಹೃದಯ ವಿದ್ರಾವಕ ಘಟನೆಯೊಂದು ಧಾರವಾಡ (Dharwad) ಜಿಲ್ಲೆಯಲ್ಲಿ ನಡೆದಿದೆ. ಅದಕ್ಕೆ ಕಾರಣ ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವೆ ನಡೆಯುತ್ತಿರುವ ಯುದ್ಧ (War). ಹೌದು, ಉಕ್ರೇನ್ನಲ್ಲಿ ಯುದ್ಧ ಶುರುವಾಗುತ್ತಿದ್ದಂತೆ ಭಾರತೀಯರಲ್ಲೂ (Indians) ಆತಂಕ ಶುರುವಾಗಿದೆ. ಕಾರಣ ಭಾರತದ ಅನೇಕ ವಿದ್ಯಾರ್ಥಿಗಳು (Students) ಉಕ್ರೇನ್ನಲ್ಲಿ ಓದುತ್ತಿದ್ದಾರೆ. ಬಹುತೇಕರು ತಾಯ್ನಾಡಿಗೆ ವಾಪಸ್ ಬರಲಾರದೇ ಉಕ್ರೇನ್ನಲ್ಲೇ ಸಿಲುಕಿಕೊಂಡಿದ್ದಾರೆ. ಇಲ್ಲಿ ಭಾರತದಲ್ಲಿರುವ ಅವರ ತಂದೆ, ತಾಯಿಯರಲ್ಲಿ ಕ್ಷಣ ಕ್ಷಣಕ್ಕೂ ಆತಂಕ ಮನೆ ಮಾಡುತ್ತಿದೆ.
ಉಕ್ರೇನ್ನಲ್ಲಿ ಮಗಳು, ಧಾರವಾಡದಲ್ಲಿ ತಾಯಿ ಆತಂಕ
ಉಕ್ರೇನ್ನ್ಲಲಿ ಸಿಲುಕಿಕೊಂಡಿರುವ ಮಗಳಿಗಾಗಿ ಧಾರವಾಡ ಜಿಲ್ಲೆಯಲ್ಲಿರುವ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಈ ತಾಯಿಯ ಹೆಸರು ಸುನಂದಾ. ಮಂಟೂರಿನಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಈ ತಾಯಿ, ತನ್ನ ಮಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳಿಸಿದ್ದಾಳೆ. ಆದರೆ ವಿದೇಶಕ್ಕೆ ಕಳಿಸಿ ಈಗ ಆತಂಕಗೊಂಡು ಕಣ್ಣೀರು ಹಾಕುತ್ತಿದ್ದಾಳೆ.
ಉಕ್ರೇನ್ ನಲ್ಲಿ ಯುದ್ಧ ಘೋಷಣೆಯಾದ ಬೆನ್ನಲ್ಲೇ ಧಾರವಾಡ ಜಿಲ್ಲೆಯಲ್ಲಿಯೂ ಕೂಡ ಆತಂಕ ಮನೆ ಮಾಡಿದೆ. ಉಕ್ರೇನ್ ನಲ್ಲಿ ಧಾರವಾಡದ ಮೆಡಿಕಲ್ ವಿದ್ಯಾರ್ಥಿನಿ ಚೈತ್ರಾ ಎಂಬುವವರು ಸಿಲುಕಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ವಿದೇಶಾಂಗ ಸಚಿವಾಲಯ ಸಾಕಷ್ಟು ಕಾರ್ಯಾಚರಣೆ ನಡೆಸಿದೆ. ಆದರೆ ಮಗಳು ಇರುವ ದೇಶದಲ್ಲಿ ಯುದ್ಧ ಘೋಷಣೆ ಆಗಿದ್ದು, ಈಗ ಮಗಳ ಸ್ಥಿತಿ ನೆನೆದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: Russia-Ukraine war: ವೈದ್ಯರಾಗುವ ಕನಸ್ಸು ಹೊತ್ತು ಉಕ್ರೇನ್ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳು ಅತಂತ್ರ!
“ಹತ್ತಿರದಲ್ಲೇ ಬಾಂಬ್ ಸ್ಫೋಟವಾಗಿದೆ” ಎಂದಿದ್ದ ಮಗಳು
ಇನ್ನು ಚೈತ್ರಾ ಸಂಶಿ ಮೆಡಿಕಲ್ ವ್ಯಾಸಂಗದಲ್ಲಿರುವ ಕನ್ನಡತಿಯಾಗಿದ್ದು, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದವರು. ನಿನ್ನೆ ಬೆಳಗಿನ ಜಾವ 5 ಗಂಟೆ ಸುಮಾರು ತಾಯಿಗೆ ಕರೆ ಮಾಡಿದ್ದ ಚೈತ್ರಾ,ಹಾಸ್ಟೆಲ್ ದೂರದಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ತಿಳಿಸಿದ್ದಳು. ಮಗಳು ಆತಂಕದಲ್ಲಿರುವ ಸುದ್ದಿಕೇಳಿ ಕುಟುಂಬ ಕಣ್ಣೀರು ಹಾಕಿದೆ.
ಒಬ್ಬಳೇ ಮಗಳನ್ನು ವಿದೇಶದಲ್ಲಿ ಓದಿಸುತ್ತಿದ್ದ ತಾಯಿ
ತಾಯಿ ಸುನಂದಾ ಶಾಲಾ ಶಿಕ್ಷಕಿಯಾಗಿದ್ದು, ಒಬ್ಬಳೇ ಮಗಳನ್ನು ವಿದೇಶಕ್ಕೆ ಕಳುಹಿಸಿ ಕಣ್ಣೀರು ಹಾಕುತ್ತಿದ್ದಾರೆ. ಊಟ ಬಿಟ್ಟು ಮಗಳ ಬರುವಿಕೆಗಾಗಿ ಎದುರು ನೋಡುತ್ತಿದ್ದಾಳೆ.
ತವರಿಗೆ ಮರಳೋಕೆ ಸಿದ್ಧಳಾಗಿದ್ದ ಚೈತ್ರ
ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಈ ಮುಂಚೆಯೇ ಫ್ಲೈಟ್ ಟಿಕೇಟ್ ತಗೊಂಡಿದ್ದ ಚೈತ್ರ, ನಿನ್ನೆ ತಾಯ್ನಾಡಿಗೆ ವಾಪಸ್ಸಾಗೋಕೆ ಸಿದ್ಧತೆ ನಡೆಸಿದ್ದಳು. ಆದರೆ ಅಷ್ಟೊತ್ತಿಗಾಗಲೇ ಯುದ್ಧ ಆರಂಭಗೊಂಡಿದ್ದರಿಂದ ಚೈತ್ರ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ. MBBS ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಚೈತ್ರ, ತವರಿಗೆ ಮರಳಲು ಸಿದ್ದವಾಗಿದ್ದಳು.
ವಿಮಾನ ನಿಲ್ದಾಣದ ಮೇಲೆ ದಾಳಿಯಾದ ಹಿನ್ನೆಲೆ, ವಿಮಾನ ಹಾರಾಟವೂ ರದ್ದಾಗಿದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದಾಗಿದೆ. ಪ್ರಯಾಣಿಕರನ್ನ ಬಂಕರ್ ನಲ್ಲಿ ಉಳಿದುಕೊಳ್ಳೋಕೆ ಉಕ್ರೇನ್ ಸರ್ಕಾರದ ವ್ಯವಸ್ಥೆ ಮಾಡಿರೋದಾಗಿ ಚೈತ್ರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆ.
ಇದನ್ನೂ ಓದಿ: Russia-Ukraine War: ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಸರ್ಕಾರಕ್ಕೆ Sonu Sood ಮನವಿ
ಒಟ್ಟಾರೆ ಕಳೆದ ಮೂರು ವರ್ಷದಿಂದ ವೈದ್ಯಕೀಯ ಶಿಕ್ಷಣ ವ್ಯಾಸಂಗಕ್ಕೆ ತೆರಳಿರುವ ಚೈತ್ರಾಳ ಆಗಮನಕ್ಕೆ ಕುಟುಂಬ ಮಾತ್ರವಲ್ಲದೆ ಜಿಲ್ಲೆಯೇ ಎದುರು ನೋಡುತ್ತಿದೆ.
ಉಕ್ರೇನ್ ದೇಶದ ಯುದ್ಧ ಘೋಷಣೆ ಈಗ ಧಾರವಾಡ ನೆಲದಲ್ಲಿಯೂ ಆತಂಕ ಮನೆ ಮಾಡಿದ್ದು, ಭಾರತೀಯರು ಯಾವುದೇ ಸಮಸ್ಯೆಗೆ ಸಿಲುಕದೇ ಮರಳಿ ಬರಲಿ ಎನ್ನೋದು ನಮ್ಮ ಆಶಯವೂ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ