HOME » NEWS » State » DHARWAD GOVERNMENT SCHOOL TEACHER CHANGED STUDENTS CAST IN CERTIFICATE MYD SCT

ಸರ್ಕಾರಿ ಶಾಲೆಯ ಮಕ್ಕಳ ಜಾತಿಗಳೇ ಅದಲು ಬದಲು; ಧಾರವಾಡದ ಮುಖ್ಯ ಶಿಕ್ಷಕಿಯಿಂದ ಎಡವಟ್ಟು

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಅನೇಕ ಮಕ್ಕಳ ಮೂಲ ಜಾತಿಗಳೇ ಅದಲು ಬದಲಾಗಿ ಹೋಗಿವೆ.

news18-kannada
Updated:March 3, 2021, 3:18 PM IST
ಸರ್ಕಾರಿ ಶಾಲೆಯ ಮಕ್ಕಳ ಜಾತಿಗಳೇ ಅದಲು ಬದಲು; ಧಾರವಾಡದ ಮುಖ್ಯ ಶಿಕ್ಷಕಿಯಿಂದ ಎಡವಟ್ಟು
ಧಾರವಾಡ
  • Share this:
ಧಾರವಾಡ : ಶಾಲಾ ಮುಖ್ಯ ಶಿಕ್ಷಕರೊಬ್ಬರು ಮಾಡಿರೋ ಯಡವಟ್ಟಿನಿಂದ ಶಾಲೆಯ ಕೆಲ ಮಕ್ಕಳ ಜಾತಿಗಳೇ ಅದಲು ಬದಲಾಗಿ ಹೋಗಿದೆ. ಅದರಿಂದ ಪಾಲಕರು ಈಗ ತಮ್ಮ ಮಕ್ಕಳ ಜಾತಿಯನ್ನು ಸರಿ ಮಾಡಿಕೊಡಿ ಎಂದು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾದ ದಯನೀಯ ಸ್ಥಿತಿಯೊಂದು ವಿದ್ಯಾಕಾಶಿ ಧಾರವಾಡದಲ್ಲಿ ನಿರ್ಮಾಣವಾಗಿದೆ.

ಹೌದು, ಧಾರವಾಡ ಜಿಲ್ಲೆಯನ್ನು ಶಿಕ್ಷಿತರ, ವಿದ್ಯಾಕಾಶಿ ಎಂದೇ ಕರೆಯುತ್ತಾರೆ. ಆದರೆ ಬುದ್ಧಿವಂತರ ನಾಡೆಂದು ಕರೆಸಿಕೊಳ್ಳುವ ಈ ಜಿಲ್ಲೆಯಲ್ಲೇ ಈಗ ಎಡವಟ್ಟೊಂದು ನಡೆದು ಹೋಗಿದೆ. ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಅನೇಕ ಮಕ್ಕಳ ಮೂಲ ಜಾತಿಗಳೇ ಅದಲು ಬದಲಾಗಿ ಹೋಗಿವೆ. ಒಂದೇ ಮನೆಯ ತಂದೆ-ತಾಯಿಯ ಮಕ್ಕಳಿಗೆ ಅಣ್ಣನಿಗೊಂದು ಜಾತಿ, ತಮ್ಮನಿಗೊಂದು ಜಾತಿ ಎಂದು ಹಿಂದಿರುವ ಶಿಕ್ಷಕರು ನಮೂದಿಸಿಬಿಟ್ಟಿದ್ದಾರೆ. ಸದ್ಯ ಅದೆಲ್ಲವೂ ಈಗ ಎಸ್​ಎಸ್​ಎಲ್​ಸಿ ಪರೀಕ್ಷೆಯ ಓಎಂಆರ್ ಫಾರ್ಮ್ ತುಂಬುವ ವೇಳೆ ಗಮನಕ್ಕೆ ಬಂದಿದೆ. ಈಗ ಐದಾರು ಮಕ್ಕಳಿಗೆ ತಮ್ಮ ಜಾತಿ ಯಾವುದೆಂಬ ಗೊಂದಲ ಶುರುವಾಗಿದೆ.

ಈ ಶಾಲೆಯ ಶಿವಾನಂದ ಶೇಖಪ್ಪ ಮುಮ್ಮಿಗಟ್ಟಿಯ ಮೂಲ ಜಾತಿ ಕ್ಷತ್ರೀಯ ಅವರ ಮನೆಯವರೆಲ್ಲರ ದಾಖಲೆಯಲ್ಲಿಯೂ ಅದೇ ಇದೆ. ಆದರೆ, ಶಾಲೆಯ ರಿಜಿಸ್ಟರ್​ನಲ್ಲಿ ಈತನ ಹೆಸರಿನ ಜೊತೆಗೆ ಹಿಂದೂ ಲಿಂಗಾಯತ ಎಂದು ನಮೂದಿಸಿದ್ದಾರೆ.
ಕೇವಲ ಇದೊಂದು ಪ್ರಕರಣವಲ್ಲ ಲಿಂಗವಂತನಾಗಿರೋ ಮತ್ತೊಬ್ಬ ಹುಡುಗನ ಜಾತಿಯನ್ನು ಕುರುಬ ಎಂದು ನಮೂದಿಸಿ ಬಿಟ್ಟಿದ್ದಾರೆ. ಮಕ್ಕಳದ್ದೂ ಸಹ ವಿವಿಧ ಜಾತಿಗಳಲ್ಲಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: Ramesh Jarkiholi: ರಾಸಲೀಲೆ ವಿಡಿಯೋ ಪ್ರಕರಣ; ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ

ಸದ್ಯ ಇರುವ ಪ್ರಧಾನ ಗುರುಮಾತೆ ಪಾಲಕರಿಂದ ದೂರು ಬಂದಾಗ ಅದನ್ನು ಪರಿಶೀಲಿಸಿ ಅವುಗಳನ್ನು ಬದಲಿಸುವ ಮಾರ್ಗಗಳನ್ನು ತಿಳಿಸಿಕೊಡುತ್ತಿದ್ದಾರೆ. ಎರಡು, ಮೂರು ಮಕ್ಕಳಿರುವ ಕುಟುಂಬದಲ್ಲಿ ಹಿರಿಯ ಮಕ್ಕಳ ಜಾತಿ ಒಂದಿದ್ದರೆ ಕಿರಿಯ ಮಕ್ಕಳ ಜಾತಿ ಇನ್ನೊಂದಾಗಿ ಬದಲಾಗಿರುವುದನ್ನು ಗಮನಿಸಿ ಪಾಲಕರು ಅದನ್ನು ಸರಿಪಡಿಸಿಕೊಡುವಂತೆ ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದಾರೆ.

ನಮ್ಮ ಸಹೋದರ ಜಾತಿ ಪ್ರಮಾಣ ಪತ್ರದಲ್ಲಿ ಜಾತಿ ಅದಲು ಬದಲಾಗಿದೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರನ್ನು  ಕೇಳಿದ್ರೆ ಬಿಇಓ ಹಾಗೂ ಡಿಡಿಪಿ ಕಚೇರಿಗೆ ಹೋಗಿ ಅಲ್ಲಿಂದ ಪತ್ರ ಬಂದರೆ ಸರಿ ಮಾಡಿ‌ಕೊಡುತ್ತೇವೆ ಅಂತಿದ್ದಾರೆ ಎನ್ನುತ್ತಾರೆ ಜಾತಿ ತಪ್ಪಾದ ವಿದ್ಯಾರ್ಥಿಯ ಅಣ್ಣ.ಈ ವಿಷಯಕ್ಕೆ‌ ಸಂಬಂಧಿಸಿದಂತೆ ದೂರು ಬರುತ್ತಿದಂತೆಯೇ ಸಮಸ್ಯೆ ಬಗೆಹರಿಸಲು ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ, ತಮ್ಮ ಅಧೀನದ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿ ತಪ್ಪಿತಸ್ಥ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ, ಮಕ್ಕಳ ಭವಿಷ್ಯ ಬರೆಯಬೇಕಾದ ಶಿಕ್ಷಕರೊಬ್ಬರು ಮಾಡಿರುವ ತಪ್ಪಿಗೆ ಈಗ ಬಡಪಾಯಿ ಮಕ್ಕಳ ಭವಿಷ್ಯದ ದಾರಿಯೇ ಮಂಕಾಗಿ ಹೋಗಿದ್ದು, ಉಳಿದ ಮಕ್ಕಳಿಗೆ ನಮ್ಮ ಜಾತಿ ಯಾವುದಿದೆ ಏನೋ? ಅನ್ನೋ ಸಂಶಯ ಮೂಡೋಕೆ ಶುರುವಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಆ ಎಲ್ಲ ಎಡವಟ್ಟುಗಳನ್ನು ಸರಿ ಮಾಡುವ ಕಾರ್ಯ ಮಾಡಬೇಕಿದೆೆ.
Published by: Sushma Chakre
First published: March 3, 2021, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories