ಸಾಮೂಹಿಕ ವಿವಾಹದಲ್ಲಿ ಸರಳವಾಗಿ ಮದುವೆಯಾದ ಡಿವೈಎಸ್​ಪಿ

ಚಿತ್ರದುರ್ಗದ ಮುರುಘಾ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಮದುವೆಗಿಂತ ಈ ಬಾರಿ ಪೊಲೀಸ್ ಅಧಿಕಾರಿಯೊಬ್ಬರು ಸಾಮೂಹಿಕ ವಿವಾಹವಾಗಿದ್ದು ವಿಶೇಷವಾಗಿ ಕಂಡು ಬಂದಿತ್ತು

G Hareeshkumar | news18
Updated:December 5, 2018, 8:02 PM IST
ಸಾಮೂಹಿಕ ವಿವಾಹದಲ್ಲಿ ಸರಳವಾಗಿ ಮದುವೆಯಾದ ಡಿವೈಎಸ್​ಪಿ
ಸಾಮೂಹಿಕ ವಿವಾಹವಾದ ನವದಂಪತಿ
G Hareeshkumar | news18
Updated: December 5, 2018, 8:02 PM IST
- ವಿನಾಯಕ ತೊಡರನಾಳ

ಚಿತ್ರದುರ್ಗ ( ಡಿ.05) :  ಪೊಲೀಸರು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಧಾರವಾಡ ಮೂಲದ ಡಿವೈಎಸ್ಪಿ  ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಸರಳವಾಗಿ ಮದುವೆಯಾದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಮದುವೆಗಿಂತ ಈ ಬಾರಿ ಪೊಲೀಸ್ ಅಧಿಕಾರಿಯೊಬ್ಬರು ಸಾಮೂಹಿಕ ವಿವಾಹವಾಗಿದ್ದು ವಿಶೇಷವಾಗಿ ಕಂಡು ಬಂದಿತ್ತು. ಸದ್ಯ ಬೆಳಗಾವಿಯಲ್ಲಿ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಧಾರವಾಡ ಮೂಲದ ಪ್ರಿಯದರ್ಶಿನಿ ಇಂದು ಬಾಳ ಸಂಗಾತಿಯಾಗಿ ತೋಟಗಾರಿಕೆ ಕಾಲೇಜು ಪ್ರಾಧ್ಯಾಪಕ ಡಾ. ಸಂತೋಷ್ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶ್ರೀಮಂತಿಕೆ ವ್ಯಕ್ತಿತ್ವದಲ್ಲಿ ಇರಬೇಕೆ ಹೊರತು ತೋರಿಸಿಕೊಡುವುದರಲ್ಲಿ ಅಲ್ಲ ಎನ್ನುವುದು ಇವರ ಧ್ಯೇಯವಾಗಿದೆ. ಹೀಗಾಗಿ ಎಷ್ಟೇ ಹಣ ಇದ್ದರೂ ಸಹ ಸರಳ ರೀತಿಯಲ್ಲಿ ಮದುವೆಯಾಗಿದ್ದಾರೆ. ಇನ್ನೂ ಈ ರೀತಿ ಮದುವೆ ಆಗಿದ್ದಕ್ಕೆ ಖುಷಿಯಾಗಿದೆ. ಸುಮ್ಮನೆ ದುಂದು ವೆಚ್ಚ ಮಾಡುವ ಬದಲು ಅದೇ ಹಣವನ್ನ ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಬಳಸಿ ಅನ್ನೋದೇ ನವದಂಪತಿ ಹೇಳುತ್ತಾರೆ.

ಇದನ್ನು ಓದಿ :  ಗಂಡ ಬಿಟ್ಟರು ಚಲ ಬಿಡದ ದಿಟ್ಟ ಮಹಿಳೆ ಮಹಾದೇವಿ

ದುಡ್ಡಿರುವವರು ಹಣವನ್ನ ಹೇಗೆ ಖರ್ಚು ಮಾಡಬೇಕು ಎಂದು ಸುಮ್ಮನೆ ಹಾಳು ಮಾಡುತ್ತಾರೆ, ಆದರೆ ಹಣ ಇದ್ದರೂ ಸಹ ಅದನ್ನ ಹಾಳು ಮಾಡದೆ ಸರಳ ವಿವಾಹ ಆಗಿ ಎಲ್ಲರಿಗೂ ಈ ದಂಪತಿ ಮಾದರಿಯಾಗಿದ್ದಾರೆ.

ಇದನ್ನು ಓದಿ :  ಮನೆಯ ಟೆರೇಸ್ ಮೇಲೆ ಹಣ್ಣಿನ ಕೃಷಿ; ಪುತ್ತೂರಿನ ಮಹಿಳೆ ಪ್ರಫುಲ್ಲಾ ಸಾಧನೆ
Loading...

First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ