ಧಾರವಾಡದಲ್ಲಿ ವಿಶೇಷ ದ್ಯಾಮವ್ವ ದುರ್ಗವ್ವ ಜಾತ್ರೆ ಆಚರಣೆ

news18
Updated:March 11, 2018, 3:36 PM IST
ಧಾರವಾಡದಲ್ಲಿ ವಿಶೇಷ ದ್ಯಾಮವ್ವ ದುರ್ಗವ್ವ ಜಾತ್ರೆ ಆಚರಣೆ
  • News18
  • Last Updated: March 11, 2018, 3:36 PM IST
  • Share this:
-ಮಂಜುನಾಥ ಯಡಳ್ಳಿ, ನ್ಯೂಸ್ 18 ಕನ್ನಡ

ಧಾರವಾಡ,(ಮಾ.11):  ಈ ಗ್ರಾಮದಲ್ಲಿ ಯಾರು ಚಪ್ಪಲಿ ಹಾಕುವಂತಿಲ್ಲ. ಮನೆಯಲ್ಲಿ ಅಡುಗೆ ಮಾಡುವಂತೆಯೂ ಸಹ ಇಲ್ಲ. ನೆರೆದ ನೆಂಟರೆಲ್ಲ ಗ್ರಾಮಸ್ಥರು ಹಾಕಿದ ಸಂಪ್ರದಾಯವನ್ನು ಪಾಲಿಸಬೇಕು. ಇದು 9 ವರ್ಷದ ಬಳಿಕ ನಡೆಯುತ್ತಿರುವ ಸಂಪ್ರದಾಯ. ಗ್ರಾಮದಲ್ಲಿ ಸಂಪ್ರದಾಯವನ್ನು ಯಾರೊಬ್ಬರು ವಿರೋಧಿಸುವಂತಿಲ್ಲ. ಇದು ಎಲ್ಲರು ಕಡ್ಡಾಯವಾಗಿ ಪಾಲಿಸ ಬೇಕಾದ ಸಂಪ್ರದಾಯವಾಗಿದೆ. ಹಾಗಾದರೆ  ಈ ದೇವಿ ಜಾತ್ರೆ ಎಲ್ಲಿ ನಡೆಯುತ್ತಿದೆ ಅಂತೀರಾ ಈ ವರದಿ  ಓದಿ.

ಹೂಗಳಿಂದ ಶೃಂಗಾರವಾದ ಗ್ರಾಮದೇವತೆಗಯ ಮೂರ್ತಿಗಳು. ಪರಸ್ಪರ ಭಂಡಾರ ಎರಚುವ ಮೂಲಕ ಜಾತ್ರೆ ಆಚರಣೆ ಮಾಡುತ್ತಿರೋ ಗ್ರಾಮಸ್ಥರು, ಗ್ರಾಮದಲ್ಲಿ ಪಾದರಕ್ಷೆ ಹಾಕದೆ ಇರುವ ಗ್ರಾಮಸ್ಥರು. ಹೌದು ಇದು ಧಾರವಾಡ ತಾಲೂಕಿ ಯರಿಕೊಪ್ಪ ಗ್ರಾಮದಲ್ಲಿ ನಡೆದ ದ್ಯಾಮವ್ವ-ದುರ್ಗವ್ವನ ಜಾತ್ರೆಯ ದೃಶ್ಯಗಳು. ಕಳೆದ 9 ವರ್ಷಗಳ ಹಿಂದೆ ಈ ಗ್ರಾಮದ ಗ್ರಾಮದೇವತೆ ಜಾತ್ರೆ ಮಾಡಲಾಗಿತ್ತು. ಅದೇ ರೀತಿ ಈಗ 9 ವರ್ಷದ ಬಳಿಕ ಮತ್ತೆ ಗ್ರಾಮದೇವತೆ ದ್ಯಾಮವ್ವ ದುರ್ಗವ್ವನ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯ ಸಂಭ್ರಮ ನೋಡುವುದು ಅಂದ್ರೆ ಎಲ್ಲರಿಗೂ ತುಂಬಾನೆ ಖುಷಿ. ಜೊತೆಗೆ ಅದರಲ್ಲಿ ಪಾಲ್ಗೊಳ್ಳುವುದು ಇನ್ನಷ್ಟು ಖುಷಿ. ಜಾತ್ರೆ ನಿಮಿತ್ತ ಊರಿನಲ್ಲಿ  ಬಣ್ಣದೋಕುಳಿ ಮಾದರಿಯಲ್ಲಿಯೇ ಪರಸ್ಪರ ಒಬ್ಬರಿಗೊಬ್ಬರು ಭಂಡಾರ ಎರಚಿಕೊಂಡು ಸಂಭ್ರಮ ಪಡುತ್ತಾರೆ. ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ಜಾತಿ ಬೇಧ ಭಾವವಿಲ್ಲದೇ ಈ ಸಂಭ್ರಮದಲ್ಲಿ ತೊಡಗುತ್ತಾರೆ.

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ ಗ್ರಾಮದ ಯಾವುದೇ ಮನೆಯಲ್ಲಿ ಯಾರೂ ಕೂಡ ಒಲೆಯನ್ನು ಹಚ್ಚುವುದಿಲ್ಲ. ಊರಿನ ಎಲ್ಲಾ ಗ್ರಾಮಸ್ಥರು ಒಂದು ಕಡೆ ಸೇರಿ ಅಡುಗೆಯನ್ನು ತಯಾರಿಸಿಕೊಂಡು ಊಟ ಮಾಡುತ್ತಾರೆ. ಇದರ ಜೊತೆಗೆ ಜಾತ್ರೆಯ ಸಂದರ್ಭದಲ್ಲಿ ಯಾರೂ ಕೂಡ ಗ್ರಾಮಸ್ಥರು ಕಾಲಿನಲ್ಲಿ ಚಪ್ಪಲಿಯನ್ನು ಹಾಕುವುದಿಲ್ಲ. ಹಾಗೇನಾದ್ರೂ ಚಪ್ಪಲಿ ಹಾಕಿದ್ರೆ ಮತ್ತು ಮನೆಯಲ್ಲಿ ಒಲೆಯನ್ನು ಹಚ್ಚಿ ಅಡುಗೆಯನ್ನು ಮಾಡಿದ್ರೆ ಅವರಿಗೆ ಕೆಡುಕಾಗುವುದು ಗ್ಯಾರಂಟಿ. ಇದು ಹಿರಿಯರ ಕಾಲದಿಂದಲೂ ನಡೆದುಕೊಂಡ ಬಂದ ಸಂಪ್ರದಾಯವಾಗಿದೆ.

ಈ ವಿಶೇಷವಾದ ಜಾತ್ರೆಯಲ್ಲಿ ಮಕ್ಕಳು, ಹಿರಿಯರು ತಮ್ಮ ವಯಸ್ಸಿನ ತಾರತಮ್ಯವಿಲ್ಲದೇ ಎಲ್ಲರೂ ಒಂದೇ ವಯಸ್ಸಿನವರು ಎಂದು ಕೊಂಡು ಜಾತ್ರೆಯನ್ನು  ಆನಂದಿಸುತ್ತಾರೆ. ನಿಜಕ್ಕೂ ಈಗಿನ ಆಧುನಿಕ ಯುಗದಲ್ಲಿ ಇಂತಹ ಸಾಂಪ್ರದಾಯಿಕ ಜಾತ್ರೆಯನ್ನು ನಮ್ಮ ನಡುವೆ ಆಚರಿಸುತ್ತಾರೆ ಎಂದರೆ ಒಂದು ರೀತಿಯ ಹೆಮ್ಮೆಯ
ವಿಷಯ.
First published: March 11, 2018, 3:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading