• Home
  • »
  • News
  • »
  • state
  • »
  • Farmers: ರೈತರ ಮಕ್ಕಳಿಗೆ ಹೆಣ್ಣು ಸಿಗ್ತಿಲ್ಲ; ತಹಶೀಲ್ದಾರ್​​ಗೆ ಗ್ರಾಮಸ್ಥರಿಂದ ಮನವಿ

Farmers: ರೈತರ ಮಕ್ಕಳಿಗೆ ಹೆಣ್ಣು ಸಿಗ್ತಿಲ್ಲ; ತಹಶೀಲ್ದಾರ್​​ಗೆ ಗ್ರಾಮಸ್ಥರಿಂದ ಮನವಿ

ರೈತರಿಂದ ಮನವಿ ಪತ್ರ

ರೈತರಿಂದ ಮನವಿ ಪತ್ರ

ರಾಜ್ಯ ಸರ್ಕಾರದ ಗಮನಕ್ಕೆ ತರೋದಾಗಿ ಕುಂದಗೋಳ ತಹಶೀಲ್ದಾರರು ಸಹ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೋ ಕಾಲವೇ ಉತ್ತರ ನೀಡಲಿದೆ.

  • News18 Kannada
  • Last Updated :
  • Dharwad, India
  • Share this:

ಹುಬ್ಬಳ್ಳಿ: ರೈತರೇ (Farmers) ಭಾರತದ ಬೆನ್ನೆಲುಬು ಅನ್ನೋ ಕಾಲವೊಂದಿತ್ತು. ಈಗಲೂ ಅದೇ ಪರಿಸ್ಥಿತಿ ಇದ್ದರೂ, ರೈತ ಚಲಾವಣೆಯಲ್ಲಿ ಇಲ್ಲದ ನಾಣ್ಯದಂತಾಗಿದ್ದಾನೆ. ಬೆವರು ಸುರಿಸಿ ಪೈರು ಬೆಳೆದು (Agriculture) ಎಲ್ಲರಿಗೂ ಅನ್ನ ನೀಡುವ ಅನ್ನದಾತನ ಮಕ್ಕಳನ್ನು (Farmers Children) ಮದುವೆಯಾಗೋಕೆ (Marriage) ಯಾರೂ ಮುಂದಾಗ್ತಿಲ್ಲವಂತೆ. ಗ್ರಾಮೀಣ ಪ್ರದೇಶದಲ್ಲಿ (Rural Area) ಈ ತೊಂದರೆ ದಿನೇ ದಿನೇ ಹೆಚ್ಚಾಗಲಾರಂಭಿಸಿದ್ದು, ಕೃಷಿಕ ವರ್ಗವನ್ನು ಕಂಗಾಲಾಗುವಂತೆ ಮಾಡಿದೆ. ರೈತರ ಮಕ್ಕಳಿಗೆ ಕನ್ಯೆ ಕೊಡ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿರೋ ಘಟನೆ ಧಾರವಾಡ ಜಿಲ್ಲೆ ಕುಂದಗೋಳ (Kundagol, Dharwad) ತಾಲೂಕಿನ ಹೊಸಳ್ಳಿ (Hosalli) ಗ್ರಾಮದಲ್ಲಿ ನಡೆದಿದೆ. ಈ ನಿಟ್ಟಿನಲ್ಲಿ ಸರ್ಕಾರ (Government)ಜಾಗೃತಿ ಮೂಡಿಸಬೇಕೆಂದು ಕುಂದಗೋಳ ತಹಶೀಲ್ದಾರ್​​ಗೆ ಹೊಸಳ್ಳಿ ಗ್ರಾಮಸ್ಥರು (Villagers) ಮನವಿ ಪತ್ರ ಸಲ್ಲಿಸಿದ್ದಾರೆ.


ಕುಂದಗೋಳ ತಾಲೂಕಿನ ಹೊಸಳ್ಳಿ ಗ್ರಾಮಸ್ಥರಿಂದ ವಿಭಿನ್ನ ಮನವಿ ಸಲ್ಲಿಕೆಯಾಗಿದ್ದು, ಚರ್ಚೆಗೆ ಕಾರಣವಾಗಿದೆ. ತಹಶೀಲ್ದಾರ್ ಗ್ರಾಮ ವಾಸ್ತವ್ಯ ವೇಳೆ ಗ್ರಾಮಸ್ಥರು ವಿಭಿನ್ನ ಮನವಿ ಸಲ್ಲಿಸಿದ್ದಾರೆ.


ಈ ಸಂಬಂಧ ಸರ್ಕಾರ ಜಾಗೃತಿ ಮೂಡಿಸಲಿ


ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ಕನ್ಯೆ ಕೊಡೋಕೆ ಜನರು ಹಿಂದೇಟು ಹಾಕ್ತಿದಾರೆ. ನೌಕರಿ ಇದ್ದರೆ ಮಾತ್ರ ಕನ್ಯೆ ಕೊಡ್ತೀವಿ ಅಂತಾರೆ. ಹೀಗಾಗಿ ಸರ್ಕಾರ ಜನಜಾಗೃತಿ ಮಾಡಬೇಕೆಂದು ಹೊಸಳ್ಳಿ ಗ್ರಾಮಸ್ಥರು ಕುಂದಗೋಳ ತಹಶೀಲ್ದಾರ್​​ಗೆ ಮನವಿ ಕೊಟ್ಟಿದ್ದಾರೆ.


 Dharwad farmers request to tahshildar for solution bride problems saklb mrq
ರೈತರಿಂದ ಮನವಿ ಪತ್ರ


ಸರ್ಕಾರ ಅರಿವು ಕಾರ್ಯಕ್ರಮ ಮೂಡಿಸಿ ರೈತರ ಮಕ್ಕಳಿಗೆ ಕನ್ಯೆ ಕೊಡಿಸಿ ಎಂದೂ ಆಗ್ರಹಿಸಿದ್ದಾರೆ. ಆ ಮೂಲಕ ಕೃಷಿ ಕ್ಷೇತ್ರ ಉತ್ತೇಜಿಸಬೇಕೆಂದು ಮನವಿ ಮಾಡಿದ್ದಾರೆ.


ಭರವಸೆ ನೀಡಿದ ತಹಶೀಲ್ದಾರ್


ರೈತ ದೇಶದ ಬೆನ್ನೆಲಬು ಅಂತಾರೆ, ಅನ್ನ ನೀಡಲು ರೈತ ಬೇಕು. ಹೀಗಾಗಿ ನಾವು ಕೃಷಿ ಅವಲಂಬಿಸಿದ್ದೇವೆ. ಆದ್ರೆ ನಮ್ಮ ಮಕ್ಕಳಿಗೆ ಎಲ್ಲಿಯೂ ಕನ್ಯೆ ಸಿಗ್ತಿಲ್ಲ. ಸರ್ಕಾರ ರೈತರ ಕುರಿತು ಮನವರಿಕೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತರೋದಾಗಿ ಕುಂದಗೋಳ ತಹಶೀಲ್ದಾರರು ಸಹ ಭರವಸೆ ನೀಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಫಲಪ್ರದವಾಗುತ್ತದೋ ಕಾಲವೇ ಉತ್ತರ ನೀಡಲಿದೆ.


ಭೀಕರ ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆ


ಹುಬ್ಬಳ್ಳಿ ಹೊರವಯದಲ್ಲಿ ಬೈಕ್​​​ಗೆ ಲಾರಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಕುಂದಗೋಳ ತಾಲೂಕಿನ ಬೆಳಗಲಿ ಕ್ರಾಸ್ ಬಳಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. 29 ವರ್ಷದ ಮಹಮ್ಮದ್ ನವಾಜ್ ಮೃತ ದುರ್ದೈವಿಯಾಗಿದ್ದಾನೆ.


 Dharwad farmers request to tahshildar for solution bride problems saklb mrq
ರೈತರಿಂದ ಮನವಿ ಪತ್ರ


ವೇಗವಾಗಿ ಬಂದ ಲಾರಿ ಡಿಕ್ಕಿ


ರೋಡ್ ಕ್ರಾಸ್ ಮಾಡುವಾಗ ವೇಗವಾಗಿ ಬಂದ ಲಾರಿ ಡೊಕ್ಕಿ ಹೊಡೆದಿದೆ. ಮಹಮ್ಮದ್ ನವಾಜ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಲಾರಿ ಡಿಕ್ಕಿಯಾಗೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.


ಇದನ್ನೂ ಓದಿ:  Poisonous Mushroom: ದಕ್ಷಿಣ ಕನ್ನಡದ ಪುದುವೆಟ್ಟುಯಲ್ಲಿ ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು


ಅಪಘಾತದ ನಂತರ ಚಾಲಕ ಲಾರಿ ಸಮೇತ ಪರಾರಿಯಾಗಿದ್ದಾನೆ. ಮೃತ ಮಹಮ್ಮದ್ ನವಾಜ್ ಹುಬ್ಬಳ್ಳಿ ತಬೀಬ್ ಲ್ಯಾಂಡ್ ನಿವಾಸಿಯಾಗಿದ್ದ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.


ಹೆಚ್​​ಡಿಕೆಗೆ ಯುವ ರೈತನ ಮನವಿ ಪತ್ರ


ರಾಜಕೀಯ ನಾಯಕರ (Political Leaders) ಬಳಿ ಅನೇಕರು ತಮ್ಮ ಕೌಟುಂಬಿಕ ಸಮಸ್ಯೆ (Family Problem), ಊರಿನ ಸಮಸ್ಯೆಗಳನ್ನು ಹೇಳಿ ಪರಿಹಾರ (Solution) ಕೇಳ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಮಾಜಿ ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿ (HD Kumaraswamy) ಅವರ ಮುಂದೆ ವಿಚಿತ್ರ ಮನವಿ ಮಾಡಿಕೊಂಡಿದ್ದಾನೆ. ಮದುವೆಯಾಗಲು ಹುಡುಗಿ ಸಿಗ್ತಿಲ್ಲ ವಧುವಿನ ಕೊರತೆ ನೀಗಿಸುವಂತೆ ಪತ್ರದ ಮೂಲಕ ಕೇಳಿಕೊಂಡಿದ್ದಾನೆ.


ಇದನ್ನೂ ಓದಿ:  Bidar: 2 ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ, ಸ್ಥಿತಿ ಗಂಭೀರ


ರೈತ ಯುವಕರಿಗೆ ಸಿಗ್ತಿಲ್ಲ ಹುಡುಗಿ


ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕುಮಾರಸ್ವಾಮಿಗೆ ಮನವಿ ಮಾಡಿದ್ದಾನೆ.

Published by:Mahmadrafik K
First published: