ಫುಡ್​ ಫಾಯಿಜನ್​: ಹೋಮಿಯೋಪತಿ ಕಾಲೇಜಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಹೋಮಿಯೋಪತಿ ಕಾಲೇಜಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಹೊರ ಹೋದರೆ, ಕಾಲೇಜಿಗೆ ಕೆಟ್ಟ ಹೆಸರು ಬರಲಿದೆ. ಈ ಹಿನ್ನೆಲೆ ಈ ಕುರಿತು ಯಾವುದೇ ಸುದ್ದಿಯನ್ನು ಹೋರಹಾಕದಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ. 

Seema.R | news18-kannada
Updated:December 9, 2019, 6:17 PM IST
ಫುಡ್​ ಫಾಯಿಜನ್​: ಹೋಮಿಯೋಪತಿ ಕಾಲೇಜಿನ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ
ಸಾಂದರ್ಬಿಕ ಚಿತ್ರ
  • Share this:
ಧಾರವಾಡ (ಡಿ.9): ಇಲ್ಲಿನ ಬಿಡಿ ಜತ್ತಿ ಹೋಮಿಯೋ ಕಾಲೇಜಿನಲ್ಲಿ ವಿಷಯುಕ್ತ ಆಹಾರ ಸೇವಿಸಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. 

ಭಾನುವಾರ ರಾತ್ರಿ ಕಾಲೇಜಿನ ಹಾಸ್ಟೆಲ್​ನಲ್ಲಿ ಊಟ ಮಾಡಿದ ವಿದ್ಯಾರ್ಥಿಗಳಲ್ಲಿ ವಾಂತಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದಾರೆ. ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಇನ್ನು ಹೋಮಿಯೋಪತಿ ಕಾಲೇಜಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಹೊರ ಹೋದರೆ, ಕಾಲೇಜಿಗೆ ಕೆಟ್ಟ ಹೆಸರು ಬರಲಿದೆ. ಈ ಹಿನ್ನೆಲೆ ಈ ಕುರಿತು ಯಾವುದೇ ಸುದ್ದಿಯನ್ನು ಹೋರಹಾಕದಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ.

ಇದನ್ನು ಓದಿ: ಸೋಲಿನಿಂದ ಕಂಗೆಟ್ಟ ಎಂಟಿಬಿ ನಾಗರಾಜ್​ ; ಸಿಎಂ ಬಿಎಸ್​ವೈರಿಂದ ಧೈರ್ಯ

ಕಡೆಗೆ ಏಕಾಏಕಿ ನರ್ಸಿಂಗ್​, ಮೆಡಿಕಲ್​ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ವಿಷಯ ತಿಳಿದಾಗ ಅಸಲಿ ವಿಷಯ ಬೆಳಕಿಗೆ ಬಂದಿದೆ. ಇನ್ನು ವಿದ್ಯಾರ್ಥಿಗಳಲ್ಲಿ ಫುಡ್​ ಪಾಯಿಸನ್​ ಆಗಲು ಯಾವ ಆಹಾರ ಸೇವಿಸಿದ್ದಾರೆ. ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

(ವರದಿ: ಮಂಜುನಾಥ್​ ಯಡಹಳ್ಳಿ)
First published: December 9, 2019, 6:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading