HOME » NEWS » State » DHARWAD CONGRESS LEADER DETAINED AFTER FIRING AT HIS BIRTHDAY PARTY SCT MYD

ಬರ್ತ್​ಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ; ಮಾರನೇ ದಿನವೇ ಕೇಸ್ ದಾಖಲು

Dharwad: ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ರಾಜಕೀಯ ಮುಖಂಡ ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಅಣ್ಣಪ್ಪಗೌಡರ ಬರ್ತಡೇ ಪಾರ್ಟಿ ನಡೆಯುವ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು.

news18-kannada
Updated:March 25, 2021, 3:56 PM IST
ಬರ್ತ್​ಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ; ಮಾರನೇ ದಿನವೇ ಕೇಸ್ ದಾಖಲು
ಧಾರವಾಡದಲ್ಲಿ ಪಾರ್ಟಿಯಲ್ಲಿ ಫೈರಿಂಗ್
  • Share this:
ಧಾರವಾಡ : ಹುಟ್ಟುಹಬ್ಬದ ಆಚರಣೆ, ಚುನಾವಣೆ ಫಲಿತಾಂಶ ಹೀಗೆ ಹಲವು ಸಂದರ್ಭಗಳಲ್ಲಿ ಉತ್ಸಾಹದಿಂದ‌ ಮಾಡಿದ ಕೆಲವು ಘಟನೆಗಳು ನಮಗೇ ಮುಳುವಾಗುತ್ತವೆ. ಸಂಭ್ರಮದಿಂದ ಅಚರಿಸಬೇಕಿದ್ದವರು ಅನಾಹುತಕ್ಕೆ ಕಾರಣರಾಗುತ್ತಾರೆ. ಇದೇ ರೀತಿಯಾಗಿ ರಾಜಕೀಯ ನಾಯಕನೊಬ್ಬ ಹುಟ್ಟುಹಬ್ಬದ ಸಂದರ್ಭದಲ್ಲಿ, ತಮ್ಮ ತೋಟದ ಮನೆಯಲ್ಲಿ ಭರ್ಜರಿ ಪಾರ್ಟಿ‌ಯನ್ನೆ ಆಯೋಜನೆ ಮಾಡಿದ್ದ, ಗೆಳೆಯರು ಹಾಗೂ ಅಭಿಮಾನಿಗಳನ್ನು ಆಹ್ವಾನಿಸಿದ್ದ. ಭರ್ಜರಿ ಸಂಭ್ರಮಾಚರಣೆ ನಡೆಯುತತ್ಇರುವಾಗಲೇ ಆತನ ಗೆಳೆಯನೊಬ್ಬ ಬಿಲ್ಡಪ್ ತೋರಿಸಿದ ಪರಿಣಾಮ  ಬರ್ತಡೇ ಬಾಯ್ ಮರುದಿನವೇ ಪೊಲೀಸ್ ಠಾಣೆ ಅತಿಥಿಯಾದ.

ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಳ್ಳಿ ಗ್ರಾಮದ ರಾಜಕೀಯ ಮುಖಂಡ ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯ ಅಣ್ಣಪ್ಪಗೌಡರ ಬರ್ತಡೇ ಪಾರ್ಟಿ ನಡೆಯುವ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಅಣ್ಣಪ್ಪ ಗೌಡ ಅವರು ಗ್ರಾಮೀಣ ಭಾಗದಲ್ಲಿ ಹೆಸರು ಮಾಡಿರುವ ಕಾಂಗ್ರೆಸ್ ಮುಖಂಡ. ಹೀಗಾಗಿ ಈತನ 50ನೇ ವರ್ಷದ ಬರ್ತಡೇಯನ್ನು ಗ್ರ್ಯಾಂಡ್ ಆಗಿಯೇ ಆಯೋಜಿಸಲಾಗಿತ್ತು‌. ಈ ವೇಳೆ ಶುಭ ಹಾರೈಸಲು ಬಂದಿದ್ದ ಮತ್ತೋರ್ವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ತನ್ನ ಲೈಸೆನ್‌ವುಳ್ಳ ರಿವಾಲ್ವಾರ್ ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದ.

ಅಣ್ಣಪ್ಪಗೌಡನ ಬರ್ತಡೇಯಲ್ಲಿ ಫೈರಿಂಗ್ ಮಾಡಿದ್ದನ್ನು ಅಲ್ಲಿಯೇ ಇದ್ದ ಅನೇಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಅಣ್ಣಪ್ಪ ಗೌಡ ಮತ್ತು ಮಲ್ಲಿಕಾರ್ಜುನನ ಬೆಂಬಲಿಗರು  ಪ್ರತಿಷ್ಠೆ ಎಂಬಂತೆ ಈ ವಿಡಿಯೋವನ್ನು ವೈರಲ್ ಮಾಡಿದ್ದರು. ಫೈರಿಂಗ್ ಸುದ್ದಿ ಯಾವಾಗ ಮಾಧ್ಯಮಗಳಲ್ಲಿ ಬಂತೋ ಆಗ ಪೊಲೀಸರು ಸಹ ಜಾಗೃತರಾದರು. ಅತ್ತ ಈ ಇಬ್ಬರೂ ಸಹ ರಾತ್ರಿಯಿಡೀ ಭರ್ಜರಿ ಪಾರ್ಟಿ ಮಾಡಿ ಬೆಳಗಾಗಿದ್ದರೂ ಇನ್ನೂ ರಾತ್ರಿ ನಿದ್ರೆಯಲ್ಲೇ ಇದ್ದರು.

ಇದನ್ನೂ ಓದಿ: ಎಸ್​ಐಟಿ ಯಾರನ್ನು ಸೇಫ್ ಮಾಡುತ್ತಿದೆ ಎಂದು ಅರ್ಥವಾಗುತ್ತಿಲ್ಲ; ರಮೇಶ್ ಜಾರಕಿಹೊಳಿ ಸಿಡಿ ಯುವತಿ ವಿಡಿಯೋ ಬಿಡುಗಡೆ

ತಾವು ರಾತ್ರಿ ಮಾಡಿದ್ದ ಘನಂದಾರಿ ಕೆಲಸ ಇಷ್ಟೆಲ್ಲ ಅವಾಂತರ ಮಾಡಿದೆ ಅಂತಾ ಇವರಿಗೂ ತಿಳಿದಿದ್ದು ಪೊಲೀಸರಿಂದ ಬುಲಾವ್ ಬಂದ್ ಬಳಿಕವೇ. ಇಬ್ಬರನ್ನೂ  ಠಾಣೆಗೆ ಕರೆಯಿಸಿಕೊಂಡಿರೋ ಪೊಲೀಸರು ಶಸಾಸ್ತ್ರ ಕಾಯಿದೆಯಡಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಷ್ಟೇ ಅಲ್ಲದೇ, ಫೈರಿಂಗ್ ಮಾಡಿದ್ದ ಮಲ್ಲಿಕಾರ್ಜುನನ ರಿವಾಲ್ವಾರ್ ಸಹ ಜಪ್ತಿ ಮಾಡಿಕೊಂಡಿದ್ದಾರೆ., ಇಬ್ಬರ ಮೇಲೂ ಈಗ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಕೇಸ್ ಬುಕ್ ಮಾಡಲಾಗಿದೆ.

ಬರ್ತಡೆಯಲ್ಲಿ ರಿವಾಲ್ವಾರ್‌ನಿಂದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಧಾರವಾಡ ಎಸ್ಪಿ ಪಿ. ಕೃಷ್ಣಕಾಂತ, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30 ಮತ್ತು ಐಪಿಸಿ 285 ಅಡಿಯಲ್ಲಿ ಕೇಸ್ ದಾಖಲು ಮಾಡಿದ್ದೇವೆ. ಬರ್ತಡೆ ಇದ್ದ ವ್ಯಕ್ತಿ ಮತ್ತು ಫೈರಿಂಗ್ ಮಾಡಿದ ವ್ಯಕ್ತಿ ವಶಕ್ಕೆ ಪಡೆಯಲಾಗಿದೆ. ಓಪನ್ ಫೈರ್ ಮಾಡಿದ ವ್ಯಕ್ತಿ ಬಳಿ 2011 ದಿಂದ ರಿವಾಲ್ವಾರ್ ಲೈಸೆನ್ಸ್ ಇದೆ. ಇವರು ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದರು.
ಒಟ್ಟಾರೆಯಾಗಿ ರಾಜಕೀಯ ನಾಯಕರು ಬರ್ತಡೇ ಜೋಷ್​ನಲ್ಲಿ ಮಾಡಿದ ಯಡವಟ್ಟವೊಂದು ಅನೇಕರ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹರಿದಾಡಿ ಈಗ ಅವರ ಸ್ಟೇಟಸ್ ಪೊಲೀಸ್ ಠಾಣೆ ಸೇರುವಂತೆ ಮಾಡಿ ಬಿಟ್ಟಿರೋದು ವಿಪರ್ಯಾಸವಾದರೂ ಸತ್ಯ

(ವರದಿ: ಮಂಜುನಾಥ ಯಡಳ್ಳಿ)
Published by: Sushma Chakre
First published: March 25, 2021, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories