• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಧಾರವಾಡ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳ ವಶ; ಓರ್ವ ಆರೋಪಿಯ ಬಂಧನ

ಧಾರವಾಡ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕ ವಸ್ತುಗಳ ವಶ; ಓರ್ವ ಆರೋಪಿಯ ಬಂಧನ

ವಶಪಡಿಸಿಕೊಂಡ ಸ್ಪೋಟಕ ವಸ್ತುಗಳು

ವಶಪಡಿಸಿಕೊಂಡ ಸ್ಪೋಟಕ ವಸ್ತುಗಳು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಶಂಕರಗೌಡ ಶಿವನಗೌಡ ಗೌಡ್ರನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದೆಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು

  • Share this:

ಧಾರವಾಡ(ಮಾ.18): ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿಡುತ್ತಿರುವವರ ಮೇಲೆ‌‌ ಪೊಲೀಸ್ ಇಲಾಖೆ ಹದ್ದಿನ‌ಕಣ್ಣು‌ ಇಟ್ಟಿದೆ. ಆದ್ರೆ ಕೆಲವರು ಪೊಲೀಸ್ ಇಲಾಖೆಯ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಲು ಮುಂದಾಗಿದ್ದಾರೆ. ಹೌದು, ಧಾರವಾಡ ತಾಲೂಕಿನ ಅಮ್ಮಿನಭಾವಿಯ ಗ್ರಾಮದ ಹೊರವಲಯದಲ್ಲಿರುವ ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್‍ನಲ್ಲಿ ಅಕ್ರಮವಾಗಿ ಹಾಗೂ ಅನಧಿಕೃತವಾಗಿ  ಸಂಗ್ರಹಿಸಿ ಇಟ್ಟಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಮಾರ್ಚ್ 15 ರ ರಂದು ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ ವಿ ಸತಾರೇ ಅವರ ನೇತೃತ್ವದಲ್ಲಿ  ಪೊಲೀಸ್ ಸಿಬ್ಬಂದಿಗಳು ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಹೊರವಲಯದಲ್ಲಿರುವ ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಯಾವುದೇ ದಾಖಲಾತಿಗಳಿಲ್ಲದೆ ಅಕ್ರಮವಾಗಿ ಹಾಗೂ ಅನಧಿಕೃತವಾಗಿ  ಸಂಗ್ರಹಿಸಿ ಇಟ್ಟಿದ್ದ 9 ಬಾಕ್ಸ್​​ನಲ್ಲಿ ಇದ್ದ 1650 ಜಿಲೆಟಿನ್ ಕಡ್ಡಿಗಳನ್ನು ಮತ್ತು  ಕಟ್ಟಿಗೆ ಬಾಕ್ಸ್​ನಲ್ಲಿದ್ದ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.


ಶಿವರಾಮ ಕಾರಂತ ಬಡಾವಣೆ ನಿರ್ಮಾಣ ಯೋಜನೆ; ಸುಪ್ರೀಂ ಕೋರ್ಟ್ ಆದೇಶಕ್ಕೆ ಬದ್ಧ ಎಂದ ಎಸ್​.ಆರ್​. ವಿಶ್ವನಾಥ್


ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಲಂ 9(ಬಿ)(1)(ಬಿ) ಹಾಗೂ ಸಹ ಕಲಂ 5 ಎಕ್ಸಪ್ಲೋಜಿವ್ ಆ್ಯಕ್ಟ್ 1884ರ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಡಿ.ಬಿ.ಮಾಸೂರ ಸ್ಟೋನ್ ಕ್ರಷಿಂಗ್ ಇಂಡಸ್ಟ್ರಿಸ್ ಮಾಲೀಕರಾದ ಧಾರವಾಡದ ದಯಾನಂದ ಬಸವರಾಜ ಮಾಸೂರ, ಕ್ರಷರ್‍ದ ಕಾರಕೂನ ಆಗಿರುವ ಕರಡಿಗುಡ್ಡ ಗ್ರಾಮದ ಶಂಕರಗೌಡ ಶಿವನಗೌಡ ಗೌಡರ ಹಾಗೂ ಇವರಿಗೆ ಅನಧಿಕೃತವಾಗಿ ಸ್ಪೋಟಕ ವಸ್ತುಗಳನ್ನು ಪೂರೈಸಿದ್ದ ಬಾಗಲಕೋಟೆಯ ನವೀನಕುಮಾರ  ಎ. ವಾಲಿ ಅವರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ಶಂಕರಗೌಡ ಶಿವನಗೌಡ ಗೌಡ್ರನನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಿಬ್ಬರು ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದೆಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದರು. ಅಲ್ಲದೇ ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಶ್ರಮಿಸಿರುವ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಕ್ತ ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಲಾಗುವುದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಹೇಳಿದ್ದಾರೆ.


ಎಸ್.ಪಿ. ಪಿ.ಕೃಷ್ಣಕಾಂತ ಹಾಗೂ ಧಾರವಾಡ ಗ್ರಾಮೀಣ ಉಪವಿಭಾಗದ ಡಿವೈಎಸ್‍ಪಿ ಎಂ.ಬಿ.ಸಂಕದ ಅವರ ಮಾರ್ಗದರ್ಶನ ಮತ್ತು ಪೊಲೀಸ್ ಇನ್ಸಪೆಕ್ಟರ್‍ಗಳಾದ ವಿಜಯಕುಮಾರ ಬಿರಾದಾರ ಮತ್ತು ಶ್ರೀಧರ ವಿ ಸತಾರೇ ಅವರ ನೇತೃತ್ವದಲ್ಲಿ  ಪೊಲೀಸ್ ಸಿಬ್ಬಂದಿಗಳಾದ ರುದ್ರಪ್ಪ ಮರಡಿ, ಎನ್.ಬಿ.ಕಂಬೋಗಿ, ಶರೀಪ್ ಎಂ. ಹಗೇದ, ಎಚ್.ಬಿ.ಐಹೋಳೆ, ರಮೇಶ ಕಟ್ಟಿ ಹಾಗೂ ಅಬ್ದುಲ್ ಕಾಕರ ಅವರು ಸ್ಪೋಟಕ ವಸ್ತುಗಳ ಪತ್ತೆ ಮತ್ತು ವಶಕ್ಕೆ ಪಡೆಯುವ ದಾಳಿಯಲ್ಲಿ ಭಾಗವಹಿಸಿದ್ದರು.

top videos
    First published: