Fake News: ನಕಲಿ ಸುದ್ದಿ ಪತ್ತೆಗೆ ಹೊಸ ಆ್ಯಪ್​ ಆವಿಷ್ಕಾರಿಸಿದ ಧಾರವಾಡ ಐಐಟಿ ವಿದ್ಯಾರ್ಥಿಗಳು

'ಫೇಕ್ ವೀಡ್' ಎಂಬ ಹೆಸರಿನ ಈ ​ ಆ್ಯಪನ್ನುನಲ್ಲಿ ಡೌನ್​ಲೋಡ್​ ಮಾಡಿಕೊಂಡರೆ, ಯಾವ ಸುದ್ದಿ ಸತ್ಯ ಯಾವುದು ಸುಳ್ಳು ಎಂಬುದು ಕ್ಷಣಮಾತ್ರದಲ್ಲಿ ತಿಳಿಯಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಧಾರವಾಡ : ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಕಲಿ ಸುದ್ದಿಗಳ ಹಾವಳಿ ಹೆಚ್ಚಿವೆ.  ಯಾವುದು ಸತ್ಯ ಸುದ್ದಿ, ಯಾವುದು ಸುಳ್ಳು ಎಂಬುದು ತಿಳಿಯದೇ ಓದುಗರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ನಕಲಿ ಸುದ್ದಿಗಳ ಹಾವಳಿಗೆ ಬ್ರೇಕ್ ಹಾಕಲೆಂದು ಇದೀಗ ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ)ವಿದ್ಯಾರ್ಥಿಗಳು ಹೊಸ ಆ್ಯಪ್​ ಒಂದನ್ನು ಸಂಶೋಧನೆ ಮಾಡಿದ್ದಾರೆ. ಇದು ಸುದ್ದಿಯ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಲಿದೆ. ಇದರಿಂದ ಜನರಿಗೆ ನಿಜ ವರದಿಗಳು ತಿಳಿಯಲು ಸಹಾಯಕವಾಗಲಿದೆ. ಸುಲಭ, ಸಹಾಯಕಾರಿಯಾಗಿರುವ ಈ ಆ್ಯಪ್​ನನ್ನು ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ತಯಾರಿಸಿದ್ದಾರೆ. ವಿದ್ಯಾರ್ಥಿಗಳ ಈ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ.

ಐಐಟಿಯ ಅಂತಿಮ ವರ್ಷದ ವಿಭಾಗದಲ್ಲಿ ಓದುತ್ತಿರುವ ಅಮನ್ ಸಿಂಘಾಲ್ ಮತ್ತು ಆತನ ಸ್ನೇಹಿತರ ತಂಡ ಈ ಆ್ಯಪ್​ನ್ನು ಸಂಶೋಧನೆ ಮಾಡಿದ್ದಾರೆ. 'ಫೇಕ್ ವೀಡ್' ಎಂಬ ಹೆಸರಿನ ಈ ​ ಆ್ಯಪನ್ನುನಲ್ಲಿ ಡೌನ್​ಲೋಡ್​ ಮಾಡಿಕೊಂಡರೆ, ಯಾವ ಸುದ್ದಿ ಸತ್ಯ ಯಾವುದು ಸುಳ್ಳು ಎಂಬುದು ಕ್ಷಣಮಾತ್ರದಲ್ಲಿ ತಿಳಿಯಲಿದೆ . ಇನ್ನು ಸಿಕ್ಕಾಪಟ್ಟೆ ಫ್ರೆಂಡ್ಲಿಯಾಗಿ ಕೂಡ ಈ ಆ್ಯಪ್​ನ್ನು ಅನ್ವೇಷಿಸಿರುವುದರಿಂದ ಇದನ್ನು ಬಳಸುವುದು ಕೂಡ ಸುಲಭವಾಗಿದೆ.ಸರಳವಾಗಿ ವಿನ್ಯಾಸ ಮಾಡಿರುವ ಈ ಆ್ಯಪ್​ನ್ನು ಮೂರು ನಾಲ್ಕು ಹಂತದಲ್ಲಿ ಕಾರ್ಯನಿರ್ವಹಿಸಿದರೆ ಸಾಕು ಸುದ್ದಿಯ ನಿಜಾಂಶ ತಿಳಿಯಲಿದೆ.

ವಿದ್ಯಾರ್ಥಿಗಳು ಮಾಡಿರುವ ಈ ಸಂಶೋಧನೆ ಬಗ್ಗೆ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಡಾ. ರಮೇಶ ಪೊಕರಿಯಾಲ ಅವರು ಸಹ ಟ್ವೀಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಕೊವಿಡ್ 19 ಸೋಂಕಿನ ಸಂದರ್ಭದಲ್ಲಿ ಉಂಟಾದ ಸುಳ್ಳು ಸುದ್ದಿಗಳ ಭರಾಟೆಯಿಂದಾಗಿ ಓದುಗರು ಸಾಕಷ್ಟು ತೊಂದರೆ ಪಟ್ಟಿದ್ದರು. ಈ ಆ್ಯಪ್​ ಮೂಲಕ ಇಂತಹ ಸುಳ್ಳು ಸುದ್ದಿ ಹಬ್ಬುವಿರುವ ಬಗ್ಗೆ ಓದುಗರು ಕೂಡ ಜಾಗುಕರಾಗಲು ಸಾಧ್ಯವಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಈ ಆ್ಯಪ್​ನ ಅಂತಿಮ ಹಂತದ ಪ್ರಯೋಗ ನಡೆಯುತ್ತಿದ್ದು, ಇನ್ನೇರಡು ತಿಂಗಳಲ್ಲಿ ಈ ಆ್ಯಪ್​ ಬಿಡುಗಡೆಯಾಗಲಿದೆ. ಇದರಿಂದ ಸಾರ್ವಜನಿಕರಿಗೂ ಕೂಡ ಅನುಕೂಲವಾಗಲಿದೆ ಎನ್ನಲಾಗಿದೆ
Published by:Seema R
First published: