• Home
  • »
  • News
  • »
  • state
  • »
  • Dharawada: ರೈತರ ಖಾತೆಗಳಿಗೆ ಬ್ಯಾಂಕ್​ಗಳ ಬ್ಲಾಕ್ ಬರೆ; ಪರಿಹಾರ ಬಂದ್ರೂ ಡ್ರಾ ಮಾಡಲಾರದ ಸ್ಥಿತಿ!

Dharawada: ರೈತರ ಖಾತೆಗಳಿಗೆ ಬ್ಯಾಂಕ್​ಗಳ ಬ್ಲಾಕ್ ಬರೆ; ಪರಿಹಾರ ಬಂದ್ರೂ ಡ್ರಾ ಮಾಡಲಾರದ ಸ್ಥಿತಿ!

ರೈತರ ಖಾತೆ ಬ್ಲಾಕ್​

ರೈತರ ಖಾತೆ ಬ್ಲಾಕ್​

ಧಾರವಾಡ ಜಿಲ್ಲೆಯಲ್ಲಿ ವಿವಿಧ ಬ್ಯಾಂಕ್ ಗಳು ಸುಸ್ತಿ ಸಾಲಗಾರ ರೈತರ ಖಾತೆಗಳನ್ನು ಬ್ಲಾಕ್ ಮಾಡಿವೆ. ಇದರಿಂದಾಗಿ ರೈತರಿಗೆ ಪರಿಹಾರ ಬಂದರೂ ಡ್ರಾ ಮಾಡಲಾರದ ಸ್ಥಿತಿ ನಿರ್ಮಾಣವಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

  • Share this:

ಹುಬ್ಬಳ್ಳಿ (ನ.19): ಕೋವಿಡ್ (Covid 19) ಆಯ್ತು, ನೆರೆಯೂ ಬಂತು, ಇದರ ನಡುವೆ ಅತಿವೃಷ್ಟಿಯಿಂದ ರೈತ ನಲುಗಿ ಹೋಗಿದ್ದಾನೆ. ಇದು ಹೀಗಿರುವಾಗ ಬ್ಯಾಂಕ್ ಗಳ ಕಾರ್ಯವೈಖರಿಯಿಂದ ರೈತನ (Farmer) ಗಾಯದ ಮೇಲೆ ಬರೆ ಎಳೆದ ಸ್ಥಿತಿ ಧಾರವಾಡ (Dharawada) ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಸಾಲ ಮರುಪಾವತಿ ಮಾಡದ ರೈತರ ಖಾತೆಗಳನ್ನು ಬ್ಯಾಂಕ್ ಗಳು ಬ್ಲಾಕ್ ಮಾಡಿರೋದ್ರಿಂದಾಗಿ ಬ್ಯಾಂಕ್ (Bank) ಖಾತೆಗೆ ಬಂದಿರೋ ಪರಿಹಾರದ (Solution) ಹಣ ಕೊಳೆಯುತ್ತಾ ಬೀಳುವಂತಾಗಿದೆ. ಧಾರವಾಡ ಜಿಲ್ಲೆಯಲ್ಲಿ ದೇವರು ವರ ಕೊಟ್ರೂ ಪೂಜಾರಿ ವರ ಕೊಡದ ಸ್ಥಿತಿ ನಿರ್ಮಾಣವಾಗಿದೆ.


ರೈತರ ಜೊತೆ ಬ್ಯಾಂಕ್ ಅಧಿಕಾರಿಗಳ ಚೆಲ್ಲಾಟ


ರೈತರ ಜೊತೆ ಬ್ಯಾಂಕ್ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಸುಸ್ತಿ ಸಾಲಗಾರ ರೈತರ ಅಕೌಂಟ್ ಬ್ಲಾಕ್ ಮಾಡಿರೋ ಬ್ಯಾಂಕ್ ಗಳು ರೈತರೊಂದಿಗೆ ಚೆಲ್ಲಾಟವಾಡುತ್ತಿವೆ. ಬೆಳೆ ವಿಮೆ, ಬೆಳೆ ಪರಿಹಾರ ಬಂದ್ರೂ ಡ್ರಾ ಮಾಡುವಂತಿಲ್ಲ. ರೈತರ ಗಾಯದ ಮೇಲೆ ಬರೆ ಎಳೆಯೋ ಕೆಲಸವನ್ನು ಬ್ಯಾಂಕ್ ಗಳು ಮಾಡುತ್ತಿವೆ. ಬ್ಯಾಂಕ್ ಆಫ್ ಬರೋಡಾ ಸೇರಿ ಬಹುತೇಕ ಬ್ಯಾಂಕ್ ಗಳಲ್ಲಿ ಅಕೌಂಟ್ ಬ್ಲಾಕ್ ಮಾಡಲಾಗಿದೆ.


Dharawad Bank Farmer accounts have been blocked pvn
ರೈತರ ಖಾತೆ ಬ್ಲಾಕ್​


ಕೃಷಿ ಸಾಲ ತೆಗೆದುಕೊಂಡವರ ಖಾತೆ ಬ್ಲಾಕ್​


ಕೃಷಿ ಸಾಲ ತೆಗೆದುಕೊಂಡವರ ಖಾತೆಗಳನ್ನು ಬ್ಯಾಂಕ್ ಗಳು ಬ್ಲಾಕ್ ಮಾಡಿವೆ. ಅದರಲ್ಲಿಯೂ ಸಾಲ ಮರುಪಾವತಿಸದ ಸುಸ್ತಿದಾರರ ಖಾತೆಗಳು ಬ್ಲಾಕ್ ಆಗಿವೆ. ಅತಿವೃಷ್ಟಿ, ಬೆಳೆ ನಷ್ಟ ಪರಿಹಾರದ ಹಣ ಖಾತೆಗೆ ಬಂದ್ರೂ ಪ್ರಯೋಜನವಿಲ್ಲದಂತಾಗಿದೆ. ಅದನ್ನು ಡ್ರಾ ಮಾಡಿಕೊಳ್ಳಲು ಆಗದ ಅಸಹಾಯಕತೆಯಲ್ಲಿ ರೈತರಿದ್ದಾರೆ. ಪರಿಹಾರದ ಹಣ ಬಂದ್ರೂ ಬ್ಯಾಂಕ್ ಖಾತೆಯಲ್ಲಿಯೇ ಕೊಳೆಯುವಂತಾಗಿದೆ. ಆಕಡೆ ಬ್ಯಾಂಕ್ ಗಳು ಸಾಲದ ಮೊತ್ತಕ್ಕೂ ಸರಿದೂಗಿಸಿಕೊಳ್ಳದೆ, ಈಕಡೆ ರೈತರಿಗೂ ಕೊಡದೆ ಚೆಲ್ಲಾಟವಾಡಲಾರಂಭಿಸಿವೆ.


ರೈತರಿಗೆ ಬ್ಯಾಂಕ್​ಗಳ ಶಾಕ್


ಮೊದಲೇ ನಷ್ಟದಲ್ಲಿರೋ ರೈತರಿಗೆ ಬ್ಯಾಂಕ್ ಗಳ ಶಾಕ್ ಕೊಟ್ಟಿವೆ. ಸರ್ಕಾರದ ಪರಿಹಾರವನ್ನೂ ರೈತರ ಕೈಗೆ ಸೇರದಂತೆ ಮಾಡೋ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಬ್ಯಾಂಕ್ ಗಳ ಧೋರಣೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಸ್ತಿ ಸಾಲಗಾರರ ಖಾತೆಗಳ ಬ್ಲಾಕ್ ಮಾಡದಿರುವಂತೆ ನೂ್ಲ್ವಿ ಗ್ರಾಮದ ರೈತ ಹೇಮನಗೌಡ ಆಗ್ರಹಿಸಿದ್ದಾರೆ. ಪರಿಹಾರ ಮೊತ್ತವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಿರುವಂತೆ ರೈತರು ಒತ್ತಾಯಿಸಿದ್ದಾರೆ.


ಸುಸ್ತಿದಾರರ ಬ್ಯಾಂಕ್ ಖಾತೆಗಳು ಬ್ಲಾಕ್


ಈ ಕುರಿತು ನ್ಯೂಸ್ 18 ಕನ್ನಡಕ್ಕೆ ಪ್ರತಿಕ್ರಿಯಿಸಿರೋ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಅವರು, ತಾಂತ್ರಿಕ ಕಾರಣಗಳಿಂದಾಗಿ ಸುಸ್ತಿದಾರರ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿವೆ. ಆಯಾ ಬ್ಯಾಂಕ್ ಮ್ಯಾನೇಜರ್ ಗೆ ಭೇಟಿಯಾದ್ರೆ ಸರಿಮಾಡಲಾಗುತ್ತೆ. ಬೆಳೆ ಪರಿಹಾರ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳುವಂತಿಲ್ಲ  ರೈತರಿಗೆ ವಾಪಸ್ ಕೊಡುವಂತೆ ನಿರ್ದೇಶಿಸ್ತೇನೆ. ಹಾಗೊಂದು ವೇಳೆ ಸಾಲಕ್ಕೆ ಮುರಿದುಕೊಂಡಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.


ಇದನ್ನೂ ಓದಿ: Mangaluru: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ನಿಗೂಢ ಸ್ಫೋಟ; ಸ್ಥಳಕ್ಕೆ ಪೊಲೀಸ್ ಆಯುಕ್ತರ ಭೇಟಿ


ಬ್ಯಾಂಕ್ ಮ್ಯಾನೇಜರ್ ಭೇಟಿ ಮಾಡಿದ ರೈತರು


ಆದರೆ ಬ್ಯಾಂಕ್ ಮ್ಯಾನೇಜರ್ ಗಳನ್ನು ರೈತರು ಭೇಟಿಯಾದ್ರೂ ಕೆಲವರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ರೈತರೊಂದಿಗೆ ಕೆಲ ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿದ್ದಾರೆಂಬ ದೂರೂ ಬಂದಿದೆ. ಒಟ್ಟಾರೆ ಬ್ಯಾಂಕ್ ಗಳ ಸದ್ದಿಲ್ಲದ ಬ್ಲಾಕ್ ನಿಂದಾಗಿ ರೈತರು ಶಾಕ್ ಆಗಿದ್ದಾರೆ.

Published by:ಪಾವನ ಎಚ್ ಎಸ್
First published: