• Home
  • »
  • News
  • »
  • state
  • »
  • Dharwad IIIT: ರಾಷ್ಟ್ರಪತಿಗಳನ್ನು ಸ್ವಾಗತಿಸಲು ಸಿದ್ಧವಾಗ್ತಿದೆ ರೊಬೋಟ್; ಐಐಐಟಿಯಲ್ಲಿ ದೊಡ್ಡಮಟ್ಟದ ಸಂಶೋಧನೆ

Dharwad IIIT: ರಾಷ್ಟ್ರಪತಿಗಳನ್ನು ಸ್ವಾಗತಿಸಲು ಸಿದ್ಧವಾಗ್ತಿದೆ ರೊಬೋಟ್; ಐಐಐಟಿಯಲ್ಲಿ ದೊಡ್ಡಮಟ್ಟದ ಸಂಶೋಧನೆ

ರೊಬೋಟ್

ರೊಬೋಟ್

ಈ ಬುಡಕಟ್ಟು ಭಾಷೆಯ ಸಂಶೋಧನೆ ನಡೆಯುತ್ತಿರುವಾಗಲೇ ಬುಡಕಟ್ಟು ಸಮಾಜದಿಂದ ಬಂದು ರಾಷ್ಟ್ರಪತಿಯಾಗಿ ಅವರೇ ಈ ಮಹತ್ವದ ಸಂಶೋಧನೆ ನಡೆಯುತ್ತಿರೋ ಐಐಐಟಿ ಉದ್ಘಾಟಿಸುತ್ತಿರೋದು ಇನ್ನೊಂದು ವಿಶೇಷ.

  • Share this:

ಧಾರವಾಡ: ಪ್ರತಿಷ್ಠಿತ ಐಐಐಟಿಯ (IIIT Dharwad) ಉದ್ಘಾಟನೆಗೆ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ (President Draupadi Murmu) ಮುರ್ಮು ಕರ್ನಾಟಕ ರಾಜ್ಯಕ್ಕೆ ಬರುತ್ತಿದ್ದಾರೆ. ಸೆಪ್ಟಂಬರ್ 26ರಂದು ರಾಷ್ಟ್ರಪತಿಯವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಈ ರೊಬೋಟ್ (Robot) ಮೂಲಕವೇ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಹಾಗೂ ಐಐಐಟಿಯನ್ನು ರಿಮೋಟ್ (Remote) ಮೂಲಕ ರಾಷ್ಟ್ರಪತಿಗಳು ಉದ್ಘಾಟನೆ (Inauguration) ಮಾಡಲಿದ್ದರೆ, ಆ ರಿಮೋಟ್​​ನ್ನು ಸಹ ರೊಬೋಟ್ ಮೂಲಕವೇ ರಾಷ್ಟ್ರಪತಿಗಳಿಗೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ಈಗಾಗಲೇ ಆಡಳಿತ ಮಂಡಳಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದೆ. 


ರಾಷ್ಟ್ರಪತಿ ದ್ರೌಪದಿ ಮುರ್ಮು ಒಡಿಶಾ ಮೂಲದ ಬುಡುಕಟ್ಟು ಸಮುದಾಯದವರಾಗಿದ್ದಾರೆ. ಇವತ್ತಿನವರೆಗೂ ನಮ್ಮ ದೇಶದಲ್ಲಿರೋ ಬುಡಕಟ್ಟು ಸಮುದಾಯದ ಭಾಷೆಗೆ ಜಾಗತಿಕ ಮಟ್ಟದಲ್ಲಿ ಸ್ಥಾನಮಾನವೇ ಸಿಕ್ಕಿಲ್ಲ.


ದೊಡ್ಡಮಟ್ಟದ ಸಂಶೋಧನೆ


ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧಾರವಾಡದ ಐಐಐಟಿಯನ್ನು ಉದ್ಘಾಟಿಸಲಿದ್ದಾರೆ. ಅದೇ ಸಂಸ್ಥೆಯಲ್ಲಿ ಅವರದೇ ರಾಜ್ಯದ ಎರಡು ಬುಡಕಟ್ಟು ಭಾಷೆಗಳು ಸೇರಿದಂತೆ ಕರ್ನಾಟಕದ ಎರಡೂ ಭಾಷೆಗಳಿಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಭಾಷೆಯನ್ನಾಗಿ ಪರಿವರ್ತಿಸುವ ದೊಡ್ಡಮಟ್ಟದ ಸಂಶೋಧನೆಯೊಂದು ಸದ್ದಿಲ್ಲದೇ ನಡೆಯುತ್ತಿದೆ.


Dharwad IIT plan for robot welcome to president draupadi murmu myd mrq
ರೊಬೋಟ್


ಈ ಬುಡಕಟ್ಟು ಭಾಷೆಯ ಸಂಶೋಧನೆ ನಡೆಯುತ್ತಿರುವಾಗಲೇ ಬುಡಕಟ್ಟು ಸಮಾಜದಿಂದ ಬಂದು ರಾಷ್ಟ್ರಪತಿಯಾಗಿ ಅವರೇ ಈ ಮಹತ್ವದ ಸಂಶೋಧನೆ ನಡೆಯುತ್ತಿರೋ ಐಐಐಟಿ ಉದ್ಘಾಟಿಸುತ್ತಿರೋದು ಇನ್ನೊಂದು ವಿಶೇಷ.


ಕುಯಿ, ಮುಂಡಾರಿ, ಲಂಬಾಣಿ ಮತ್ತು ಸೋಲಿಗ ಭಾಷೆ


ಒಡಿಶಾ ರಾಜ್ಯದ ಬುಡಕಟ್ಟು ಸಮಾಜದ ಕುಯಿ ಮತ್ತು ಮುಂಡಾರಿ ಭಾಷೆ ಹಾಗೂ ಕರ್ನಾಟಕದ ಲಂಬಾಣಿ ಮತ್ತು ಸೋಲಿಗ ಭಾಷೆಯ ಮೇಲೆ ಈ ಸಂಶೋಧನೆ ನಡೆದಿದೆ.


Dharwad IIT plan for robot welcome to president draupadi murmu myd mrq
ರೊಬೋಟ್


ಧಾರವಾಡ ಐಐಐಟಿಯ ನುರಿತ ತಜ್ಞರ ಜೊತೆಗೆ ಧಾರವಾಡ, ಹೈದರಾಬಾದ್ ಹಾಗೂ ಭುವನೇಶ್ವರದ ಐಐಟಿಗಳು ಸಹ ಕೈ ಜೋಡಿಸಿವೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಇದಕ್ಕೆ ಒಟ್ಟು 44 ಲಕ್ಷ 53 ಸಾವಿರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿರೋದಾಗಿ ಪ್ರೊಫೇಸರ್ ಡಾ. ದೀಪಕ್ ಹೇಳಿದರು.


ಇಂಗ್ಲಿಷ್ ಲಿಪಿಗೆ ಧ್ವನಿಯಾಂತರ


ನಮ್ಮ ರಾಜ್ಯದ ಲಂಬಾಣಿ, ಸೋಲಿಗ ಹಾಗೂ ಒಡಿಶಾ ರಾಜ್ಯದ ಕುಯಿ ಮತ್ತು ಮುಂಡಾರಿ ಭಾಷೆಗಳ ಮೇಲೆಯೇ ಈ ವಿಶೇಷ ಸಂಶೋಧನೆ ನಡೆಯುತ್ತಿದ್ದು, ಈ ನಾಲ್ಕು ಬುಡಕಟ್ಟು ಸಮಾಜದ ಭಾಷೆಯ ಧ್ವನಿಯನ್ನು ಇಂಗ್ಲಿಷ್ ಅಕ್ಷರವನ್ನಾಗಿ ಭಾಷಾಂತರ ಮಾಡುವುದು ಹಾಗೂ ಇಂಗ್ಲಿಷ್ ಲಿಪಿಗಳನ್ನು ಆಯಾ ಬುಡಕಟ್ಟು ಭಾಷೆಗೆ ಧ್ವನಿಯಾಂತರ ಮಾಡುವ ಸಂಶೋಧನೆ ಇದಾಗಿದೆ.


Dharwad IIT plan for robot welcome to president draupadi murmu myd mrq
ರೊಬೋಟ್


ಇದನ್ನೂ ಓದಿ:  Arecanut Tree: ಅಡಿಕೆ ಮರ ಹತ್ತುವುದು ಇನ್ನು ಸಲೀಸು, ಬಂದಿದೆ ಗ್ರಾಮೀಣ ಕೃಷಿಕನ ಟ್ರೀ ಸೈಕಲ್


ಅದರಲ್ಲಿಯೂ ಈ ಸಂಶೋಧನೆಯು ಆಯಾ ಬುಡಕಟ್ಟು ಭಾಷೆಯಲ್ಲಿ ಮಾತನಾಡಿದವರು, ಅವರದೇ ಧ್ವನಿಯಲ್ಲಿ ಅದನ್ನು ಬೇರೆ ಭಾಷೆಗೆ ಧ್ವನಿಯಾಂತರ ಮಾಡುತ್ತದೆ. ಧ್ವನಿಯ ಸ್ವರೂಪ, ಏರಿಳಿತ ಯಾವುದು ಸಹ ಬದಲಾವಣೆಗುವುದಿಲ್ಲ. ಇದರ ಜೊತೆ ಇದೇ ಐಐಐಟಿಯಲ್ಲಿ ವಿಶೇಷ ಮಾನವ ಯಂತ್ರ ರೋಬೋಟ್ವೊಂದನ್ನು ಸಿದ್ಧಪಡಿಸಲಾಗಿದೆ.


ಸಮುದಾಯ ಭಾಷೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ


ಈ ರೋಬೋಟ್ ನಲ್ಲಿ ಸಾಕಷ್ಟು ಮಾಹಿತಿಯನ್ನು ಸೇವ್ ಮಾಡಿ ಇಡಲಾಗಿದ್ದು, ಇದೇ ರೊಬೋಟ್ ಮೂಲಕ ಸೆಪ್ಟಂಬರ್ 26 ರಂದು ರಾಷ್ಟ್ರಪತಿಯವರು ಆಗಮಿಸುತ್ತಿರೋ ಹಿನ್ನೆಲೆಯಲ್ಲಿ ಈ ರೊಬೋಟ್ ಮೂಲಕವೇ ರಾಷ್ಟ್ರಪತಿಯವರನ್ನು ಸ್ವಾಗತಿಸುವ ಇಲ್ಲವೇ, ಐಐಐಟಿಯನ್ನು ರಿಮೋಟ್ ಮೂಲಕ ರಾಷ್ಟ್ರಪತಿಗಳು ಉದ್ಘಾಟನೆ ಮಾಡಲಿದ್ದು, ಆ ರಿಮೋಟ್ ಅನ್ನು ರೊಬೋಟ್ ಮೂಲಕವೇ ರಾಷ್ಟ್ರಪತಿಗಳಿಗೆ ನೀಡುವ ಬಗ್ಗೆಯೂ ಈಗಾಗಲೇ ಐಐಐಟಿಯಲ್ಲಿ ಯೋಜನೆ ರೂಪಿಸಲಾಗಿದೆ. ಆದ್ರೆ ಅದಕ್ಕೆ ಅನುಮತಿ ಸಿಗಬೇಕಿದೆ ಐಐಐಟಿ ರಜಿಸ್ಟರ್ ಪ್ರೊ. ಚನ್ನಪ್ಪ ಅಕ್ಕಿ ಹೇಳಿದರು.


ಇದನ್ನೂ ಓದಿ:  Yadagiri: ಕನ್ನಡಿಗನಿಗೆ AIIMS ಪಟ್ಟ: ದೆಹಲಿಯ ಏಮ್ಸ್ ನಿರ್ದೇಶಕರಾಗಿ ಯಾದಗಿರಿಯ ಶ್ರೀನಿವಾಸ್ ಆಯ್ಕೆ


ಒಟ್ಟಾರೆಯಾಗಿ ಉದ್ಘಾಟನೆಯ ವೇಳೆಯಲ್ಲಿಯೇ ಧಾರವಾಡದ ಐಐಐಟಿ ಬುಡಕಟ್ಟು ಸಮುದಾಯದ  ಭಾಷೆಯ ಮೇಲೆ ಮಹತ್ವದ ಸಂಶೋಧನೆ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದು, ಅದರೊಂದಿಗೆ ರೋಬೋಟ್ ಮೂಲಕವೇ ರಾಷ್ಟ್ರಪತಿಗಳಿಗೆ ಸ್ವಾಗತ ಮಾಡುವುದಕ್ಕೆ ಅನುಮತಿ ಸಿಕ್ಕರಂತೂ ಅದು ಕೂಡ ದೇಶದ ತಾಂತ್ರಿಕ ಶಿಕ್ಷಣ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲಾಗಲಿದೆ.

Published by:Mahmadrafik K
First published: